ಮೈಸೂರು: ಅಧಿಕಾರಿ ಮೇಲೆ ಹಲ್ಲೆ ನಡೆಸಲು ಮಹಿಳೆಯೊಬ್ಬಳು (Woman) ಮಚ್ಚು ಹಿಡಿದು ಬಂದ ಘಟನೆ ಮೈಸೂರಿನ (Mysuru) ಸಾತಗಳ್ಳಿ ಬಸ್ ಡಿಪೋನಲ್ಲಿ (Bus Depot) ನಡೆದಿದೆ.
ಕಾಂಗ್ರೆಸ್ (Congress) ಮುಖಂಡ ಶಫಿ ಪತ್ನಿ ಈ ಕೃತ್ಯ ಮಾಡಿದ್ದಾಳೆ ಎಂಬ ಆರೋಪ ಕೇಳಿ ಬರುತ್ತಿದೆ. ಬಸ್ ಡಿಪೋ ಜಾಗವನ್ನು ಶಫಿ ಬಾಡಿಗೆಗೆ ಪಡೆದಿದ್ದ. ಬಾಡಿಗೆ ಪಡೆದ ಜಾಗದಲ್ಲಿ ಶಫಿ ಕಾಲೇಜು ನಡೆಸುತ್ತಿದ್ದ. ಆದರೆ ಶಫಿ 1 ಕೋಟಿ 80 ಲಕ್ಷ ರೂ. ಬಾಡಿಗೆ ಬಾಕಿಯನ್ನು ಉಳಿಸಿಕೊಂಡಿದ್ದ. ಶಫಿ ಬಾಡಿಗೆ ಕಟ್ಟದ ಹಿನ್ನೆಲೆಯಲ್ಲಿ ಡಿಪೋ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೋಟಿಸ್ ನೀಡಿದ್ದರು. ಇದರಿಂದ ಶಫಿ ಹಾಗೂ ಆತನ ಪತ್ನಿ ಆಕ್ರೋಶಗೊಂಡು ಮಚ್ಚು ಹಿಡಿದು ಡಿಪೋಗೆ ಬಂದಿದ್ದರು. ಇದನ್ನೂ ಓದಿ: ಬೆಂಗ್ಳೂರು-ಮಂಗ್ಳೂರು ಹೈವೇಯಲ್ಲಿ ಸಿನಿಮೀಯ ರೀತಿ ಡೆಡ್ಲಿ ಆಕ್ಸಿಡೆಂಟ್ – ಐವರ ದುರ್ಮರಣ
Advertisement
Advertisement
ಅಧಿಕಾರಿಗಳ ಮುಂದೆ ಶಫಿ ಹಾಗೂ ಪತ್ನಿ ರಂಪಾಟ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ನಡೆಸಿದ್ದು, ದಂಪತಿ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ. ದಂಪತಿ ರಂಪಾಟ ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದ್ದಾರೆ. ಘಟನೆಗೆ ಸಂಬಂಧಿಸಿ ದಂಪತಿ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ದಂಪತಿ ತಲೆ ಮರೆಸಿಕೊಂಡಿದ್ದಾರೆ. ಇದನ್ನೂ ಓದಿ: ಅನ್ಯಾಯ ಮಾಡುವುದರಲ್ಲಿ ಬಿಜೆಪಿಯವ್ರು ನಿಸ್ಸೀಮರು : ಪಕ್ಷ ಬಿಡ್ತೇನೆ ಎಂದ ಸಂದೇಶ್ ನಾಗರಾಜ್