Connect with us

Bengaluru City

ರಕ್ಷಿತ್ ಶೆಟ್ಟಿ, ರಶ್ಮಿಕಾ ನಡುವೆ ಲವ್ ಆಗಿದ್ದು ಹೇಗೆ?-ಇಲ್ಲಿದೆ ಪೂರ್ಣ ಲವ್ ಸ್ಟೋರಿ

Published

on

ಬೆಂಗಳೂರು: ಸ್ಯಾಂಡ್‍ಲ್‍ವುಡ್‍ನ ಕ್ಯೂಟ್ ಜೋಡಿಗಳಾದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಲವ್ ಮಾಡುತ್ತಿರೋ ವಿಚಾರ ಈಗಾಗಲೇ ಅಧಿಕೃತವಾಗಿ ಪ್ರಕಟವಾಗಿದೆ. ಈಗ ತಮ್ಮಿಬ್ಬರ ಲವ್ ಹೇಗಾಯ್ತು ಎನ್ನುವುದನ್ನು ರಕ್ಷಿತ್ ಶೆಟ್ಟಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾತನಾಡಿದ ಅವರು, ನಮ್ಮಿಬ್ಬರ ಮಧ್ಯೆ ಲವ್ ಹೇಗಾಯ್ತು ಎಂದು ಗೊತ್ತಿಲ್ಲ. ಅದನ್ನು ಹೇಗೆ ಹೇಳುವುದು ತಿಳಿಯುತ್ತಿಲ್ಲ ಎಂದರು.

ಈ ವೇಳೆ ನೀವು ಮತ್ತು ರಶ್ಮಿಕಾ ಅವರು ಲವ್ ಮಾಡುತ್ತಿರುವ ಬಗ್ಗೆ ನಾವು ಈ ಹಿಂದೆ ಸುದ್ದಿ ಪ್ರಸಾರ ಮಾಡುವ ನೀವು ನಗುವಿನ ಮೂಲಕ ಪ್ರತಿಕ್ರಿಯೆ ನೀಡಿದ್ರಿ. ಆಗ ನಿಮ್ಮ ನಗು ನಿಮ್ಮ ಮನಸಿನಲ್ಲಿ ಏನಿದೆ ಅನ್ನೋದು ಹೇಳುತಿತ್ತು ಅಂದಾಗ, ಹೌದು ನಮ್ಮ ಪ್ರೀತಿಗೆ ನೀವೇ ದಾರಿ ಮಾಡಿಕೊಟ್ಟಿದ್ದು. ಅಲ್ಲಿವರೆಗೂ ನಮ್ಮಿಬ್ಬರ ಮನಸ್ಸಿನಲ್ಲಿ ಪ್ರೀತಿ ಇತ್ತು. ಆದ್ರೆ ಇಬ್ಬರೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಪೋಷಕರ ಜೊತೆಗೂ ಮಾತನಾಡಿರಲಿಲ್ಲ. ಬಟ್ ನೀವು ಸುದ್ದಿ ಮಾಡಿದ ಮೇಲೆ ಇದನ್ನು ಜಾಸ್ತಿ ಮಾಡುವುದು ಬೇಡ. ಇನ್ನು ಜಾಸ್ತಿ ಜನ ಮಾತನಾಡುವ ಮೊದಲು ನಾವೇ ನಿರ್ಧಾರಕ್ಕೆ ಬಂದ್ವಿ. ಕೊನೆಗೆ ನಾನೇ ರಶ್ಮಿಕಾ ಪೋಷಕರ ಹತ್ತಿರ ಹೋಗಿ ಮಾತಾಡಿದೆ ಎಂದು ತಿಳಿಸಿದರು.

ಮಾವ ನೀಡಿರುವ ಗಿಫ್ಟ್ ಬಗ್ಗೆ ಪ್ರತಿಕ್ರಿಯಿಸಿ, ರಶ್ಮಿಕಾ ಅವರ ತಂದೆ 10 ದಿನಗಳ ಹಿಂದೆ ಖಡಗ ನೀಡಿದ್ದರು ಎಂದು ತಿಳಿಸಿದರು.

ರಶ್ಮಿಕಾ ವಿಶ್: “ನಾನು ಕಂಡಂತಹ ಅತ್ಯಂತ ಸರಳ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯ. ನೀವು ಪ್ರಯತ್ನ ಪಡದೆಯೇ ನಿಮ್ಮನ್ನು ಜನ ಇಷ್ಟ ಪಡುತ್ತಾರೆ. ಅದರಲ್ಲಿ ನಮ್ಮ ಪೋಷಕರು ಕೂಡ ಒಬ್ಬರು. ನಮ್ಮ ಚಿಕ್ಕ ಕುಟುಂಬಕ್ಕೆ ಸ್ವಾಗತ” ಅಂತಾ ರಶ್ಮಿಕಾ ಅವರು ಫೇಸ್‍ಬುಕ್‍ನಲ್ಲಿ ಭಾವಿ ಪತಿಗೆ ವಿಶ್ ಮಾಡಿದ್ದಾರೆ.

ಜುಲೈ 3ರಂದು ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ನಡೆಯಲಿದೆ. ಕುಶಾಲನಗರದಲ್ಲಿ ನಿಶ್ಚಿತಾರ್ಥ ನಡೆಯಲಿದ್ದು, ಎರಡೂ ಕುಟುಂಬದದ ಸದಸ್ಯರು ಮತ್ತು ಆಪ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಿರಿಕ್ ಪಾರ್ಟಿಯಲ್ಲಿ ಕರ್ಣ ಮತ್ತು ಸಾನ್ವಿಯಾಗಿ ನಟಿಸಿದ್ದ ಈ ಜೋಡಿಯ ನಿಶ್ಚಿತಾರ್ಥ ಜುಲೈನಲ್ಲಿ ನಡೆದರೂ ಮದುವೆ ದಿನಾಂಕ ಇನ್ನು ಅಂತಿಮವಾಗಿಲ್ಲ. ಮದುವೆ ಉಡುಪಿಯಲ್ಲಿ ನಡೆದರೆ ಬೆಂಗಳೂರಲ್ಲಿ ಅರತಕ್ಷತೆ ನಡೆಯಲಿದೆ ಎನ್ನುವ ಮಾಹಿತಿ ಪಬ್ಲಿಕ್ ಟಿವಿಗೆ ಸಿಕ್ಕಿದೆ.

https://www.youtube.com/watch?v=jzSaQ0QLDCE

Click to comment

Leave a Reply

Your email address will not be published. Required fields are marked *