ಬೀದರ್: ಸಿಲಿಕಾನ್ ಸಿಟಿಯಲ್ಲಿ ಎಸಿಪಿಯೊಬ್ಬರು ಹೋಟೆಲ್ ಮಾಲೀಕರಿಗೆ ಮನಬಂದಂತೆ ಥಳಿಸಿದ್ದ ಪ್ರಕರಣ ಮಾಸುವ ಮುನ್ನವೇ ವಾಹನ ಸವಾರರೊಬ್ಬರ ಮೇಲೆ ಬೀದರ್ ಪೊಲೀಸರು ಮನಬಂದಂತೆ ಥಳಿಸಿದ್ದಾರೆ.
ಈ ಘಟನೆ ಬೀದರ್ ನಗರದ ಮೈಲೂರು ಕ್ರಾಸ್ ಬಳಿ ನಡೆದಿದೆ. ವಾಹನ ಸವಾರನ ಮೇಲೆ ಹಲ್ಲೆ ಮಾಡಿದ್ದಕ್ಕೆ ನೂರಾರು ಸಾರ್ವಜನಿಕರು ಸೇರಿ ಪೊಲೀಸರಿಗೆ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.
Advertisement
ಒಂದು ಕಡೆ ವಾಹನ ಸವಾರರ ಮೇಲೆ ದರ್ಪ ತೋರಿದ್ದು ಒಂದು ಕಡೆಯಾದರೆ ಟ್ರಾಫಿಕ್ ರೂಲ್ಸ್ ಅನುಷ್ಠಾನ ಮಾಡುವಲ್ಲಿ ಪೊಲೀಸರು ವಿನಾಕಾರಣ ದರ್ಪ ತೋರುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
Advertisement
Advertisement
ಎಲ್ಲಾ ದಾಖಲೆಗಳು ಇದ್ದರೂ ಸುಕಾಸುಮ್ಮನೆ ಹಲ್ಲೆ ಮಾಡುತ್ತಿದ್ದಾರೆ ಎಂದು ಹಲ್ಲೆಗೊಳಗಾದ ವ್ಯಕ್ತಿ ಹೇಳಿಕೆ ನೀಡಿದ್ದಾರೆ.
Advertisement
ಈ ಮೊದಲು ಇದೇ ತಿಂಗಳ 9 ರಂದು ಬೆಂಗಳೂರಿನ ಆರ್.ಟಿ.ನಗರ ಪೊಲೀಸ್ ಠಾಣೆಯ ಎಸಿಪಿ ಮಂಜುನಾಥ ಬಾಬು ಹೋಟೆಲ್ ಮಾಲೀಕರೊಬ್ಬರ ಮೇಲೆ ಮನಬಂದಂತೆ ಥಳಿಸಿದ್ದರು. ಆರ್.ಟಿ.ನಗರದ ದಿಣ್ಣೂರ ರಸ್ತೆಯಲ್ಲಿರುವ ಶೆಟ್ಟಿ ಲಂಚ್ ಹೋಂನಲ್ಲಿ ಈ ಘಟನೆ ನಡೆದಿತ್ತು.
ಶೆಟ್ಟಿ ಲಂಚ್ ಹೋಂ ತಡರಾತ್ರಿವರೆಗೆ (ರಾತ್ರಿ 11-55ರವರೆಗೆ) ತರೆದಿದ್ದ ಮಾಲೀಕ ರಾಜೀವ್ ಶೆಟ್ಟಿ ಮೇಲೆ ಎಸಿಪಿ ಮಂಜುನಾಥ್ ಲಾಟಿಯಿಂದ ಮನಬಂದತೆ ಥಳಿಸಿದ್ದರು. ಪೊಲೀಸರ ದೌರ್ಜನ್ಯ ಕಂಡು ಲಂಚ್ ಹೋಂನಲ್ಲಿದ್ದ ಗ್ರಾಹಕರು ಭಯಭೀತಗೊಂಡು ಓಡಿ ಹೋಗಿದ್ದರು. ಆದರೂ ಬಿಡದೆ ಪೊಲೀಸರು ಲೈಟ್ ಆಫ್ ಮಾಡಿ ಹಿಗ್ಗಾ-ಮುಗ್ಗಾ ಥಳಿಸಿದರೆಂದು ಲಂಚ್ ಹೋಂ ಮಾಲೀಕ ರಾಜೀವ ಶೆಟ್ಟಿ ಆರೋಪಿಸಿದ್ದರು.