ನವದೆಹಲಿ: ಕಳೆದ ಕೆಲ ದಿನಗಳಿಂದ ಇಳಿಕೆ ಕಾಣುತ್ತಿರುವ ಚಿನ್ನದ ದರ (Gold Price) ಈ ವಾರ ಮತ್ತೆ ಇಳಿಕೆಯಾಗುವ ಸಾಧ್ಯತೆಯಿದೆ.
ಕಳೆದ 3 ತಿಂಗಳಲ್ಲಿ ಚಿನ್ನ ದರ ಭರ್ಜರಿಯಾಗಿ ಇಳಿಕೆಯಾಗಿದೆ. 10 ಗ್ರಾಂಗೆ 30,000 ರೂ.ವರೆಗೆ ಹಾಗೂ ಕೆಜಿಗೆ 1.50 ಲಕ್ಷ ರೂ.ವರೆಗೂ ದರ ಕಡಿಮೆಯಾಗಿದೆ. ಈ ವಾರ ಮತ್ತೆ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಹರಿಯಾಣ | ತರಬೇತಿ ವೇಳೆ ಟ್ಯಾಂಕ್ ಹರಿದು ಇಬ್ಬರು ಯೋಧರು ಹುತಾತ್ಮ
ಶೀಘ್ರವೇ ಅಮೆರಿಕ ಸರ್ಕಾರ ಹಣದುಬ್ಬರದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಿದೆ. ಇದರ ಆಧಾರದ ಮೇಲೆ ಅಮೆರಿಕದ ಕೇಂದ್ರೀಯ ಬ್ಯಾಂಕ್ ತನ್ನ ಬಡ್ಡಿದರದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಹೂಡಿಕೆದಾರರು ಅಮೆರಿಕದ ಮೇಲೆ ಕಣ್ಣಿಟ್ಟಿದ್ದು, ಹಣದುಬ್ಬರದ ಅಂಕಿ ಅಂಶ ಹಾಗೂ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಆಗುವವರೆಗೂ ಸದ್ಯ ಇಳಿಕೆ ಹಾದಿಯಲ್ಲಿರುವ ಚಿನ್ನ ಮತ್ತು ಬೆಳ್ಳಿಯ ದರ ಮತ್ತಷ್ಟು ಕುಸಿತ ಕಾಣುವ ಸಾಧ್ಯತೆ ಇದೆ.
ಕಳೆದ ಆಗಸ್ಟ್ನಿಂದ ಇಲ್ಲಿಯವರೆಗೆ ಚಿನ್ನ ಹಾಗೂ ಬೆಳ್ಳಿ ಬೆಲೆ ಹಂತ ಹಂತವಾಗಿ ಇಳಿಯುತ್ತಾ ಬಂದಿದೆ.ಇದನ್ನೂ ಓದಿ: ಬಿಸ್ಲೆರಿ ವಾಟರ್ ಪ್ರಿಯರಿಗೆ ಶಾಕ್ – ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಅಸುರಕ್ಷಿತ
