ಕರಾವಳಿ ಬ್ಯೂಟಿ ಪೂಜಾ ಹೆಗ್ಡೆಗೆ (Pooja Hegde) ಬಂಪರ್ ಅವಕಾಶವೊಂದು ಸಿಕ್ಕಿದೆ. ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿದ್ದ ಪೂಜಾ ಇದೀಗ ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ಪುತ್ರನ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಹೊಸ ಸಿನಿಮಾಗಾಗಿ ನಟಿ ಕೈಜೋಡಿಸಿದ್ದಾರೆ.
‘ಕಿಸಿ ಕಾ ಬಾಯ್ ಕಿಸಿ ಕಿ ಜಾನ್’ ಚಿತ್ರದಲ್ಲಿ ಸಲ್ಮಾನ್ ಖಾನ್ (Salman Khan) ಜೊತೆ ಪೂಜಾ ಹೆಗ್ಡೆ ಕಡೆಯದಾಗಿ ನಟಿಸಿದ್ದರು. ಅದಾದ ನಂತರ ಸಿನಿಮಾ ಆಫರ್ಸ್ ಕಮ್ಮಿಯಾಗಿತ್ತು. ಮತ್ತೆ ಟಾಲಿವುಡ್ಗೆ ಮುಖ ಮಾಡ್ತಾರೆ ಐರೆನ್ ಲೆಗ್ ನಟಿ ಎಂದೇ ಸುದ್ದಿ ಹಬ್ಬಿತ್ತು. ಆದರೆ ಫ್ಯಾನ್ಸ್ಗೆ ಈಗ ನಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
‘ಸಂಕಿ’ (Sanki) ಎಂಬ ರೊಮ್ಯಾಂಟಿಕ್ ಸಿನಿಮಾದಲ್ಲಿ ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿಗೆ (Ahan Shetty) ನಾಯಕಿಯಾಗಿ ನಟಿಸಲು ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ. ಬಾಲಿವುಡ್ನ ಖ್ಯಾತ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
View this post on Instagram
ಮುಂದಿನ ವರ್ಷ ಪ್ರೇಮಿಗಳ ದಿನ ಫೆ.14ಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದೆ. ಹೊಚ್ಚ ಹೊಸ ಲವ್ ಸ್ಟೋರಿ ಹೇಳೋಕೆ ಅಹಾನ್- ಪೂಜಾ ಹೆಗ್ಡೆ (Pooja Hegde) ಸಜ್ಜಾಗಿದ್ದಾರೆ. ಇದನ್ನೂ ಓದಿ:ವಿನಯ್ ಗೌಡ ಹುಟ್ಟುಹಬ್ಬಕ್ಕೆ ಬಿಗ್ ಸರ್ಪ್ರೈಸ್ ಕೊಟ್ಟ ಪತ್ನಿ
2021ರಲ್ಲಿ ‘ತಡಪ್’ (Tadap) ಚಿತ್ರದ ಮೂಲಕ ಅಹಾನ್ ಶೆಟ್ಟಿ ಬಾಲಿವುಡ್ ನಾಯಕನಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ ಮೊದಲ ಬಾರಿಗೆ ಪೂಜಾ ಹೆಗ್ಡೆ ಜೊತೆ ಅಹಾನ್ ಶೆಟ್ಟಿ ನಟಿಸುತ್ತಿರೋದ್ರಿಂದ ಈ ಜೋಡಿ ತೆರೆಯ ಮೇಲೆ ಮೋಡಿ ಮಾಡ್ತಾರಾ ಕಾದುನೋಡಬೇಕಿದೆ.