ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಶೀಘ್ರ ಸಚಿವ ಸಂಪುಟ ಪುನರ್ ರಚನೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಭೇಟಿ ಮಾಡಿರುವ ಗೃಹ ಸಚಿವ ಅಮಿತ್ ಶಾ ಭಾನುವಾರ ಅಥವಾ ಸೋಮವಾರ ಸಚಿವ ಸಂಪುಟ ಪುನರ್ ರಚನೆಗೆ ಸಮಯ ಕೇಳಿದ್ದಾರೆ ಎಂದು ಹೇಳಲಾಗಿದೆ.
ಹೊಸ ಸಂಪುಟದಲ್ಲಿ ಹಲವು ಮಂದಿ ಸಚಿವರು ಹಾಗೂ ಆರು ಮಂದಿ ರಾಜ್ಯಖಾತೆ ಸಚಿವರನ್ನು ಕೈ ಬಿಡಲಾಗುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು (Niramala Sitharaman) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ. ಧರ್ಮೇಂದ್ರ ಪ್ರಧಾನ್ ಮತ್ತು ಹರ್ದೀಪ್ ಸಿಂಗ್ ಪುರಿ ಅವರನ್ನು ಸಚಿವ ಸಂಪುಟದಿಂದ ಹೊರಗಿಡ್ತಾರೆ ಎಂಬ ಚರ್ಚೆ ಆಗ್ತಿದೆ. ಇದನ್ನೂ ಓದಿ: Top Updates | ರಾಮಮಂದಿರದ 7 ಕೋಟಿ ದೇಣಿಗೆ ಕಳ್ಳತನ – 70 ಬಾರಿ ಲೂಟಿ, ಸಿಎಂ ಯೋಗಿ ಎಚ್ಚರಿಕೆ
ಆರ್‌ಬಿಐ ಮಾಜಿ ಗವರ್ನರ್ ಮತ್ತು ಪ್ರಧಾನ ಮಂತ್ರಿಯ ಕಚೇರಿಯ ಪ್ರಧಾನ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ. ಆಪ್ ಹಾಗೂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ತೊರೆದು ಬಂದಿರುವ ಸಂಸದರಿಗೆ ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬಿಹಾರದ ಮಾಜಿ ಸಿಎಂ ನಿತೀಶ್ ಕುಮಾರ್, ಅನುರಾಗ್ ಠಾಕೂರ್, ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಪುತ್ರ ಶ್ರೀಕಾಂತ್ ಶಿಂಧೆ, ಯುಬಿಟಿಯಿಂದ ಬಂದಿರುವ ಸಂಸದ ಸಂಜಯ್ ದಿನಾ ಪಾಟೀಲ್, ಪಂಜಾಬ್ ಆಪ್‌ನಿಂದ ಬಂದಿರುವ ರಾಘವಚಡ್ಡಾ, ಅಶೋಕ್ ಮಿತ್ತಲ್ ಸೇರಿ ಹಲವರಿಗೆ ಸಚಿವ ಸ್ಥಾನ ಸಿಗೋ ಸಾಧ್ಯತೆ ಇದೆ ಎನ್ನಲಾಗಿದೆ.ಇದನ್ನೂ ಓದಿ: ಉದ್ಧವ್ ಠಾಕ್ರೆ ರಾಮ ಮಂದಿರಕ್ಕೆ ನೀಡಿದ್ದ ಬೆಳ್ಳಿ ಇಟ್ಟಿಗೆ ಏನಾಯ್ತು? – ಸಂಜಯ್ ರಾವತ್ ಪ್ರಶ್ನೆ
