ಚಂಡೀಗಢ : ಪತ್ನಿ ಡಿವೋರ್ಸ್ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ ಗುರುಗ್ರಾಮ್‌ನಲ್ಲಿ ನಡೆದಿದೆ.
ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 36 ವರ್ಷದ ಸಂಜೀವ್ ಯಾದವ್ ಮೃತ ದುರ್ದೈವಿ. ಈತ ಡೆನ್ಸೊ ಕಂಪನಿಯಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಮೂಲತಃ ಅಮೃತಸರದವರಾದ ಸಂಜೀವ್, ಪತ್ನಿ ಮತ್ತು ಮಗನೊಂದಿಗೆ ಗುರುಗ್ರಾಮ್‌ನ ಸೂರತ್ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದ.
ಘಟನೆ ನಡೆದ ವೇಳೆ ಮನೆಯಲ್ಲಿ ಸಂಜೀವ್, ಅವರ ಪತ್ನಿ ಮನ್‌ಪ್ರೀತ್ ಕೌರ್ ಹಾಗೂ 7 ವರ್ಷದ ಮಗ ಮಾತ್ರ ಇದ್ದರು. ಸಂಜೀವ್ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ನಿಗೆ ತಡವಾಗಿ ಗೊತ್ತಾಗಿದೆ. ಬಳಿಕ ಮೃತದೇಹವನ್ನು ಕೆಳಗೆ ಇಳಿಸಲು ಆಕೆ ನೆರೆಯವರನ್ನು ಕೂಗಿದ್ದಾಳೆ. ನಂತರ ಸಂಜೀವ್ ಅವರ ಕುಟುಂಬದವರಿಗೆ ಮಾಹಿತಿ ನೀಡಿದ್ದಾಳೆ. ಇದೇ ವೇಳೆ ಮನೆಯಲ್ಲಿದ್ದ 7 ವರ್ಷದ ಮಗ ತಂದೆ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ನೋಡಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾನೆ.ಇದನ್ನೂ ಓದಿ: ಗ್ಲಾಸ್ಗೋದಲ್ಲಿ ಭಾರತಕ್ಕೆ ಅವಮಾನ? – ಟಿಶ್ಯೂ ಮೇಲೆ ಮ್ಯಾಪ್ ತಪ್ಪಾಗಿ ಮುದ್ರಿಸಿದ್ದಕ್ಕೆ ರೆಸ್ಟೋರೆಂಟ್ ವಿರುದ್ದ ಕ್ರಿಡಾಪಟುಗಳು ಗರಂ
ಪತ್ನಿಯ ವಿರುದ್ದ ಗಂಭೀರ ಆರೋಪ ಮಾಡಿರುವ ಸಂಜೀವ್ ಸಹೋದರಿ, ಅವರಿಬ್ಬರ ನಡುವೆ ಹಲವು ದಿನಗಳಿಂದ ಕಲಹ ನಡೆಯುತ್ತಿತ್ತು. ವಿಚ್ಛೇದನ ಕೇಳಿದ್ದರಿಂದ ಸಂಜೀವ್ ಮಾನಸಿಕವಾಗಿ ಕುಗ್ಗಿದ್ದ. ಇದೇ ಕಾರಣದಿಂದ ಆತ ಆತ್ಮಹತ್ಯೆ ಮಾಡಿಕೊಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕುಟುಂಬದ ದೂರಿನ ಆಧಾರದ ಮೇಲೆ ಪೊಲೀಸರು ಮನ್‌ಪ್ರೀತ್‌ನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿನ ನಿಖರ ಕಾರಣ ಮತ್ತು ಘಟನೆಯ ಎಲ್ಲಾ ಆಯಾಮಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.ಇದನ್ನೂ ಓದಿ: ಮೋದಿಯಿಂದ ನನ್ನ ಮಗಳಿಗೆ ಜೀವದಾನ ಸಿಕ್ಕಿದೆ: ಕ್ಷಮಿಸಿದ್ದಕ್ಕೆ ಪ್ರಧಾನಿಗೆ ಧನ್ಯವಾದ ತಿಳಿಸಿದ ಬಾಲಕಿ ತಾಯಿ
