Bengaluru CityCinemaKarnatakaLatestMain PostSandalwood

ಬಿಗ್ ಬಾಸ್: ಹೋಟೆಲ್ ಊಟದತ್ತ ವಾಲಿದ ಜಶ್ವಂತ್- ನಂದು ಕಣ್ಣೀರು

ಬಿಗ್ ಬಾಸ್ ಮನೆಯಲ್ಲಿ ಈ ಒಂದಿಷ್ಟು ಟೀಂಗಳಾಗಿವೆ. ಇಡೀ ದಿನ ಮನೆಯಲ್ಲಿಯೇ ಇರಬೇಕಾದ ಕಾರಣ ತಮ್ಮ ತಮ್ಮ ಯೋಚನಾ ಲಹರಿಗೆ ಮ್ಯಾಚ್ ಆಗುವವರನ್ನು ಫ್ರೆಂಡ್ಸ್ ಮಾಡಿಕೊಂಡಿಕೊಂಡಿದ್ದಾರೆ. ಇದೀಗ ಸಾನ್ಯ ಜೊತೆಗಿನ ಜಶ್ವಂತ್ ಫ್ರೆಂಡ್‌ಶಿಪ್ ನಂದು ಮುನಿಸಿಗೆ ಕಾರಣವಾಗಿದೆ.

ದೊಡ್ಮನೆಯಲ್ಲಿ ಸಾನ್ಯ, ರೂಪೇಶ್, ನಂದು, ಜಶ್ವಂತ್, ಒಂದು ಟೀಂ ಆಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್‌ಗೆ ಎಂಟ್ರಿ ಕೊಡುವಾಗ ಜೋಡಿಯಾಗಿಯೇ ಬಂದಿದ್ದ ನಂದು ಮತ್ತು ಜಶ್ವಂತ್ ನಡುವೆ ಇದೀಗ ಮನಸ್ತಾಪ ಉಂಟಾಗಿದೆ. ಸಾನ್ಯ ಜತೆ ಜಶ್ವಂತ್ ಕ್ಲೋಸ್ ಆಗಿ ಮೂವ್ ಆಗಿರೋದನ್ನ ನೋಡಿ, ನಂದು ತನ್ನ ಬಾಯ್‌ಫ್ರೆಂಡ್‌ಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಾನ್ಯ ಮತ್ತು ರೂಪೇಶ್ ಕಪಲ್ ಆಗಿರೋದ ಅಥವಾ ನಾವು ಕಪಲ್ ಆ ಎಂದು ಜಶ್ವಂತ್ ಜತೆ ನಂದು ಮಾತನಾಡಿದ್ದಾರೆ. ಸಾನ್ಯ ಜೊತೆ ಸಖತ್ ಸಲಿಗೆಯಿಂದ ಇರೋದನ್ನ ನೋಡಿ, ನೋಡುವವರು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ. ನೀವು ರೀತಿ ಕಾಣಿಸಿಕೊಳ್ಳಬೇಡಿ ಎಂದು ನಂದು ಜಶ್ವಂತ್‌ಗೆ ಹೇಳಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ನಾಳೆ ಸಿಹಿ ಸುದ್ದಿ ಕೊಡ್ತಾರಂತೆ ‘ಸ್ಯಾಂಡಲ್ ವುಡ್ ಕ್ವೀನ್’ ರಮ್ಯಾ

ಈ ವೇಳೆ ನೀನು ರೂಪೇಶ್ ಜತೆ ಕ್ಲೋಸ್ ಆಗಿದ್ಯಾ ಆದರೆ ನನಗೇನು ಸಮಸ್ಯೆ ಇಲ್ಲ ಎಂಬ ಜಶ್ವಂತ್ ಮಾತನಾಡಿದ್ದಾರೆ. ಈಗ ಎನು ಪ್ರೂವ್ ಮಾಡೋಕೆ ಟ್ರೈ ಮಾಡುತ್ತಿದ್ಯಾ ಎಂದು ನಂದು ಜಶ್ವಂತ್‌ ವಿರುದ್ಧ ಫುಲ್‌ ಗರಂ ಆಗಿದ್ದಾರೆ. ಸಾನ್ಯ ಜೊತೆಗಿನ ಜಶ್ವಂತ್ ಅತಿಯಾದ ಸಲುಗೆ ನೋಡಿ ನಂದು ಕಣ್ಣೀರು ಹಾಕಿದ್ದಾರೆ. ಜಶ್ವಂತ್‌ ಮತ್ತು ಸಾನ್ಯ ಫ್ರೆಂಡ್‌ಶಿಪ್‌ ಇದೀಗ ನಂದು ನಿದ್ದೆಗೆಡಿಸಿದೆ.

Live Tv

Leave a Reply

Your email address will not be published.

Back to top button