Friday, 13th December 2019

ಕ್ಸಿಯೋಮಿಯ ಮೂರು ಫೋನ್‍ಗಳ ಬೆಲೆ ದಿಢೀರ್ ಭಾರೀ ಇಳಿಕೆ

ನವದೆಹಲಿ: ಬಜೆಟ್ ಗಾತ್ರದ ಮೊಬೈಲ್ ತಯಾರಿಕಾ ಕಂಪನಿ ಕ್ಸಿಯೋಮಿ ತನ್ನ ಮೂರು ಸ್ಮಾರ್ಟ್ ಫೋನ್‍ಗಳ ದರವನ್ನು ಕಡಿತಗೊಳಿಸಿದೆ.

ಹೌದು, ಕ್ಸಿಯೋಮಿ ತನ್ನ ರೆಡ್‍ಮಿ ನೋಟ್ 5 ಪ್ರೋ, ರೆಡ್‍ಮಿ ವೈ2 ಹಾಗೂ ಎಂಐ ಎ2 ಸ್ಮಾರ್ಟ್ ಫೋನ್‍ಗಳ ಮೇಲಿನ ದರದಲ್ಲಿ 1,000 ಸಾವಿರ ರೂಪಾಯಿಯನ್ನು ಕಡಿತಗೊಳಿಸಿದೆ. ಈ ದರಗಳು ಶುಕ್ರವಾರ ಮಧ್ಯಾಹ್ನ 12 ಗಂಟೆಯಿಂದ ಜಾರಿಯಾಗಲಿದೆ. ಅಲ್ಲದೇ ಎಲ್ಲಾ ಆನ್‍ಲೈನ್ ಹಾಗೂ ಆಫ್‍ಲೈನ್ ಮಾರುಕಟ್ಟೆಗಳಲ್ಲಿ ನೂತನ ದರ ಅನ್ವಯವಾಗಲಿದೆ ಎಂದು ಕಂಪನಿ ತಿಳಿಸಿದೆ.

 

ಮಾಹಿತಿಗಳ ಪ್ರಕಾರ ಕ್ಸಿಯೋಮಿ ಸ್ಮಾರ್ಟ್ ಫೋನ್‍ಗಳ ತಯಾರಿಕಾ ವೆಚ್ಚ ಕಡಿಮೆಯಾದ ಹಿನ್ನೆಲೆಯಲ್ಲಿ ಕಂಪನಿ ತನ್ನ ಮೂರು ಮಾದರಿಗಳ ಬೆಲೆಯನ್ನು ಕಡಿತಗೊಳಿಸಿದೆ. ಅಲ್ಲದೇ ತಯಾರಿಕಾ ವೆಚ್ಚದಿಂದ ಉಳಿದ ಹಣವನ್ನು ಗ್ರಾಹಕರಿಗೆ ನೀಡುವ ಉದ್ದೇಶದಿಂದ ಸಂಸ್ಥೆ ದರ ಇಳಿಸಿದೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಬಹುತೇಕ ಮಂದಿ ಕ್ಸಿಯೋಮಿ ಸ್ಮಾರ್ಟ್ ಫೋನಿನ ಗ್ರಾಹಕರಾಗಿದ್ದಾರೆ. ಹೀಗಾಗಿ ಕಂಪನಿ ಗ್ರಾಹಕರಿಗಾಗಿಯೇ ದರ ಇಳಿಸಿದೆ.

ತನ್ನ ಸ್ಮಾರ್ಟ್ ಫೋನ್ ದರಗಳನ್ನು ಇಳಿಸಿದ ಬೆನ್ನಲ್ಲೇ, ಇದೇ ನವೆಂಬರ್ 22ರಂದು ಕ್ಸಿಯೋಮಿ ತನ್ನ ನೂತನ ರೆಡ್‍ಮೀ ನೋಟ್ 6 ಪ್ರೋ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದೆ.

ರೆಡ್‍ಮಿ ನೋಟ್ 5 ಪ್ರೋ ದರ ಎಷ್ಟಿತ್ತು? ಎಷ್ಟಾಗಿದೆ?

4ಜಿಬಿ ರ‍್ಯಾಮ್ ಹಾಗೂ 64 ಜಿಬಿ ಆವೃತ್ತಿಗೆ ಈ ಮೊದಲು 14,999 ರೂ. ನಿಗದಿಯಾಗಿದ್ದರೆ, ಇಂದಿನಿಂದ 13,999 ರೂ.ಗೆ ಸಿಗಲಿದೆ. ಇದಲ್ಲದೇ 6ಜಿಬಿ ರ‍್ಯಾಮ್ ಹಾಗೂ 64 ಜಿಬಿ ಮಾದರಿಗೆ 16,999 ರೂ.ಗಳ ಬದಲಾಗಿ 15,999 ರೂ. ಆಗಿದೆ.

ಕ್ಸಿಯೋಮಿ ಎಂಐ ಎ2 ದರ ಎಷ್ಟಿತ್ತು? ಎಷ್ಟಾಗಿದೆ?

ಇತ್ತೀಚೆಗೆ ಬಿಡುಗಡೆ ಮಾಡಿದ್ದ ಎಂಐ ಎ2 4ಜಿಬಿ ರ‍್ಯಾಮ್ ಹಾಗೂ 64ಜಿಬಿ ಆವೃತ್ತಿಯ ಬೆಲೆ 16,999 ರೂಪಾಯಿಗಳಾಗಿತ್ತು. ಈಗ 15,999 ರೂ.ಆಗಿದೆ. ಇದಲ್ಲದೇ 6ಜಿಬಿ ರ‍್ಯಾಮ್ ಹಾಗೂ 128 ಜಿಬಿ ಆವೃತ್ತಿಗೆ 19,999 ರೂ. ಇತ್ತು. ಈಗ 18,999 ರೂ. ಆಗಿದೆ.

ಕ್ಸಿಯೋಮಿ ರೆಡ್‍ಮೀ ವೈ2 ದರ ಎಷ್ಟಿತ್ತು? ಎಷ್ಟಾಗಿದೆ?

4 ಜಿಬಿ ರ‍್ಯಾಮ್ ಹಾಗೂ 64 ಜಿಬಿ ಆವೃತ್ತಿಗೆ ಈ ಮೊದಲು 12,999 ರೂ. ಇತ್ತು ಈಗ 11,9990 ರೂ.ಗೆ ಇಳಿಕೆಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply

Your email address will not be published. Required fields are marked *