Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭಾರತದಲ್ಲಿ ಕ್ಸಿಯೋಮಿಯೇ ನಂಬರ್ 1 ಬ್ರಾಂಡ್: ಯಾವ ಕಂಪನಿಯ ಮಾರುಕಟ್ಟೆ ಎಷ್ಟಿದೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಭಾರತದಲ್ಲಿ ಕ್ಸಿಯೋಮಿಯೇ ನಂಬರ್ 1 ಬ್ರಾಂಡ್: ಯಾವ ಕಂಪನಿಯ ಮಾರುಕಟ್ಟೆ ಎಷ್ಟಿದೆ?

Latest

ಭಾರತದಲ್ಲಿ ಕ್ಸಿಯೋಮಿಯೇ ನಂಬರ್ 1 ಬ್ರಾಂಡ್: ಯಾವ ಕಂಪನಿಯ ಮಾರುಕಟ್ಟೆ ಎಷ್ಟಿದೆ?

Public TV
Last updated: November 16, 2018 8:04 pm
Public TV
Share
3 Min Read
XIAOMI FIRST
SHARE

ನವದೆಹಲಿ: ಬಜೆಟ್ ಗಾತ್ರದ ಸ್ಮಾರ್ಟ್ ಫೋನುಗಳ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಹೆಸರು ಮಾಡುತ್ತಿರುವ ಕ್ಸಿಯೋಮಿ ಭಾರತದ ಟಾಪ್ 5 ಸ್ಮಾರ್ಟ್ ಫೋನುಗಳಲ್ಲಿ ಮೊದಲನೇ ಸ್ಥಾನದಲ್ಲೇ ಮುಂದುವರಿದಿದೆ.

ಇಂಟರ್‌ನ್ಯಾಷನಲ್‌ ಡಾಟಾ ಕಾರ್ಪೋರೇಷನ್(ಐಡಿಸಿ) ತನ್ನ ಮೂರನೇ ತ್ರೈಮಾಸಿಕ ವರದಿಯಲ್ಲಿ ಈ ಕುರಿತು ಮಾಹಿತಿ ಬಹಿರಂಗ ಪಡಿಸಿದೆ. ಕ್ಸಿಯೋಮಿ ತನ್ನ 2018ರ ತ್ರೈಮಾಸಿಕ ವರದಿಯಲ್ಲಿ ಶೇ.27ರಷ್ಟು ಶೇರನ್ನು ಹೊಂದುವ ಮೂಲಕ ಭಾರತದ ಟಾಪ್ 5 ಮೊಬೈಲ್ ಕಂಪನಿಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

Mi Fans, Xiaomi has been the #1SmartphoneBrand for 5 quarters in a row as per the latest @IDC report. Now, that calls for a No. 1 celebration and how?
Interesting trivia : @XiaomiIndia has an amazing 42% share of dual camera phones. pic.twitter.com/z26e68zfFv

— Xiaomi India (@XiaomiIndia) November 16, 2018

ಯಾವ ಕಂಪನಿಯ ಪಾಲು ಎಷ್ಟು?
ಕ್ಸಿಯೋಮಿ: 2018ರ ತ್ರೈಮಾಸಿಕ ವರದಿಗಳ ಪ್ರಕಾರ ಕ್ಸಿಯೋಮಿ ಶೇ.27ರಷ್ಟು ಶೇರನ್ನು ಹೊಂದುವುದರ ಮೂಲಕ ಭಾರತದಲ್ಲಿ ಅಧಿಪತ್ಯ ಸಾಧಿಸಿದೆ. ತನ್ನ ಆವೃತ್ತಿಗಳಾದ ರೆಡ್‍ಮಿ 5ಎ ಹಾಗೂ ರೆಡ್‍ಮಿ ನೋಟ್ 5 ಪ್ರೋ ಮುಖಾಂತರ ಈ ಸಾಧನೆಗೇರುವಲ್ಲಿ ಕ್ಸಿಯೋಮಿ ಯಶಸ್ವಿಯಾಗಿದೆ. ಈ ಅವಧಿಯಲ್ಲಿ 50 ಲಕ್ಷ ಫೋನುಗಳನ್ನು ಕ್ಸಿಯೋಮಿ ಮಾರಾಟ ಮಾಡಿದೆ. ಇದರಲ್ಲಿ ಶೇ.48.9ರಷ್ಟನ್ನು ಆನ್‍ಲೈನ್ ಮೂಲಕವೇ ವಹಿವಾಟು ನಡೆಸಿದೆ. ಅಲ್ಲದೇ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿಯೂ ಮಾರಾಟವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗುತ್ತಿದೆ. ಇದನ್ನೂ ಓದಿ: ಕ್ಸಿಯೋಮಿಯ ಮೂರು ಫೋನ್‍ಗಳ ಬೆಲೆ ದಿಢೀರ್ ಭಾರೀ ಇಳಿಕೆ

IDC 2

ಸ್ಯಾಮಸಂಗ್: 2018ರ ತ್ರೈಮಾಸಿಕ ವರದಿಯಲ್ಲಿ 2ನೇ ಸ್ಥಾನವನ್ನು ಗಳಿಸುವಲ್ಲಿ ಸ್ಯಾಮಸಂಗ್ ಯಶಸ್ವಿಯಾಗಿದೆ. ಕಳೆದ ಮೂರು ತ್ರೈಮಾಸಿಕ ವರದಿಗಳ ಪ್ರಕಾರ ಚೀನಾದ ಕ್ಸಿಯೋಮಿ, ವಿವೊ ಹಾಗೂ ಒಪ್ಪೊದ ಹೊಡೆತದಿಂದಾಗಿ, ಭಾರತದ ಮಾರುಕಟ್ಟೆಯ ಹಿಡಿತವನ್ನು ಸಾಧಿಸಲು ವಿಫಲವಾಗಿತ್ತು. ತನ್ನ ನೂತನ ಗೆಲಾಕ್ಸಿ ಜೆ2, ಜೆ8, ಜೆ4 ಹಾಗೂ ಇತ್ತೀಚೆಗೆ ಬಿಡುಗಡೆಯಾದ ಆಂಡ್ರಾಯ್ಡ್ ಗೋ ಮಾದರಿಯ ಗೆಲಾಕ್ಸಿ ಜೆ 2 ಕೋರ್ ಸ್ಮಾರ್ಟ್ ಫೋನ್‍ಗಳ ಮುಖಾಂತರ 4.8ರಷ್ಟು ವಹಿವಾಟನ್ನು ವೃದ್ಧಿಸಿಕೊಂಡು ಶೇ.22.6ರಷ್ಟು ಮಾರುಕಟ್ಟೆಯನ್ನು ಗಳಿಸಿಕೊಂಡಿದೆ.

samsung

ವಿವೋ: ಮೂರನೇ ಸ್ಥಾನದಲ್ಲಿರುವ ವಿವೋ ಒಟ್ಟಾರೆಯಾಗಿ 2018ರ ತ್ರೈಮಾಸಿಕ ವರದಿಗಳ ಪ್ರಕಾರ ಶೇ.10.6ರಷ್ಟು ಪಾಲನ್ನು ಭಾರತದಲ್ಲಿ ಸಾಧಿಸಿದೆ. 2017ಕ್ಕೆ ಹೋಲಿಸಿದರೆ ವಿವೋ ಶೇ.35.4ರಷ್ಟು ಪ್ರಾಬಲ್ಯ ಹೊಂದಿದೆ. ವಿವೋ ಹೊಸದಾಗಿ ಬಿಡುಗಡೆಮಾಡಿದ ವೈ 81 ಮತ್ತು ವೈ83 ಪ್ರೋ ಮಾದರಿಗಳಿಂದ ಹೆಚ್ಚಿನ ಮಾರುಕಟ್ಟೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೇ ತನ್ನ ವೈ71 ಹಾಗೂ ವಿ11 ಮತ್ತು ವಿ11 ಪ್ರೋ ಮಾದರಿಗಳು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ವಿವೋ ಉತ್ತಮ ಪ್ರಚಾರ ಹಾಗೂ ಐಪಿಲ್ ನಂತಹ ಪಂದ್ಯಾವಳಿಗಳಿಗೆ ಪ್ರಾಯೋಜಕತ್ವವನ್ನು ಪಡೆಯುವ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯಲು ಸಫಲವಾಗಿತ್ತು.

IDCಮೈಕ್ರೋಮ್ಯಾಕ್ಸ್: ಟಾಪ್ 5 ಸ್ಥಾನಗಳಲ್ಲೇ ಇರುತ್ತಿದ್ದ ಮೈಕ್ರೋಮ್ಯಾಕ್ಸ್ ಇತ್ತೀಚಿನ ದಿನಗಳಲ್ಲಿ 7ನೇ ಸ್ಥಾನಕ್ಕೆ ಕುಸಿದಿತ್ತು. ನಂತರ ಜಿಯೋ ಸಹಭಾಗಿತ್ವದೊಂದಿಗೆ ಛತ್ತೀಸಗಡ್ ರಾಜ್ಯದಲ್ಲಿ ದುರ್ಬಲ ಮಹಿಳಾ ಮತ್ತು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಸರಬರಾಜು ಮಾಡುವ ಟೆಂಡರ್ ಪಡೆದುಕೊಂಡು, ಮತ್ತೆ ಟಾಪ್ ನಾಲ್ಕನೇ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. 2018ರ ತ್ರೈಮಾಸಿಕ ವರದಿಗಳ ಪ್ರಕಾರ ಮೈಕ್ರೋಮ್ಯಾಕ್ಸ್ ಶೇ.6.9ರಷ್ಟು ಮಾರುಕಟ್ಟೆಯನ್ನು ಹೊಂದಿದೆ. ಆದರೆ 2017ರ ತ್ರೈಮಾಸಿಕಕ್ಕೆ ಹೋಲಿಸಿದರೆ 2018ರಲ್ಲಿ ಶೇ. 77.3 ಬೆಳವಣಿಗೆ ಸಾಧಿಸಿದೆ.

Oppo Vibo Logo

ಒಪ್ಪೋ: ಐದನೇ ಸ್ಥಾನ ಪಡೆದುಕೊಂಡಿರುವ ಒಪ್ಪೋ, ತನ್ನ 2018ರ ತ್ರೈಮಾಸಿಕ ವರದಿಯಲ್ಲಿ 6.7ರಷ್ಟು ಗಳಿಸುವ ಮೂಲಕ ಭಾರತದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಸರಿಯಾದ ಪ್ರಚಾರ ಕೈಗೊಳ್ಳದೇ ಇರುವುದು ಹಾಗೂ ಗ್ರಾಹಕರನ್ನು ಸೆಳೆಯುವಲ್ಲಿ ಒಪ್ಪೋ ವಿಫಲವಾಗಿದೆ. ಹೊಸದಾಗಿ ಬಿಡುಗಡೆಯಾದ ಎಫ್9 ಹಾಗೂ ಎಫ್9 ಪ್ರೋ ಸ್ಮಾರ್ಟ್ ಫೋನುಗಳು ಗ್ರಾಹಕರನ್ನು ವಿಫಲವಾಗಿದೆ. ತನ್ನ ಹೈ-ಎಂಡ್ ಮೊಬೈಲ್ ಆದ ಒಪ್ಪೋ-ಎಕ್ಸ್ ಅವತರಣೆಯ ಸಿದ್ಧತೆಯಲ್ಲಿ ತೊಡಗಿದ್ದರಿಂದ ಮಾರುಕಟ್ಟೆಯನ್ನು ಕಳೆದುಕೊಂಡಿದೆ ಎಂದು ಐಡಿಸಿ ತಿಳಿಸಿದೆ.

Micromax New Logo

IDC #India Report: #eTailer Aggression Drives the #Smartphone Market in India in 3Q2018; Market Clocks Highest Ever Shipments https://t.co/8voepk4ShS #data #analytics #mobile #mobility #smartphones #phone #phones #tech #technews #technology #technologynews pic.twitter.com/dXA92wQGqN

— IDC (@IDC) November 15, 2018

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

TAGGED:IDCmicromaxNew DelhioppoPublic TVreportSamsungsmartphoneVivoxiaomiಐಡಿಸಿಒಪ್ಪೋಕ್ಸಿಯೋಮಿನವದೆಹಲಿಪಬ್ಲಿಕ್ ಟಿವಿಮೈಕ್ರೋಮ್ಯಾಕ್ಸ್ವರದಿವಿವೊಸ್ಮಾರ್ಟ್ ಫೋನ್ಸ್ಯಾಮಸಂಗ್
Share This Article
Facebook Whatsapp Whatsapp Telegram

Cinema news

Salman Khan
ಸಲ್ಮಾನ್ ಖಾನ್ ಅಭಿನಯದ `ಬ್ಯಾಟಲ್ ಆಫ್ ಗಲ್ವಾನ್’ ಈಗ `ಮಾತೃಭೂಮಿ’
Bollywood Cinema Latest Top Stories
Oscars 2026 Michael B Jordan Jessie Buckley
Oscars 2026: ಮೈಕೆಲ್ ಬಿ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ
Cinema Latest Top Stories World
Dhurandhar 2 Trailer
ರಿಲೀಸ್‌ಗೂ ಮುನ್ನವೇ 100 ಕೋಟಿ ಬಾಚಿದ ಧುರಂಧರ್‌-2
Bollywood Cinema Latest Top Stories
chandanavana film critics academy awards
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ – ಅತಿ ಹೆಚ್ಚು ನಾಮನಿರ್ದೇಶಿತರು ಯಾರು?
Cinema Latest Sandalwood Top Stories

You Might Also Like

Rashid Khan Kabul Hospital Attack
Cricket

ಪಾಕಿಸ್ತಾನ ಸೇನೆಯಿಂದ ಕೊಲೆ: ಕಾಬೂಲ್‌ ಆಸ್ಪತ್ರೆ ಮೇಲಿನ ದಾಳಿ ಖಂಡಿಸಿದ ಕ್ರಿಕೆಟರ್ ರಶೀದ್‌ ಖಾನ್‌

Public TV
By Public TV
13 minutes ago
Cyber Crime
Bengaluru City

ವೃದ್ಧೆಗೆ ಡಿಜಿಟಲ್ ಅರೆಸ್ಟ್ – ಬರೋಬ್ಬರಿ 38 ಲಕ್ಷ ರೂ. ವಂಚನೆ

Public TV
By Public TV
21 minutes ago
tiger death chamarajanagara
Chamarajanagar

ಚಾ.ನಗರ| ಕೇರಳಿಗ ಜಮೀನಿಗೆ ಅಳವಡಿಸಿದ್ದ ಅಕ್ರಮ ವಿದ್ಯುತ್ ತಂತಿ ಸ್ಪರ್ಶಿಸಿ ಹುಲಿ ಸಾವು

Public TV
By Public TV
54 minutes ago
Raichur KKRTC Accident Woman Death
Crime

ಬಸ್ ನಿಲ್ದಾಣದಲ್ಲಿ ಕೆಕೆಆರ್‌ಟಿಸಿ ಬಸ್ ಹರಿದು ಮಹಿಳೆ ಸಾವು

Public TV
By Public TV
57 minutes ago
kabul hospital pakistan strike
Latest

ಅಫ್ಘಾನ್‌ ಇತಿಹಾಸದಲ್ಲೇ ಅತ್ಯಂತ ಭೀಕರ: ಕಾಬೂಲ್‌ ಆಸ್ಪತ್ರೆ ಮೇಲೆ ಪಾಕಿಸ್ತಾನ ದಾಳಿ – 400 ಜನರು ಸಾವು

Public TV
By Public TV
1 hour ago
Iran Israel War
Latest

18ನೇ ದಿನಕ್ಕೆ ಕಾಲಿಟ್ಟ ಯುದ್ಧ – ಇರಾನ್‌ನ 200ಕ್ಕೂ ಹೆಚ್ಚು ಸೇನಾ ನೆಲೆಗಳು ಉಡೀಸ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?