Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಕೈಗಾ ಅಣುಸ್ಥಾವರ ಪ್ರದೇಶಕ್ಕೆ ಕೇಂದ್ರ ಭೂ ಕುಸಿತ ಅಧ್ಯಯನ ತಂಡ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಕೈಗಾ ಅಣುಸ್ಥಾವರ ಪ್ರದೇಶಕ್ಕೆ ಕೇಂದ್ರ ಭೂ ಕುಸಿತ ಅಧ್ಯಯನ ತಂಡ

Districts

ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಕೈಗಾ ಅಣುಸ್ಥಾವರ ಪ್ರದೇಶಕ್ಕೆ ಕೇಂದ್ರ ಭೂ ಕುಸಿತ ಅಧ್ಯಯನ ತಂಡ

Public TV
Last updated: September 13, 2021 9:33 pm
Public TV
Share
2 Min Read
Karwar hill collapses
SHARE

ಕಾರವಾರ: ಕಳೆದ ಜುಲೈ 26ರಲ್ಲಿ ಸುರಿದ ಮಳೆ ಭಾರೀ ಅನಾಹುತವನ್ನುಂಟು ಮಾಡಿತ್ತು. ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತುಕೊಂಡ ಕೇಂದ್ರ ಭೂಕುಸಿತ ಅಧ್ಯಯನ ತಂಡ ಕೈಗಾ ಅಣುಸ್ಥಾವರ ಭಾಗದಲ್ಲಿ ಸಮೀಕ್ಷೆಗೆ ಮುಂದಾಗಿದ್ದಾರೆ.

Karwar hill collapses

Public Tv IMPACT ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಜುಲೈ 26ರಲ್ಲಿ ಸುರಿದ ಮಳೆ ಭಾರೀ ಅನಾಹುತವನ್ನು ತಂದೊಡ್ಡಿತು. ಯಲ್ಲಾಪುರ, ಕಾರವಾರ, ಅಂಕೋಲ ಭಾಗದಲ್ಲಿ ಜಲಪ್ರಳಯವೇ ಸಂಭವಿಸಿ ಹಲವು ಭಾಗದಲ್ಲಿ ಭೂ ಕುಸಿತ ಉಂಟಾಯಿತು. ಯಲ್ಲಾಪುರ ಭಾಗದ ಕಳಚೆ, ಅರೆಬೈಲ್ ಘಟ್ಟ ಪ್ರದೇಶ, ಕಾರವಾರ ಭಾಗದ ಅಣಶಿ ಘಟ್ಟದಲ್ಲಿ ಭೂ ಕುಸಿತವಾಗಿ ಹೆದ್ದಾರಿ ಬಂದ್ ಆಗಿತ್ತು. ಕಳಚೆಯಲ್ಲಿ 25 ಕ್ಕೂ ಹೆಚ್ಚು ಮನೆಗಳು 70 ಎಕರೆ ಅಡಕೆ ತೋಟ, ತೆಂಗಿನ ತೋಟ ಎಲ್ಲವೂ ಭೂ ಕುಸಿತದಿಂದ ನಾಶವಾಗಿದ್ದವು. ಆದರೆ ಇದೀಗ ಯಲ್ಲಾಪುರ, ಕಾರವಾರ ಘಟ್ಟ ಪ್ರದೇಶದ ಅರಣ್ಯದಲ್ಲಿ ಮತ್ತೆ ಭೂಮಿ ಕುಸಿಯಲು ಪ್ರಾರಂಭಿಸಿರುವ ಕುರಿತು ಪಬ್ಲಿಕ್ ಟಿವಿ ವಿಸ್ತೃತ ವರದಿ ಮಾಡಿತ್ತು. ಇದನ್ನೂ ಓದಿ: ದೊಣ್ಣೆಯಿಂದ ಹೊಡೆದು ಅಪ್ಪನನ್ನೇ ಕೊಂದ ಮಗ!

ಕಳೆದ ತಿಂಗಳು ಸುರಿದ ಮಳೆ ಕೊಡಸಳ್ಳಿ ಅಣೆಕಟ್ಟಿನ ಭಾಗದಿಂದ ಕದ್ರಾ ಅಣೆಕಟ್ಟು ಭಾಗದ ಪ್ರದೇಶದವರೆಗೆ ಹಲವು ಭಾಗದಲ್ಲಿ ಗುಡ್ಡ ಕುಸಿದಿದ್ದವು. 2019ರಲ್ಲಿ ಕೊಡಸಳ್ಳಿ ಆಣೆಕಟ್ಟಿನ ಮೇಲ್ಭಾಗದಲ್ಲಿ ಗುಡ್ಡ ಕುಸಿತವಾಗಿತ್ತು. ಆದರೆ ಈ ಬಾರಿ ಕೆಳಭಾಗದಲ್ಲಿ ಗುಡ್ಡ ಕುಸಿತ ಕಂಡಿತ್ತು. ಇದಲ್ಲದೇ ಕೈಗಾ ಅಣು ಸ್ಥಾವರದ ಸುತ್ತಮುತ್ತಲ ಪ್ರದೇಶದ ಗುಡ್ಡವು ಸಹ ಕುಸಿತ ಕಂಡಿದೆ. ಇದಲ್ಲದೇ ನಿರಂತರ ಈ ಭಾಗದಲ್ಲಿ ಮತ್ತೆ ಮಳೆ ಬೀಳುತಿದ್ದು, ಅಲ್ಲಲ್ಲಿ ಗುಡ್ಡಗಳಲ್ಲಿ ಕುಸಿತ ಕಂಡಿದೆ. ಇದರಿಂದಾಗಿ ಕೊಡಸಳ್ಳಿ ಜಲಾಶಯ ಹಾಗೂ ಕೈಗಾ ಅಣುಸ್ಥಾವರಕ್ಕೆ ಆತಂಕ ಎದುರಾಗಿದೆ ಎಂಬ ಕುರಿತು ಪಬ್ಲಿಕ್ ಟಿವಿ ಸಾಕ್ಷಿ ಸಮೇತ ಸುದ್ದಿ ಪ್ರಕಟಮಾಡಿತ್ತು. ಇದರ ಬೆನ್ನಲ್ಲೆ ಕೇಂದ್ರದಿಂದ ನಾಲ್ಕು ಜನರ ತಂಡ ಕೈಗಾ ಮತ್ತು ಕದ್ರಾ ಭಾಗದ ಸುತ್ತಮುತ್ತ ಭೂ ಕುಸಿತವಾಗಿರುವ ಪ್ರದೇಶಕ್ಕೆ ಅಧ್ಯಯನಕ್ಕೆ ತೆರಳುತ್ತಿದೆ.

ಕಾರವಾರದ ಘಟ್ಟ ಪ್ರದೇಶ, ಯಲ್ಲಾಪುರ ಘಟ್ಟ ಪ್ರದೇಶದ ಹಲವು ಕಡೆಯಲ್ಲಿ ಹಿಂದೆ ಬಿರುಕು ಬಿಟ್ಟಿದ್ದ ಗುಡ್ಡಗಳು ಇದೀಗ ಕುಸಿಯುತ್ತಿದೆ. ಯಲ್ಲಾಪುರದ ಹೆದ್ದಾರಿ ಭಾಗದಲ್ಲಿ ಪ್ರಯಾಣಿಸಿದರೆ ಹಲವು ಭಾಗದಲ್ಲಿ ಗುಡ್ಡ ಕುಸಿದಿರುವುದನ್ನು ಗಮನಿಸಬಹುದಾಗಿದೆ. ಕೈಗಾ ಯಲ್ಲಾಪುರಕ್ಕೆ ತೆರಳುವ ಗುಡ್ಡದ ರಸ್ತೆಯಲ್ಲಿ ನಿಂತು ನೋಡಿದರೆ ಸುತ್ತಮುತ್ತಲಿನ ಗುಡ್ಡದಲ್ಲಿ ಭೂಮಿ ಕುಸಿಯುತ್ತಿರುವುದನ್ನು ಗಮನಿಸಬಹುದಾಗಿದೆ.

 

ಈ ಭಾಗಗಳಲ್ಲಿ ಜನ ವಸತಿ ಇಲ್ಲದ ಕಾರಣ ದೊಡ್ಡ ಹಾನಿಯಾಗುತ್ತಿದ್ದರೂ ಜನರಿಗೆ ತೊಂದರೆ ಆಗಿಲ್ಲ. ಆದರೆ ಇಲ್ಲಿರುವ ಜಲಾಶಯ ಹಾಗೂ ಕೈಗಾ ಅಣು ಸ್ಥಾವರಕ್ಕೆ ಇದೀಗ ಆತಂಕ ಎದುರಾಗಿದೆ. ಗುಡ್ಡಭಾಗದಲ್ಲಿ ನೀರಿನ ಪಸೆ ಹೆಚ್ಚಾಗಿದೆ. ಮಣ್ಣುಗಳು ಸಡಿಲವಾಗಿದ್ದು, ಅಲ್ಲಲ್ಲಿ ಭೂಮಿ ಬಾಯಿ ಬಿಟ್ಟಿದೆ. ಕೆಲವು ಕಡೆ ಮಳೆಯಿಂದ ಗುಡ್ಡದ ಮರಗಳ ಸಮೇತ ಮಣ್ಣು ಕುಸಿದು ಮರಗಳು ಬುಡಸಮೇತ ನೆಲಕ್ಕುರುಳಿವೆ.

ಕಳಚೆ ಭಾಗದಲ್ಲಿ ಸಹ ಮತ್ತೆ ಗುಡ್ಡ ಕುಸಿತ ಕಾಣುವ ಆತಂಕ ಎದುರಾಗಿದೆ. ಕಳಚೆಯ ಸಮೀಪವೇ ಕೊಡಸಳ್ಳಿ ಜಲಾಶಯ ಸಹ ಇದ್ದು, ಈ ಜಲಾಶಯದ ಸುತ್ತಲಿನ ಗುಡ್ಡದ ಹಲವು ಭಾಗದಲ್ಲಿ ಮಣ್ಣು ಸಡಿಲವಾಗಿ ಕುಸಿಯುತ್ತಿದೆ. ಈ ಭಾಗದಲ್ಲಿ ಬಹುತೇಕ ಅರಣ್ಯವಾಗಿರುವುದರಿಂದ ಇದರ ತೀವ್ರತೆಯನ್ನು ಅರಿಯದಂತಾಗಿದೆ. ಇನ್ನು ಕಳಚೆ ಗ್ರಾಮದ ಬಹುತೇಕ ಭಾಗದಲ್ಲಿ ಭೂಮಿ ಬಿರುಕುಬಿಟ್ಟಿದ್ದರಿಂದ ಹಾಗೂ ಮಣ್ಣು ಸಡಿಲವಾಗಿರುವುದರಿಂದ ಮತ್ತೆ ಹೆಚ್ಚಿನ ಮಳೆಯಾದರೆ ದೊಡ್ಡ ಅನಾಹುತ ಕಟ್ಟಿಟ್ಟ ಬುತ್ತಿಯಂತಿದ್ದು ಇದೀಗ ಕೇಂದ್ರ ಅಧ್ಯಯನ ತಂಡ ಕೈಗಾ ಅಣುಸ್ಥಾವರದ ಭಾಗದಲ್ಲಿ ಇದರ ಸಮೀಕ್ಷೆಗೆ ಮುಂದಾಗಿದ್ದಾರೆ.

TAGGED:collapsesHillkarwarPublic TV ImpactpublictvUttara Kannadaಅಣುಸ್ಥಾವರಕದ್ರಾ ಅಣೆಕಟ್ಟುಕಾರವಾರಕೇಂದ್ರ ಅಧ್ಯಯನ ತಂಡಜಲಾಶಯ
Share This Article
Facebook Whatsapp Whatsapp Telegram

Cinema news

TVK Vijay
ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್‌
Cinema Court Latest Main Post National
Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories
Atlee
ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
Cinema Latest Top Stories
Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories

You Might Also Like

Tilak Varma
Cricket

ತಿಲಕ್‌ ವರ್ಮಾ 101, ಗುಜರಾತ್‌ 100 – ಸತತ 4 ಸೋಲಿನ ಬಳಿಕ ಮುಂಬೈಗೆ ವಿಜಯದ ತಿಲಕ

Public TV
By Public TV
6 hours ago
Inspiration Success story Jayashree Koppala Zomato Roti business 2
Bengaluru City

ಇದು ಅವಳ ಕಥೆ – ಕಷ್ಟಗಳಿಗೆ ಗೋಲಿಮಾರೋ!

Public TV
By Public TV
7 hours ago
Rain Chikkamagaluru
Chamarajanagar

ಭಾರೀ ಮಳೆಗೆ ಬಾಳೆಹೊನ್ನೂರು, ಕೊಟ್ಟಿಗೆಹಾರ ಮಾರ್ಗದಲ್ಲಿ ಧರೆಗುರುಳಿದ ಮರ – ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್‌ ಜಾಮ್‌

Public TV
By Public TV
7 hours ago
Justice Swarana Kanta Sharma Arvind Kejriwal
Court

ರಾಜಕಾರಣಿಗಳ ಮಕ್ಕಳು ರಾಜಕಾರಣಿಯಾದರೆ, ಜಡ್ಜ್‌ ಮಕ್ಕಳು ವಕೀಲರಾಗುವುದರಲ್ಲಿ ತಪ್ಪೇನಿಲ್ಲ: ಕೇಜ್ರಿವಾಲ್‌ ವಿರುದ್ಧ ಜಡ್ಜ್‌ ಗರಂ

Public TV
By Public TV
8 hours ago
Private Plane Flying 30 Feet Above Ground Crashes Into Tree In Chhattisgarh
Latest

ಮರಕ್ಕೆ ವಿಮಾನ ಡಿಕ್ಕಿಯಾಗಿ ಪತನ – ವರದಿಯನ್ನು ಅಲ್ಲಗಳೆದ ಛತ್ತೀಸ್‌ಗಢ ಸರ್ಕಾರ

Public TV
By Public TV
8 hours ago
Mushroom masala 3
Food

ಸಿಂಪಲ್ ಆಗಿ ಮಾಡಿ ಮಶ್ರೂಮ್ ಮಸಾಲಾ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?