ರಾಕಿಂಗ್ ಸ್ಟಾರ್ ಯಶ್ (Yash) ಅಭಿಯನದ ‘ರಾಮಾಯಣ’ (Ramayana) ಸಿನಿಮಾ 3ನೇ ಭಾನುವಾರ ಭಾರತದಲ್ಲಿ ಧುರಂಧರ್-2 ಗಿಂತ ಹೆಚ್ಚು ಗಳಿಕೆ ಮಾಡಿದೆ.
ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ನಿತೇಶ್ ತಿವಾರಿ ಅವರ ರಾಮಾಯಣ ಮೂರನೇ ವಾರಾಂತ್ಯದಲ್ಲಿ ಮತ್ತೊಂದು ಜಿಗಿತವನ್ನು ದಾಖಲಿಸಿತು. ದೇಶದಲ್ಲಿ 35.60 ಕೋಟಿ ರೂ. ಗಳಿಸಿದೆ. ರಾಮಾಯಣವು ಮೂರನೇ ಭಾನುವಾರದಂದು ರಣವೀರ್ ಸಿಂಗ್ ಅವರ ಧುರಂಧರ್-2 (Dhurandhar 2) ಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ. ರಾಮಾಯಣದ ದೇಶೀಯ ಸಂಗ್ರಹವು ಭಾರತದಲ್ಲಿ 942.75 ಕೋಟಿ ರೂ. ತಲುಪಿದೆ.
ವಿಶ್ವಾದ್ಯಂತ ಒಟ್ಟು ಗಳಿಕೆ 1,693 ಕೋಟಿ ರೂ. ತಲುಪಿದ್ದು, 18ನೇ ದಿನದ ನಂತರ ಧುರಂಧರ್-2 ಗಿಂತ 81 ಕೋಟಿ ರೂ.ಗಳಷ್ಟು ಮುಂದಿದೆ. ಸ್ಯಾಕ್ನಿಲ್ಕ್ ಪ್ರಕಾರ, 18ನೇ ದಿನದಂದು ರಾಮಾಯಣ 16,277 ಪ್ರದರ್ಶನಗಳಲ್ಲಿ 35.60 ಕೋಟಿ ರೂ. ಸಂಗ್ರಹಿಸಿದೆ. ಇದನ್ನೂ ಓದಿ: ಎಲ್ಲೆಲ್ಲೂ ‘ರಾಮಾಯಣ’ ಹವಾ; ವಿಶ್ವಾದ್ಯಂತ 1,600 ಕೋಟಿ ಗಡಿ ದಾಟಿದ ಯಶ್ ಸಿನಿಮಾ
ಈ ಚಿತ್ರವು ವಿದೇಶಗಳಲ್ಲಿ ಇಲ್ಲಿಯವರೆಗೆ 567 ಕೋಟಿ ರೂ. ಗಳಿಸಿದೆ. ಇದು ವಿಶ್ವಾದ್ಯಂತ ಒಟ್ಟು ಗಳಿಕೆಯನ್ನು 1,693 ಕೋಟಿ ರೂ.ಗೆ ಏರಿಸಿದೆ. 18ನೇ ದಿನದಂದು, ಹಿಂದಿ ಭಾಷೆಯ ಕೊಡುಗೆ ಒಟ್ಟು 13,852 ಪ್ರದರ್ಶನಗಳಿಂದ 26.25 ಕೋಟಿ ರೂ.ಗಳಾಗಿದೆ. ಕನ್ನಡದಲ್ಲಿ 2.50 ಕೋಟಿ ರೂ., ತಮಿಳಿನಲ್ಲಿ 2.40 ಕೋಟಿ ರೂ., ತೆಲುಗಿನಲ್ಲಿ 1.05 ರೂ. ಮತ್ತು ಮಲಯಾಳಂನಲ್ಲಿ 3.40 ಕೋಟಿ ರೂ. ಗಳಿಸಿದೆ.
ಬಿಡುಗಡೆಯಾದಾಗಿನಿಂದ ಚಿತ್ರದ ಹಿಂದಿ ವ್ಯವಹಾರವನ್ನು ಗಮನಿಸುತ್ತಿರುವ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್, ವಾರಾಂತ್ಯದಲ್ಲಿ ಚಿತ್ರ ಅದ್ಭುತ ಬೆಳವಣಿಗೆಯನ್ನು ತೋರಿಸಿದೆ ಎಂದು ಹೇಳಿದ್ದಾರೆ. ದೇಶೀಯ ಬಾಕ್ಸಾಫೀಸ್ನಲ್ಲಿ ಹಿಂದಿ ನಿವ್ವಳ ಕಲೆಕ್ಷನ್ನಲ್ಲಿ ಈಗಾಗಲೇ ಕೆಲವು ದಾಖಲೆಗಳನ್ನು ನಿರ್ಮಿಸಿರುವ ರಾಮಾಯಣ, ಶೀಘ್ರದಲ್ಲೇ 700 ಕೋಟಿ ರೂ.ಗಳನ್ನು ದಾಟಲಿದೆ. ಧುರಂಧರ್-2 10 ದಿನಗಳಲ್ಲಿ ಈ ಸಾಧನೆ ಮಾಡಿದರೆ, ರಾಮಾಯಣ ಸುಮಾರು 18 ದಿನಗಳನ್ನು ತೆಗೆದುಕೊಂಡು ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಪುಷ್ಪ-2 ಚಿತ್ರವು ಹಿಂದಿಯಲ್ಲಿ 700 ಕೋಟಿ ಗಳಿಕೆಯನ್ನು ತಲುಪಲು 20 ದಿನಗಳನ್ನು ತೆಗೆದುಕೊಂಡಿತ್ತು. ಧುರಂಧರ್ ಚಿತ್ರವು 25 ದಿನಗಳಲ್ಲಿ ಈ ಪ್ರಮಾಣದ ಮೊತ್ತ ಗಳಿಸಿತ್ತು. ಇದನ್ನೂ ಓದಿ: ರಾಮಾಯಣದಲ್ಲಿ ರಾವಣ ಪಾತ್ರಕ್ಕಾಗಿ ಯಶ್ ಡಯೆಟ್, ವರ್ಕೌಟ್ ದಿನಚರಿ ಹೇಗಿತ್ತು?
