Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 3 ವರ್ಷ ಡೇಟಿಂಗ್, ಮದ್ವೆಯಾಗಿ 2 ವಾರ – ವಿಚ್ಛೇದನಕ್ಕೆ ಮುಂದಾದ ಪೂನಂ ಪಾಂಡೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | Bollywood | 3 ವರ್ಷ ಡೇಟಿಂಗ್, ಮದ್ವೆಯಾಗಿ 2 ವಾರ – ವಿಚ್ಛೇದನಕ್ಕೆ ಮುಂದಾದ ಪೂನಂ ಪಾಂಡೆ

Bollywood

3 ವರ್ಷ ಡೇಟಿಂಗ್, ಮದ್ವೆಯಾಗಿ 2 ವಾರ – ವಿಚ್ಛೇದನಕ್ಕೆ ಮುಂದಾದ ಪೂನಂ ಪಾಂಡೆ

Public TV
Last updated: September 25, 2020 9:35 am
Public TV
Share
2 Min Read
POONAM 1
SHARE

ನವದೆಹಲಿ: ಮದುವೆಯಾದ ಎರಡು ವಾರದಲ್ಲೇ ಪತಿ ವಿರುದ್ಧ ದೂರು ನೀಡಿದ್ದ ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಇದೀಗ ವಿಚ್ಛೇದನ ನೀಡಲು ಮುಂದಾಗಿದ್ದಾರೆ.

ಪತಿ ಸ್ಯಾಮ್ ಬಾಂಬೆ ತನಗೆ ಕಿರುಕುಳ ನೀಡಿ ಬೆದರಿಕೆ ಹಾಕುತ್ತಾನೆ ಎಂದು ಹೇಳಿ ನಟಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಹೀಗಾಗಿ ಗೋವಾ ಪೊಲೀಸರು ಸ್ಯಾಮ್ ನನ್ನು ಬಂಧಿಸಿದ್ದರು.

Poonam Pandey

ಸ್ಯಾಮ್ ಹಾಗೂ ಪೂನಂ ಸೆಪ್ಟೆಂಬರ್ 10ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದಕ್ಕೂ ಮೊದಲು ಇವರಿಬ್ಬರು ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಪತಿಯ ಕಿರುಕುಳದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಪೂನಂ, ನಮ್ಮಿಬ್ಬರ ಸಂಬಂಧ ನಿಂದನೀಯವಾಗಿದೆ. ಅಲ್ಲದೆ ಆತ ತನಗೆ ಪ್ರಾಣಿಗಳಿಗೆ ಹೊಡೆದಂತೆ ಹೊಡೆಯುತ್ತಿದ್ದು, ಆತನ ಜೊತೆ ಸಂಸಾರ ಮಾಡಲು ಸಾಧ್ಯವಿಲ್ಲ. ಇಂತಹ ವ್ಯಕ್ತಿಯೊಂದಿಗೆ ಸಂಬಂಧ ಮುಂದುವರಿಸುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

poonam

ನಮ್ಮ ಮಧ್ಯೆ ಆಗುತ್ತಿರುವ ಜಗಳ ತಾರಕ್ಕೇರಿತ್ತು. ಈ ವೇಳೆ ಆತ ನನಗೆ ಹೊಡೆಯಲು ಆರಂಭಿಸಿದನು. ನನ್ನನ್ನು ಉಸಿರುಗಟ್ಟುವಂತೆ ಮಾಡಿದ್ದು, ನಾನು ಸಾಯುತ್ತೇನೆ ಅಂತ ಭಾವಿಸಿದ್ದೆ. ನನ್ನ ಮುಖಕ್ಕೆ ಹೊಡೆದು, ಕೂದಲು ಹಿಡಿದು ಎಳೆದಾಡಿದನು. ಅಲ್ಲದೆ ತಲೆ ಹಿಡಿದು ಹಾಸಿಗೆಯ ಮೂಲೆಗೆ ಹೊಡೆದನು ಎಂದು ಪೂನಂ ದೂರಿದ್ದಾರೆ.

Poonam Pandey14a

ಇಷ್ಟು ಮಾತ್ರವಲ್ಲದೇ ಆತ ನನ್ನ ದೇಹದ ಮೇಲೆ ಮಂಡಿಯೂರಿ, ನನ್ನ ಮೇಲೆ ಹಲ್ಲೆ ಮಾಡಿದನು. ಈ ವೇಳೆ ನಾನು ಆತನ ಕೈಯಿಂದ ತಪ್ಪಿಸಿಕೊಂಡು ಕೋಣೆಯಿಂದ ಹೊರಬಂದು ಪಾರಾದೆ ಎಂದಿದ್ದಾರೆ. ಡೇಟ್ ನಲ್ಲಿದ್ದ ವೇಳೆಯೂ ಕಿರುಕುಳ ನೀಡುತ್ತಿದ್ದ ಸ್ಯಾಮ್, ಮದುವೆಯಾದ ಬಳಿಕ ಆತನ ಜೊತೆಗಿನ ಸಂಬಂಧ ಸುಧಾರಿಸಬಹುದು ಎಂದು ನಂಬಿದ್ದೆ. ಹೀಗಾಗಿ ನಾನು ಆತನನ್ನು ಮದುವೆಯಾದೆ. ಆದರೆ ಆತ ಬದಲಾಗಿಲ್ಲ. ಪ್ರೀತಿ ಕುರುಡು ಎಂಬುದಕ್ಕೆ ನಾನು ಅತ್ಯುತ್ತಮ ಉದಾಹರಣೆ ಎಂದು ಪೂನಂ ಅಳಲು ತೋಡಿಕೊಂಡಿದ್ದಾರೆ.

poonam pandey

ಎರಡು ವಾರಗಳ ಹಿಂದೆ ಪೂನಂ ಪಾಂಡೆ ಮುಂಬೈನಲ್ಲಿ ಸ್ಯಾಮ್ ಬಾಂಬೆಯನ್ನು ವರಿಸಿದ್ದರು. ಆ ಬಳಿಕ ಗೋವಾದ ಕೆನಕೋನಾದಲ್ಲಿ ಪೂನಂ ಪಾಂಡೆ ಚಿತ್ರೀಕರಣದಲ್ಲಿ ತೊಡಗಿದ್ದರು. ಈ ವೇಳೆ ಅಲ್ಲಿಗೆ ಬಂದ ಸ್ಯಾಮ್ ಬಾಂಬೆ, ಪಾಂಡೆ ಮೇಲೆ ಹಲ್ಲೆ ಮಾಡಿ, ದೈಹಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ್ದಾನೆ ಎಂದು ಪೂನಂ ಕೆನಕೋನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೂನಂ ಪತಿ ಸ್ಯಾಮ್ ಬಾಂಬೆಯನ್ನು ಸೋಮವಾರ ಪೊಲೀಸರು ಅರೆಸ್ಟ್ ಮಾಡಿದ್ದರು.

poonam pandey 1

TAGGED:actressbollywoodhusbandPoonam PandeyPublic TVSam Bombayನಟಿಪತಿಪಬ್ಲಿಕ್ ಟಿವಿಪೂನಂ ಪಾಂಡೆಬಾಲಿವುಡ್ವಿಚ್ಛೇದನಸ್ಯಾಮ್ ಬಾಂಬೆ
Share This Article
Facebook Whatsapp Whatsapp Telegram

Cinema news

Kavya Gowfa 2
ಚಪ್ಪಲಿ ಎಸೆದಿದ್ದು, ಹಲ್ಲೆ ಮಾಡಿದ್ದು ಓರಗಿತ್ತಿ ಪ್ರೇಮಾ – ಸಾಕ್ಷ್ಯ ಬಯಲು ಮಾಡಿದ ನಟಿ ಕಾವ್ಯ ಗೌಡ
Cinema Latest Sandalwood Top Stories
Toxic Teaser
`Toxic’ನ ರಣರೋಚಕ ಟೀಸರ್ ರಿಲೀಸ್ – ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡ ಯಶ್‌
Cinema Latest Main Post Sandalwood
Kerala Story 2 is false propaganda poisonous work Chief Minister Pinarayi Vijayan
ಫೆ.27ಕ್ಕೆ ಕೇರಳ ಸ್ಟೋರಿ 2 ಬಿಡುಗಡೆ – ಚಿತ್ರ ಬಹಿಷ್ಕರಿಸುವಂತೆ ಪಿಣರಾಯಿ ಕರೆ
Cinema Latest National South cinema Top Stories
MEJESTIC 2 1
ಮೆಜೆಸ್ಟಿಕ್- 2 ಟ್ರೈಲರ್ ರಿಲೀಸ್: ಮಹಾ ಕಲಾವಿದರ ಸಂಗಮ
Cinema Latest Sandalwood

You Might Also Like

Donald Trump 2
Latest

ಮುಂದುವರಿದ ಟ್ರಂಪ್‌ ಹುಚ್ಚಾಟ – ಎಲ್ಲಾ ದೇಶಗಳ ಮೇಲಿನ ಹೆಚ್ಚುವರಿ ಸುಂಕ 15% ಗೆ ಹೆಚ್ಚಿಸಿದ ಟ್ರಂಪ್‌

Public TV
By Public TV
1 hour ago
Chikkamagaluru Manu
Chikkamagaluru

ಪತ್ನಿಗೆ ಯುವಕನಿಂದ ಮೆಸೇಜ್‌ – ಮನನೊಂದು ನೇಣಿಗೆ ಶರಣಾದ ಪತಿ?

Public TV
By Public TV
1 hour ago
01 15
Big Bulletin

ಬಿಗ್‌ ಬುಲೆಟಿನ್‌ 21 February 2026 ಭಾಗ-1

Public TV
By Public TV
2 hours ago
02 16
Big Bulletin

ಬಿಗ್‌ ಬುಲೆಟಿನ್‌ 21 February 2026 ಭಾಗ-2

Public TV
By Public TV
2 hours ago
03 14
Big Bulletin

ಬಿಗ್‌ ಬುಲೆಟಿನ್‌ 21 February 2026 ಭಾಗ-3

Public TV
By Public TV
2 hours ago
pramod muthalik
Bagalkot

ಪ್ರಮೋದ್ ಮುತಾಲಿಕ್, ಪುನಿತ್ ಕೆರೆಹಳ್ಳಿಗೆ ಬಾಗಲಕೋಟೆ ಪ್ರವೇಶಿಸದಂತೆ ನಿರ್ಬಂಧ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?