BollywoodCinemaKarnatakaLatestMain Post

ಭಾರತೀಯ ಸೇನೆಯನ್ನು ಅವಮಾನಿಸಿದ ನಟಿ ರಿಚಾ ಚೆಡ್ಡಾ – ದೆಹಲಿಯಲ್ಲಿ ದೂರು ದಾಖಲು

ಭಾರತೀಯ ಸೇನೆಯ ವಿಚಾರದಲ್ಲಿ ಟ್ವೀಟ್ ಮಾಡಿ ಬಾಲಿವುಡ್ ನಟಿ ರಿಚಾ ಚೆಡ್ಡಾ ವಿವಾದದ‌‌ ಕೇಂದ್ರ ಬಿಂದುವಾಗಿದ್ದು, ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ದೇಶದ ಸೈನಿಕರಿಗೆ ಅಗೌರವ ತೋರಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ನಟಿಗೆ ಚಳಿ ಬಿಡಿಸುತ್ತಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯಲು ಭಾರತೀಯ ಸೇನೆ ಸನ್ನದ್ದವಾಗಿದೆ ಎಂದು ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಟ್ಯಾಗ್ ಮಾಡಿದ್ದ ನಟಿ ಗಾಲ್ವಾನ್ ಹಾಯ್ ಹೇಳುತ್ತಿದೆ ಎಂದು ಬರೆದುಕೊಂಡಿದ್ದರು. ಅವರ ಬರವಣಿಗೆ ಸೇನೆಗೆ ತೋರುವ ಅಗೌರವ ಎಂದು ಬಣ್ಣಿಸಲಾಗುತ್ತಿದೆ. ಹಾಗಾಗಿಯೇ ನಟಿಯ ವಿರುದ್ಧ ದೇಶಭಕ್ತರು ತಿರುಗಿ ಬಿದ್ದಿದ್ದಾರೆ.

ರಿಚಾ ಚೆಡ್ಡಾ ಹೀಗೆ ಟ್ವೀಟ್ ಮಾಡುತ್ತಿದ್ದಂತೆಯೇ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಗಾಲ್ವಾನ್ ಘರ್ಷಣೆಯಲ್ಲಿ ಜೀವತೆತ್ತ ಸೈನಿಕರಿಗೆ ನಟಿ ಅವಮಾನ ಮಾಡಿದ್ದಾರೆ ಎಂದು ಕೆಲವು ಆರೋಪಿಸಿದರೆ, ಇನ್ನು ಕೆಲವರು ಇದು ಭಾರತೀಯ ಸೇನೆಯನ್ನು ಅವಮಾನ ಮಾಡುವ ಪ್ರಯತ್ನ ಎಂದು ಜರಿದಿದ್ದಾರೆ. ಅಲ್ಲದೇ, ಇಂತವರನ್ನು ಸುಮ್ಮನೆ ಬಿಡಬಾರದು ಎಂದು ಕೆಲವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ಕಾಂತಾರ `ತುಳು’ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್: ರಿಲೀಸ್ ಡೇಟ್ ಔಟ್

ಟ್ವೀಟ್ ಆಧಾರದ ಮೇಲೆ ನಟಿ ವಿರುದ್ಧ ದೂರು ದಾಖಲಾಗಿದೆ. ಭಾರತೀಯ ಸೇನೆಯನ್ನು ಅಪಹಾಸ್ಯ ಮಾಡಿದ ರಿಚಾ ಅವರ ವಿವಾದಾತ್ಮಕ ಟ್ವೀಟ್ ವಿರುದ್ಧ ವಕೀಲ ವಿನೀತ್ ಜಿಂದಾಲ್ ಅವರು ಸಿಪಿ ದೆಹಲಿಗೆ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇತ್ತ ಹೇಳಿಕೆ ವಿವಾದಾತ್ಮಕ ಸ್ವರೂಪ ಪಡೆಯುತ್ತಿದ್ದಂತೆ ರಿಚಾ ಚೆಡ್ಡಾ ಟ್ವಿಟ್ಟರ್ ನಲ್ಲಿ ರಿಪ್ಲೆಗಳನ್ನು ಮ್ಯೂಟ್ ಮಾಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button