ದುಬಾರಿ ಸಂಭಾವನೆ ಕೇಳಿ, ಅವಕಾಶ ಕಳೆದುಕೊಂಡ `ವಜ್ರಕಾಯ’ ನಟಿ ನಭಾ ನಟೇಶ್

Advertisements

`ವಜ್ರಕಾಯ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಚೆಲುವೆ ನಭಾ ನಟೇಶ್ ನಂತರ ಟಾಲಿವುಡ್‌ನಲ್ಲಿ ಗುರುತಿಸಿಕೊಂಡರು. ಇದೀಗ ದುಬಾರಿ ಸಂಭಾವನೆ ಕೇಳಿರುವ ವಿಚಾರಕ್ಕೆ ನಭಾ ನಟೇಶ್ ಸುದ್ದಿಯಲ್ಲಿದ್ದಾರೆ. ಯಾವುದೇ ಅವಕಾಶ ಇಲ್ಲದೆ ಖಾಲಿ ಕೂತಿದ್ದಾರಂತೆ.

Advertisements

ಶಿವರಾಜ್‌ಕುಮಾರ್‌ಗೆ ನಾಯಕಿಯಾಗುವ ಮೂಲಕ ಚಂದನವನಕ್ಕೆ ಪರಿಚಿತರಾದ ನಟಿ ನಭಾ ನಟೇಶ್ ನಂತರ ಕನ್ನಡದ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ನಟಿಸಿದ ಮೊದಲ ಚಿತ್ರದಲ್ಲೇ ನಭಾ ಸೈ ಎನಿಸಿಕೊಂಡಿದ್ದರು. ಬಳಿಕ ತೆಲುಗಿನತ್ತ ಮುಖ ಮಾಡಿದ್ದರು. `ಇಸ್ಮಾರ್ಟ್ ಶಂಕರ್’ ಚಿತ್ರದ ಯಶಸ್ಸಿನ ನಂತರ ಸಂಭಾವನೆ ಹೆಚ್ಚಿಸಿಕೊಂಡಿದ್ದ ನಭಾಗೆ ಈಗ ಸಿನಿಮಾಗಳೇ ಇಲ್ವಂತೆ. ಇದನ್ನೂ ಓದಿ:ಬಿಗ್ ಬಾಸ್: ಹೋಟೆಲ್ ಊಟದತ್ತ ವಾಲಿದ ಜಶ್ವಂತ್- ನಂದು ಕಣ್ಣೀರು

Advertisements

`ಇಸ್ಮಾರ್ಟ್ ಶಂಕರ್’ ಚಿತ್ರದ ಭರ್ಜರಿ ಯಶಸ್ಸಿನ ನಂತರ ನಭಾಗೆ ತೆಲುಗಿನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಟ್ಟಿತ್ತು. ಇದಾದ ಬಳಿಕ ಒಂದೊAದು ಚಿತ್ರಕ್ಕೂ ಒಂದು ಕೋಟಿ ಬೇಡಿಕೆ ಇಡುತ್ತಿದ್ದರಂತೆ. ಇದಾದ ಬಳಿಕ ನಭಾ ನಟಿಸಿದ ಸಾಕಷ್ಟು ಚಿತ್ರಗಳು ಗಲ್ಲಾಪೆಟ್ಟಿಗೆ ಫ್ಲಾಪ್ ಆಗಿದೆ. ಇದೀಗ ನಿರ್ಮಾಪಕರು ತಮ್ಮ ಸಿನಿಮಾಗೆ ನಭಾಗೆ ಅವಕಾಶ ಕೊಡಲು ಹಿಂದೆ ಸರಿಯುತ್ತಿದ್ದಾರೆ.

Advertisements

ದುಬಾರಿ ಸಂಭಾವನೆ ಕೇಳಿ, ತಮಗೆ ಸಿಕ್ಕ ಅವಕಾಶಗಳನ್ನ ನಭಾ ನಟೇಶ್ ಕಳೆದುಕೊಂಡಿದ್ದಾರೆ ಎಂಬ ಟಾಲಿವುಡ್ ಗಲ್ಲಿಯಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಇದೀಗ ತಮ್ಮ ಲಿಸ್ಟ್ನಲ್ಲಿ ಯಾವುದೇ ಸಿನಿಮಾ ಇಲ್ಲದೆ ನಭಾ ನಟೇಶ್ ಖಾಲಿ ಕೂತಿದ್ದಾರೆ. ತಮ್ಮ ಸಂಭಾವನೆಯಲ್ಲಿ ರಾಜಿ ಆಗಿ, ಮುಂದಿನ ದಿನಗಳಲ್ಲಿ ಭಿನ್ನ ಪಾತ್ರಗಳಲ್ಲಿ ನಭಾ ಕಾಣಿಸಿಕೊಳ್ಳುತ್ತಾರಾ ಅಂತಾ ಕಾದುನೋಡಬೇಕಿದೆ.

Live Tv

Advertisements
Exit mobile version