ನವದೆಹಲಿ: ಯೆಮೆನ್ ಮತ್ತು ಸೊಮಾಲಿಯಾ ಕರಾವಳಿಯ ಬಳಿ ಎರಡು ಪ್ರತ್ಯೇಕ ಘಟನೆಗಳಲ್ಲಿ, ಕಡಲ್ಗಳ್ಳರು ಎರಡು ವಾಣಿಜ್ಯ ಹಡಗುಗಳನ್ನ ಹೈಜಾಕ್ (Ships Hijacked) ಮಾಡಿರುವ ಘಟನೆ ನಡೆದಿದೆ.
ಎರಡು ಹಡಗುಗಳಲ್ಲಿ 22 ಭಾರತೀಯ ಪ್ರಜೆಗಳು (Indians) ಸೇರಿದಂತೆ ಒಟ್ಟು 30 ಸಿಬ್ಬಂದಿ ಇದ್ದರು. ಘಟನೆಯನ್ನ ದೃಢಪಡಿಸುತ್ತಾ, ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್, ಅಪಹರಿಸಲಾದ ಎರಡೂ ಹಡಗುಗಳು ವಿದೇಶಿ ಧ್ವಜವನ್ನು ಹೊಂದಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೆಲೆಟ್ ಗನ್ ಬಳಕೆ – ರಾಹುಲ್ ಗಾಂಧಿ ಪ್ರತಿಭಟನೆಗೆ ಮಣಿದ ದೆಹಲಿ ಪೊಲೀಸ್; FIR ದಾಖಲು
ಎರಡು ಹಡಗುಗಳಲ್ಲಿ 22 ಭಾರತೀಯ ಪ್ರಜೆಗಳು
ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈಸ್ವಾಲ್ ಅವರು, 16 ಭಾರತೀಯ ಪ್ರಜೆಗಳು ಮೊದಲ ಹಡಗಿನಲ್ಲಿ (MT ಸಿಬು 1) ಇದ್ದಾರೆ ಮತ್ತು 6 ಭಾರತೀಯ ಪ್ರಜೆಗಳು 2ನೇ ಹಡಗಿನಲ್ಲಿ (M/V Lutuf) ಇದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
MEA ಪ್ರಕಾರ, ಇಲ್ಲಿಯವರೆಗೆ ಸ್ವೀಕರಿಸಿದ ಮಾಹಿತಿಯ ಪ್ರಕಾರ, ಅಪಹರಿಸಲಾದ ಹಡಗುಗಳಲ್ಲಿರುವ ಎಲ್ಲಾ 22 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ. ಭಾರತೀಯರ ಸುರಕ್ಷತೆ ಮತ್ತು ಯೋಗಕ್ಷೇಮ ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರ ಸಂಬಂಧಿತ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಸಕ್ಕರೆ ಬೆಲೆ ಏರಿಕೆಗೂ ಎಥೆನಾಲ್ ಬಳಕೆಗೂ ಸಂಬಂಧವಿಲ್ಲ: ಕೇಂದ್ರ ಸ್ಪಷ್ಟನೆ

