– ಒಂದೂವರೆ ಕೆಜಿ ತೂಕದ 360 ತಾಮ್ರದ ನಾಣ್ಯಗಳು
ರಾಯಚೂರು: ಮಾನ್ವಿಯ ಅಂದ್ರೂನ್ ಕಿಲ್ಲಾ (Androon Quilla) ಕೋಟೆ ಪ್ರದೇಶದಲ್ಲಿ ಅಚ್ಚರಿ ಘಟನೆಯೊಂದು ಸಂಭವಿಸಿದೆ. ಮನೆ ನಿರ್ಮಾಣಕ್ಕೆ ಮಣ್ಣು ಅಗೆಯುತ್ತಿದ್ದಾಗ ಮಣ್ಣಿನ ಗಡಿಗೆಯಲ್ಲಿ ಸುಮಾರು 700 ವರ್ಷಗಳಷ್ಟು ಹಿಂದಿನ ನಿಧಿ (Treasure) ಪತ್ತೆಯಾಗಿದೆ.
ಮಣ್ಣಿನ ಗಡಿಗೆಯಲ್ಲಿ ಸುಮಾರು 700 ವರ್ಷಗಳಷ್ಟು ಹಿಂದಿನ ತಾಮ್ರದ ನಾಣ್ಯಗಳು ಪತ್ತೆಯಾಗಿವೆ. ವಿಜಯನಗರ ಅರಸರು ನಿರ್ಮಿಸಿದ ಕೋಟೆ ಪ್ರದೇಶದಲ್ಲಿ ಒಂದೂವರೆ ಕೆಜಿ ತೂಕದ 360 ನಾಣ್ಯಗಳು ಪತ್ತೆಯಾಗಿವೆ. ಇದನ್ನೂ ಓದಿ: ಮಂಜಿನ ನಗರಿ ಮಡಿಕೇರಿ ದಸರಾಕ್ಕೆ 2 ಕೋಟಿ ಘೋಷಿಸಿದ ರಾಜ್ಯ ಸರ್ಕಾರ

ನಾಣ್ಯಗಳ ಮೇಲೆ ಉರ್ದು, ಪರ್ಷಿಯನ್, ಅರೆಬಿಕ್ ಭಾಷೆಯ ಬರಹಗಳಿದ್ದು, ಮೇಲ್ನೋಟಕ್ಕೆ ಬಹಮನಿ ಸುಲ್ತಾನರ ಕಾಲದಲ್ಲಿ ಬಳಕೆಯಲ್ಲಿದ್ದ ನಾಣ್ಯಗಳು ಅನ್ನೋ ಮಾಹಿತಿ ಇದೆ. ಇದನ್ನೂ ಓದಿ: ಕರಾವಳಿಗರ ದಶಕದ ಕನಸು ನನಸು – ಪಾಲಕ್ಕಾಡ್‌ನಿಂದ ಮೈಸೂರು ವಿಭಾಗಕ್ಕೆ ಮಂಗಳೂರು ರೈಲ್ವೆ ಸೇರ್ಪಡೆ

ಪತ್ತೆಯಾಗಿದ್ದು ಹೇಗೆ?
ಶೈಜಾದಿ ಎಂಬುವವರ ಮನೆ ಬುನಾದಿಗೆ ಮಣ್ಣು ತುಂಬಲು ಕೋಟೆ ಪ್ರದೇಶದಲ್ಲಿ ನೆಲೆ ಅಗೆಯಲಾಗುತ್ತಿತ್ತು. ಹುಸೇನ್ ಬಾಷಾ, ಸತ್ತರ್, ರುಕ್ಮನ್ ಎಂಬುವವರು ನೆಲ ಅಗೆಯುವಾಗ ನಾಣ್ಯಗಳು ಪತ್ತೆಯಾಗಿದೆ. ಸದ್ಯ ನಾಣ್ಯಗಳು ಮಾನ್ವಿ ಪೊಲೀಸರ ವಶದಲ್ಲಿವೆ. ಸ್ಥಳಕ್ಕೆ ಮಾನ್ವಿ ತಹಶೀಲ್ದಾರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

