ಬೆಂಗಳೂರು: ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ನಟ ಕಮಲ ಹಾಸನ್ ಆಗಮಿಸಿ ಎಚ್‍ಡಿ ಕುಮಾರಸ್ವಾಮಿಯವರಿಗೆ ಶುಭಕೋರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ಧನ್ಯವಾದಗಳು. ಎರಡು ರಾಜ್ಯಗಳ ನಡುವಿನ ಮಾತುಕತೆ ಉತ್ತಮ ಆರಂಭ ಇದು. ಅಲ್ಲದೇ ವಿವಿಧ ರಾಜಕೀಯ ನಾಯಕರ ಅಭಿಪ್ರಾಯವನ್ನು ಹಂಚಿಕೊಳ್ಳಲು ವೇದಿಕೆಯಾಗಿದೆ ಎಂದು ಬರೆದುಕೊಂಡಿದ್ದಾರೆ.
Advertisement
ಕುಮಾರಸ್ವಾಮಿ ಅವರು ದೇವರು ಮತ್ತು ರಾಜ್ಯದ ಜನತೆ ಹೆಸರಲ್ಲೂ ಪರಮೇಶ್ವರ್ ಅವರು ದೇವರ ಹೆಸರಲ್ಲೂ ಪ್ರತಿಜ್ಞಾವಿಧಿ ಪಡೆದರು. ಈ ವೇಳೆ, ಅಭಿಮಾನಿಗಳು, ಕಾರ್ಯಕರ್ತರ ಶಿಳ್ಳೆ, ಚಪ್ಪಾಳೆ, ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಬಿಜೆಪಿಯ ಬಹುಮತ ಹೈಡ್ರಾಮಾ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಈ ಮೂಲಕ ಅಸ್ತಿತ್ವಕ್ಕೆ ಬಂದಿದೆ. 12 ವರ್ಷಗಳ ಬಳಿಕ ಕುಮಾರಸ್ವಾಮಿ ಇದೀಗ ಮತ್ತೆ ಸಿಎಂ ಕುರ್ಚಿ ಮೇಲೆ ಆಸೀನರಾಗಿದ್ದಾರೆ.
Advertisement
I thank the CM of Karnataka @hd_kumaraswamy for inviting me. Hearty congratulations to the new Govt. It’s a good starting point for a dialogue between our States. It was also a platform for a healthy exchange of views with all other party leaders.Curious to see what follows.
— Kamal Haasan (@ikamalhaasan) May 23, 2018