Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇಂದು ಎಚ್‍ಡಿಕೆಯಿಂದ ಬಜೆಟ್ ಮಂಡನೆ: ದೋಸ್ತಿಗಳ ನಡೆ ಏನು? ಬಿಜೆಪಿ ಪ್ಲಾನ್ ಏನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಇಂದು ಎಚ್‍ಡಿಕೆಯಿಂದ ಬಜೆಟ್ ಮಂಡನೆ: ದೋಸ್ತಿಗಳ ನಡೆ ಏನು? ಬಿಜೆಪಿ ಪ್ಲಾನ್ ಏನು?

Bengaluru City

ಇಂದು ಎಚ್‍ಡಿಕೆಯಿಂದ ಬಜೆಟ್ ಮಂಡನೆ: ದೋಸ್ತಿಗಳ ನಡೆ ಏನು? ಬಿಜೆಪಿ ಪ್ಲಾನ್ ಏನು?

Public TV
Last updated: February 8, 2019 8:06 am
Public TV
Share
2 Min Read
BUDGET BJP TIME BOMB
SHARE

ಬೆಂಗಳೂರು: ದಿನಕ್ಕೊಂದು ಪ್ರಹಸನ, ಕ್ಷಣಕ್ಕೊಂದು ವಿದ್ಯಮಾನಗಳಿಂದ ರಾಷ್ಟ್ರ ರಾಜಕಾರಣದಲ್ಲಿ ಗಮನ ಸೆಳದಿರುವ ಕರ್ನಾಟಕದ ರಾಜಕೀಯ ಬೃಹನ್ನಾಟಕಕಕ್ಕೆ ಇಂದು ಕ್ಲೈಮ್ಯಾಕ್ಸ್ ಸಿಗುವ ಸಾಧ್ಯತೆಯಿದೆ. ದೋಸ್ತಿ ಸರ್ಕರ ಪತನದ ತಾರ್ಕಿಕ ಅಂತ್ಯ ತಲುಪಿಸುತ್ತೇವೆ ಎಂಬ ಧೃಡ ನಿಶ್ಚಯ ಬಿಜೆಪಿ ನಾಯಕರದಾಗಿದ್ದರೆ, ಆಪರೇಷನ್ ಕಮಲ ವಿಫಲಗೊಳಿಸುವೆ ಎಂಬ ಸಂಕಲ್ಪ ತೊಟ್ಟಿರುವ ಸಿಎಂ ಕುಮಾರಸ್ವಾಮಿ ಜನಪ್ರಿಯ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದಾರೆ.

ಮಧ್ಯಾಹ್ನ 12.35ಕ್ಕೆ ಹಣಕಾಸು ಸಚಿವರಾಗಿರುವ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಎರಡನೇ ಬಜೆಟ್ ಮಂಡಿಸಲಿದ್ದಾರೆ. ರೈತರಿಗೆ, ಸರ್ಕಾರಿ ನೌಕರರಿಗೆ ಹೆಚ್ಚಿನ ಬಂಪರ್ ಸಿಗುವ ನಿರೀಕ್ಷೆಯಿದ್ದು, ಲೋಕಸಭೆಯ ಚುನಾವಣೆ ಹಳಿಯ ಮೇಲೆ ಬಜೆಟ್ ಮಂಡನೆ ಸಾಧ್ಯತೆ ಹೆಚ್ಚಿದೆ.

Joint Session at Vidhana Soudha 3

ಈ ನಡುವೆ ಈ ಬಾರಿ ಸಂಸತ್ತಿನ ಮಾದರಿಯಲ್ಲಿ ಬಜೆಟ್ ಪ್ರತಿ ನೀಡಲು ನಿರ್ಧಾರ ಮಾಡಿದ್ದಾರೆ. ಬಿಜೆಪಿ ಗಲಾಟೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ಬಜೆಟ್ ಮಂಡನೆಯ ಆರಂಭದಲ್ಲಿಯೇ ಬಜೆಟ್ ಪ್ರತಿ ನೀಡದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಸತ್ತಿನ ಮಾದರಿಯಲ್ಲಿ ಹಣಕಾಸು ಸಚಿವರು ಬಜೆಟ್ ಓದಿ ಮುಗಿದ ಬಳಿಕ ಶಾಸಕರು, ಮಾಧ್ಯಮಗಳಿಗೆ ಬಜೆಟ್ ಪ್ರತಿ ನೀಡಲಾಗುತ್ತದೆ.

ಜೆಡಿಎಸ್ ಕಾಂಗ್ರೆಸ್ ನಡೆ ಏನು?
* ಬಜೆಟ್ ಮಂಡನೆ ವೇಳೆ ಬಿಜೆಪಿ ಶಾಸಕರು ಗಲಾಟೆ ಮಾಡಿದ್ರೆ ಅವರನ್ನು ಸದನದಿಂದ ಅಮಾನತು ಮಾಡಿಸುವುದು
* ಬಜೆಟ್‍ಗೆ ಅಂಗೀಕಾರ ಆಗುವವರೆಗೆ ಸದನಕ್ಕೆ ಬಾರದಂತೆ ತಡೆಯುವುದು
* ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟರೆ, ಬಿಜೆಪಿಯ 3-4 ಶಾಸಕರಿಂದ ರಾಜೀನಾಮೆ ಕೊಡಿಸಿ ಅವರ ಬಲ ಕುಗ್ಗಿಸುವುದು
* ಶಾಸಕಾಂಗ ಪಕ್ಷದ ಸಭೆಗೆ ಗೈರಾಗುವವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಸಭಾಧ್ಯಕ್ಷರಿಗೆ ದೂರು

session bjp congress jds 3

ಬಿಜೆಪಿ ನಡೆ ಏನು?
* ಬಜೆಟ್ ಮಂಡನೆ ವೇಳೆ 20 ನಿಮಿಷಗಳು ಧರಣಿ ನಡೆಸುವುದು
* ಬಳಿಕ ಕುಮಾರಸ್ವಾಮಿ ಬಜೆಟ್ ಭಾಷಣ ಆಲಿಸುವುದು
* ಅತೃಪ್ತ ಶಾಸಕರಿಂದ ರಾಜೀನಾಮೆ ಕೊಡಿಸುವುದು
* ಬಜೆಟ್‍ಗಿಂತ ಶಾಸಕರ ರಾಜೀನಾಮೆಯೇ ಸುದ್ದಿಯಾಗುವಂತೆ ಮಾಡುವುದು
* ಶಾಸಕರ ರಾಜೀನಾಮೆಯನ್ನು ಸಭಾಧ್ಯಕ್ಷರು ಅಂಗೀಕರಿಸದಿದ್ದರೆ ರಾಜ್ಯಪಾಲರ ಎದುರು ಪರೇಡ್ ಮಾಡಿಸುವುದು

session bjp congress jds 2

ರಾಜೀನಾಮೆ ನೀಡ್ತಾರಾ?
ಕಾಂಗ್ರೆಸ್‍ನ ಹಿರಿಯ ನಾಯಕರು ಹತ್ತು ಹಲವು ಸಲ ಎಚ್ಚರಿಕೆ ನೀಡಿದರೂ ಐವರು ಅತೃಪ್ತ ಶಾಸಕರು ವಿಧಾನಸೌಧದತ್ತ ಮುಖ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಇಂದು ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆದಿವೆ. ಒಂದುವ ವೇಳೆ ಸಭೆಗೆ ಹಾಜರಾಗದಿದ್ದರೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಪಕ್ಷಾಂತರ ನಿಷೇಧ ಕಾನೂನಿನಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.

ರಮೇಶ್ ಜಾರಕಿಹೊಳಿ(ಗೋಕಾಕ್), ನಾಗೇಂದ್ರ(ಬಳ್ಳಾರಿ), ಗಣೇಶ್(ಕಂಪ್ಲಿ), ಮಹೇಶ್ ಕುಮಟಳ್ಳಿ(ಅಥಣಿ), ಉಮೇಶ್ ಜಾಧವ್(ಚಿಂಚೋಳಿ), ನಾರಾಯಣಗೌಡ (ಕೆ.ಆರ್ ಪೇಟೆ), ಬಿ.ಸಿ. ಪಾಟೀಲ್(ಹಿರೇಕೆರೂರು) ಶಾಸಕಾಂಗ ಸಭೆಗೆ ಗೈರಾಗುವ ಸಾಧ್ಯತೆಯಿದೆ.

Ramesh Mahesh Umesh Nagendra 1 1

 

TAGGED:bjpbudgetkannadanewsKumaraswamysessionಕಾಂಗ್ರೆಸ್ಕುಮಾರಸ್ವಾಮಿಜೆಡಿಎಸ್ಬಜೆಟ್ಬಿಜೆಪಿರಾಜೀನಾಮೆವಿಧಾನಸಭೆ
Share This Article
Facebook Whatsapp Whatsapp Telegram

Cinema news

rashmika vijay dkshivakumar 1
ವಿಜಯ್, ರಶ್ಮಿಕಾ ಆರತಕ್ಷತೆಗೆ ತೆರಳಿ ಶುಭಕೋರಿದ ಡಿಕೆ ಶಿವಕುಮಾರ್
Cinema Latest Top Stories
honey singh 1
ನಾನು ದುಬೈನಲ್ಲಿ ಸೇಫ್ ಆಗಿದ್ದೇನೆ: ವದಂತಿಗಳಿಗೆ ಕಿವಿಗೊಡಬೇಡಿ ಎಂದ ಹನಿ ಸಿಂಗ್
Cinema Latest National Top Stories
Toxic
ಕೊನೇ ಕ್ಷಣದಲ್ಲಿ ಫ್ಯಾನ್ಸ್‌ಗೆ ಶಾಕ್ ಕೊಟ್ಟ ಯಶ್ – ಮಾ.19ಕ್ಕೆ ರಿಲೀಸ್‌ ಆಗಲ್ಲ ʻಟಾಕ್ಸಿಕ್ʼ – ಮತ್ಯಾವಾಗ?
Bollywood Cinema Latest Main Post Sandalwood
mandana Karimi
ಇಲ್ಲಿನ ಜನ ನನ್ನನ್ನ ತುಚ್ಛವಾಗಿ ನಿಂದಿಸಿದ್ದಾರೆ, ಆಡಳಿತ ಬದಲಾದ ಬಳಿಕ ಇರಾನ್‌ಗೆ ತೆರಳುತ್ತೇನೆ – ನಟಿ ಮಂದನಾ ಕರಿಮಿ
Bollywood Cinema Latest National Top Stories

You Might Also Like

kannadigas return from dubai
Bengaluru City

ದುಬೈನಿಂದ ಮತ್ತಷ್ಟು ಕನ್ನಡಿಗರು ಬೆಂಗಳೂರಿಗೆ ವಾಪಸ್

Public TV
By Public TV
9 minutes ago
Boats in the Strait of Hormuz amid the U.S. Israeli conflict with Iran
Latest

ಇರಾನ್ ದಾಳಿಗೆ ಮೂವರು ಭಾರತೀಯರು ಬಲಿ

Public TV
By Public TV
29 minutes ago
DK Shivakumar 9
Bengaluru City

ಹೇಮಾವತಿ ಲಿಂಕ್ ಕೆನಾಲ್ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ: ಡಿಕೆಶಿ

Public TV
By Public TV
2 hours ago
pete hegseth
Latest

ಮುಂದಿನ 24-48 ಗಂಟೆಗಳಲ್ಲಿ ಇರಾನ್ ಮೇಲಿನ ದಾಳಿ ಅತ್ಯಂತ ಭೀಕರವಾಗಿರಲಿದೆ – US ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ 

Public TV
By Public TV
2 hours ago
trump maga
Latest

ಇರಾನ್‌ ವಿರುದ್ಧ ಕಾರ್ಯಾಚರಣೆಗೆ ವಾಯುನೆಲೆ ಕೊಡಲ್ಲ ಎಂದ ಸ್ಪೇನ್‌ ಜೊತೆ ವ್ಯಾಪಾರ ಒಪ್ಪಂದ ರದ್ದುಗೊಳಿಸಿದ ಟ್ರಂಪ್‌

Public TV
By Public TV
2 hours ago
Bhatkal people petrol bunk
Latest

ಇಸ್ರೇಲ್‌-ಇರಾನ್‌ ಯದ್ಧ; ಭಟ್ಕಳದಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಸಾಲುಗಟ್ಟಿ ನಿಂತ ಜನ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?