Bengaluru City
ಗೋ ಹತ್ಯೆ ಬಗ್ಗೆ ದೂರು ನೀಡಿದ್ದ ಮಹಿಳಾ ಟೆಕ್ಕಿ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು: ನಗರದಲ್ಲಿ ಪ್ರಾಣಿ ಪ್ರೀತಿ ತೋರಿಸಲು ಹೋದ ಮಹಿಳಾ ಟೆಕ್ಕಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ನಂದಿನಿ ಎಂಬವರೇ ಹಲ್ಲೆಗೊಳಗಾದ ಮಹಿಳಾ ಟೆಕ್ಕಿ. ಪ್ರತಿಷ್ಠಿತ ಸಾಫ್ಟ್‍ವೇರ್ ಕಂಪನಿಯಲ್ಲಿ ಸೀನಿಯರ್ ಅಧಿಕಾರಿಯಾಗಿದ್ದ ನಂದಿನಿ ಅವರು ಗೋಹತ್ಯೆ ಬಗ್ಗೆ ತಲಘಟ್ಟಪುರ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ದೂರು ನೀಡಿ ಪೇದೆಗಳೊಂದಿಗೆ ವಾಪಸ್ ಹೊಗುವಾಗ ದುಷ್ಕರ್ಮಿಗಳು ಕೊಲೆಗೆ ಯತ್ನಿಸಿದ್ದಾರೆ.
ಕಾಲ್ಕಿತ್ತ ಪೇದೆಗಳು: ಪಾಕಿಸ್ತಾನ ಪರ ಘೋಷಣೆ ಕೂಗಿತ್ತಾ ಬಂದ 100ಕ್ಕೂ ಹೆಚ್ಚು ದುಷ್ಕರ್ಮಿಗಳಿದ್ದ ಗುಂಪು ನಂದಿನಿ ಅವರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಈ ವೇಳೆ ನಂದಿನಿ ಅವರ ಜೊತೆಗಿದ್ದ ಪೇದೆಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ತಲಘಟ್ಟಪುರ ಕಸಾಯಿಖಾನೆ ಬಳಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಟೆಕ್ಕಿ ನಂದಿನಿ ಅವರ ಕಾರು ಸಂಪೂರ್ಣ ಜಖಂ ಆಗಿದೆ.
ಘಟನೆ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
