ಕಾಲಿವುಡ್ ಸ್ಟಾರ್ ಅಜಿತ್ ಕುಮಾರ್ ತೆರೆಯ ಮೇಲೆ ಮಾತ್ರ ಹೀರೋ ಅಲ್ಲ. ತೆರೆಮರೆಯಲ್ಲಿ ಕೂಡ ರಿಯಲ್ ಹೀರೋ ಎಂಬುದನ್ನ ಅಜಿತ್ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. 47ನೇ ತಮಿಳುನಾಡು ರಾಜ್ಯ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ, 4 ಚಿನ್ನದ ಪದಕವನ್ನ ಅಜಿತ್ ಗೆದ್ದಿದ್ದಾರೆ.
ತಮಿಳು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದ ನಟ ಅಜಿತ್ ಕುಮಾರ್ಗೆ ತಮಿಳುನಾಡಿನ ರಾಜ್ಯ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ನಟ ಅಜಿತ್ ಮತ್ತು ತಂಡ ಭಾಗವಹಿಸಿ, ನಾಲ್ಕು ಚಿನ್ನ ಮತ್ತು ಎರಡು ಕಂಚಿನ ಪದಕವನ್ನು ಗೆದ್ದಿದ್ದಾರೆ. ರಾಜ್ಯ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಅಜಿತ್ ಆ್ಯಂಡ್ ಟೀಮ್ ಸೆಂಟರ್ ಫೈರ್ ಪಿಸ್ತೂಲ್ ಮೆನ್, ಸ್ಟ್ಯಾಂಡರ್ಡ್ ಪಿಸ್ತೂಲ್ ಮಾಸ್ಟರ್ ಮೆನ್, 50 ಮೀಟರ್ ಪಿಸ್ತೂಲ್ ಮಾಸ್ಟರ್ ಮೆನ್, ಸ್ಟ್ಯಾಂಡರ್ಡ್ ಪಿಸ್ತೂಲ್ ಮಾಸ್ಟರ್ ಮೆನ್, ಹೀಗೆ ಈ ನಾಲ್ಕು ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇದನ್ನೂ ಓದಿ:ಅಫೇರ್ ಆರೋಪ ನಂತರ `ಅಣ್ಣ-ತಂಗಿ’ ಆಗಿಬಿಟ್ರಾ ನರೇಶ್-ಪವಿತ್ರಾ!
ಜೊತೆಗೆ 50 ಮೀಟರ್ ಉಚಿತ ಪಿಸ್ತೂಲ್ ಮೆನ್, ಸ್ಟ್ಯಾಂಡರ್ಡ್ ಪಿಸ್ತೂಲ್ ಪುರುಷರ ವಿಭಾಗದಲ್ಲಿ 2 ಕಂಚಿನ ಪದಕವನ್ನ ಅಜಿತ್ ಮತ್ತು ತಂಡ ಗೆದ್ದಿದ್ದಾರೆ. ತಿರುಚ್ಚಿ ರೈಫೆಲ್ ಕ್ಲಬ್ನಲ್ಲಿ ಈ ಚಾಂಪಿಯನ್ಶಿಪ್ ನಡೆದಿದ್ದು, ನೆಚ್ಚಿನ ನಟನನ್ನು ನೋಡಲು ಅಪಾರ ಅಭಿಮಾನಿಗಳು ಜಮಾಯಿಸಿದ್ದರು. ಇನ್ನು ಕಳೆದ 46ನೇ ತಮಿಳುನಾಡು ರಾಜ್ಯ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಅಜಿತ್ ಕುಮಾರ್ ಭಾಗವಹಿಸಿ, ಸಾಕಷ್ಟು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.
Live Tv
[brid partner=56869869 player=32851 video=960834 autoplay=true]