ಕಾಲಿವುಡ್ ಸ್ಟಾರ್ ಅಜಿತ್ ಕುಮಾರ್ ತೆರೆಯ ಮೇಲೆ ಮಾತ್ರ ಹೀರೋ ಅಲ್ಲ. ತೆರೆಮರೆಯಲ್ಲಿ ಕೂಡ ರಿಯಲ್ ಹೀರೋ ಎಂಬುದನ್ನ ಅಜಿತ್ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. 47ನೇ ತಮಿಳುನಾಡು ರಾಜ್ಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ, 4 ಚಿನ್ನದ ಪದಕವನ್ನ ಅಜಿತ್ ಗೆದ್ದಿದ್ದಾರೆ.


ಜೊತೆಗೆ 50 ಮೀಟರ್ ಉಚಿತ ಪಿಸ್ತೂಲ್ ಮೆನ್, ಸ್ಟ್ಯಾಂಡರ್ಡ್ ಪಿಸ್ತೂಲ್ ಪುರುಷರ ವಿಭಾಗದಲ್ಲಿ 2 ಕಂಚಿನ ಪದಕವನ್ನ ಅಜಿತ್ ಮತ್ತು ತಂಡ ಗೆದ್ದಿದ್ದಾರೆ. ತಿರುಚ್ಚಿ ರೈಫೆಲ್ ಕ್ಲಬ್‌ನಲ್ಲಿ ಈ ಚಾಂಪಿಯನ್‌ಶಿಪ್ ನಡೆದಿದ್ದು, ನೆಚ್ಚಿನ ನಟನನ್ನು ನೋಡಲು ಅಪಾರ ಅಭಿಮಾನಿಗಳು ಜಮಾಯಿಸಿದ್ದರು. ಇನ್ನು ಕಳೆದ 46ನೇ ತಮಿಳುನಾಡು ರಾಜ್ಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಜಿತ್ ಕುಮಾರ್ ಭಾಗವಹಿಸಿ, ಸಾಕಷ್ಟು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.
Live Tv
[brid partner=56869869 player=32851 video=960834 autoplay=true]

