Connect with us

Cricket

ಇಂದೋರ್ ಭಾರತದ ಪಾಲಿಗೆ ಅದೃಷ್ಟದ ತಾಣ ಅನ್ನೋದು ಮತ್ತೆ ಸಾಬೀತಾಯ್ತು!

Published

on

ಇಂದೋರ್: ಆಸ್ಟ್ರೇಲಿಯಾವನ್ನು 5 ವಿಕೆಟ್ ಗಳಿಂದ ಬಗ್ಗು ಪಡೆಯುವ ಮೂಲಕ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂ ಭಾರತದ ಪಾಲಿಗೆ ಅದೃಷ್ಟದ ತಾಣ ಎನ್ನುವುದು ಮತ್ತೆ ಸಾಬೀತಾಗಿದೆ.

ಈ ಮೂಲಕ ಒಂದೇ ಕ್ರೀಡಾಂಗಣದಲ್ಲಿ ಸತತ 5 ಪಂದ್ಯವನ್ನು ಗೆದ್ದ ದಾಖಲೆಗೆ ಭಾರತ ಪಾತ್ರವಾಗಿದೆ. ಇದುವರೆಗೆ ಭಾರತ ಯಾವುದೇ ಕ್ರೀಡಾಂಗಣದಲ್ಲಿ ಸತತ 5 ಪಂದ್ಯವನ್ನು ಗೆದ್ದಿರುವ ದಾಖಲೆಗಳಿಲ್ಲ.

ಶಾರ್ಜಾ, ಮೀರ್ ಪುರ, ದೆಹಲಿ ಹಾಗೂ ವಿಶಾಖಪಟ್ಟಣಂನಲ್ಲಿ ಭಾರತ ಸತತ 4 ಪಂದ್ಯಗಳನ್ನು ಗೆದ್ದಿತ್ತು. ಇದರ ಜೊತೆಗೆ ಟೀಂ ಇಂಡಿಯಾ ಸತತ 4 ಪಂದ್ಯಗಳನ್ನು ಆಸ್ಟ್ರೇಲಿಯಾ ವಿರುದ್ಧ ಗೆದ್ದಂತಾಗಿದು. ಇದು ಕೂಡಾ ಭಾರತದ ಪಾಲಿಗೆ ದಾಖಲೆ.

ಈ ಹಿಂದೆ  ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳನ್ನು ಗೆದ್ದಿದ್ದರೆ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಲಾ ಒಂದೊಂದು ಗೆಲುವು ಒಲಿದಿತ್ತು. ಈಗ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲೂ ಗೆಲ್ಲುವ ಮೂಲಕ ತನ್ನ ಅಜೇಯ ಗೆಲುವಿನ ಸರಣಿಯನ್ನು ಟೀಂ ಇಂಡಿಯಾ ಮುಂದುವರಿಸಿದೆ.

2006ರಲ್ಲಿ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಜಯ ಸಾಧಿಸಿದ್ದರೆ, 2008ರಲ್ಲಿ ಮತ್ತೆ ಇಂಗ್ಲೆಂಡ್ ವಿರುದ್ಧ 54 ರನ್ ಗಳ ಜಯವನ್ನು ಸಾಧಿಸಿತ್ತು. 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 153 ರನ್ ಗಳಿಂದ ಗೆದ್ದಿದ್ದರೆ, 2015 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 22 ರನ್ ಗಳಿಂದ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು.

ಜಸ್‍ಪ್ರೀತ್ ಬುಮ್ರಾ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರೆ, ಚಹಲ್ ಮತ್ತು ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.

Click to comment

Leave a Reply

Your email address will not be published. Required fields are marked *

www.publictv.in