– ಸಿಎಂ ಅಭ್ಯರ್ಥಿಯಾಗಿ ಚಂದ್ರಶೇಖರ್ ಆಜಾದ್ ಆಯ್ಕೆ
– ಎಲ್ಲ 403 ಕ್ಷೇತ್ರಗಳಲ್ಲೂ ಸ್ಪರ್ಧೆ
ಲಕ್ನೋ: 2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ(Uttar Pradesh Assembly elections) ಮುನ್ನ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಒವೈಸಿ(Asaduddin Owaisi) ಹಾಗೂ ಆಜಾದ್ ಸಮಾಜ ಪಕ್ಷ (ಕಾನ್ಶಿರಾಮ್) ಅಧ್ಯಕ್ಷ, ಸಂಸದ ಚಂದ್ರಶೇಖರ್ ಆಜಾದ್ ಅವರು ಕೈಜೋಡಿಸಿದ್ದುಸಾಮಾಜಿಕ ಪರಿವರ್ತನ ಮೋರ್ಚಾ ಎಂಬ ಹೊಸ ರಾಜಕೀಯ ಮೈತ್ರಿಕೂಟವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ರಾಜ್ಯದ ಎಲ್ಲ 403 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮೈತ್ರಿಕೂಟದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದ್ದು, ಚಂದ್ರಶೇಖರ್ ಆಜಾದ್(Chandrashekhar Azad) ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.
ಗುರುವಾರ ಲಕ್ನೋದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮೈತ್ರಿಯನ್ನು ಪ್ರಕಟಿಸಿ ಮಾತನಾಡಿದ ಅಸಾದುದ್ದೀನ್ ಒವೈಸಿ, ಉತ್ತರ ಪ್ರದೇಶದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದನ್ನು ತಡೆಯುವುದೇ ನಮ್ಮ ಮೈತ್ರಿಯ ಪ್ರಮುಖ ಗುರಿಯಾಗಿದೆ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ಶೋಷಿತ ಸಮುದಾಯಗಳ ಸಮಸ್ಯೆಗಳಿಗೆ ಧ್ವನಿಯಾಗುವ ಬಲಿಷ್ಠ ರಾಜಕೀಯ ಪರ್ಯಾಯವಾಗಿ ಈ ಮೈತ್ರಿ ರೂಪುಗೊಳ್ಳಲಿದೆ ಎಂದು ಹೇಳಿದರು.
ಚಂದ್ರಶೇಖರ್ ಆಜಾದ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಿದ ಒವೈಸಿ, ಆಜಾದ್ ಅವರು ಮುಖ್ಯಮಂತ್ರಿಯಾದಾಗ ಮಾತ್ರ ನಾವು ಉದ್ದೇಶಿಸಿರುವ ಸಾಮಾಜಿಕ ಬದಲಾವಣೆಯ ಗುರಿಗಳನ್ನು ಸಾಧಿಸಲು ಸಾಧ್ಯ. ರಾಜ್ಯದ ಯುವಜನರು ನಿರುದ್ಯೋಗದಿಂದ ಬಳಲುತ್ತಿದ್ದಾರೆ, ರೈತರು ಸಂಕಷ್ಟದಲ್ಲಿದ್ದಾರೆ ಹಾಗೂ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ. ಇತರ ರಾಜಕೀಯ ಪಕ್ಷಗಳು ದಲಿತರು ಮತ್ತು ಹಿಂದುಳಿದವರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡಿವೆ. ನಾವು ಈ ಮೂಲಭೂತ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.
#WATCH | Uttar Pradesh | Azad Samaj Party-Kanshiram President and MP, Chandrashekhar Azad and AIMIM chief Asaduddin Owaisi form ‘Samajik Parivartan Morcha’ for UP polls
AIMIM chief Asaduddin Owaisi says, “We have decided to form ‘Samajik Parivartan Morcha’. I can say with confidence this will be a strong Morcha to stop the BJP from coming to power in UP for the third time.”
— ANI (@ANI) November 12, 2026
ಮೈತ್ರಿಕೂಟವನ್ನು ಕೇವಲ ‘ಮೂರನೇ ರಾಜಕೀಯ ರಂಗ’ ಎಂದು ಕರೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚಂದ್ರಶೇಖರ್ ಆಜಾದ್, ಇದು ಮೂರನೇ ರಂಗವಲ್ಲ, ಬದಲಾಗಿ ಸಾಮಾಜಿಕ ಬದಲಾವಣೆಗಾಗಿ ರೂಪುಗೊಂಡಿರುವ ಮೊದಲ ರಂಗ ಎಂದು ಬಣ್ಣಿಸಿದರು. ಇದನ್ನೂ ಓದಿ: ಗುಂಡು ಹಾರಿಸಿ ಕ್ಷಣಾರ್ಧದಲ್ಲಿ ಪರಾರಿಯಾಗುವ ನರರಾಕ್ಷಸ – CRPF ಚೆಕ್ಪೋಸ್ಟ್ ಮೇಲೆ ಉಗ್ರ ಲತೀಫ್ ಭಟ್ನಿಂದ ದಾಳಿ ಶಂಕೆ
#WATCH | Uttar Pradesh | Azad Samaj Party-Kanshiram President and MP, Chandrashekhar Azad and AIMIM chief Asaduddin Owaisi announce ‘Samajik Parivartan Morcha’ for UP polls
Azad Samaj Party-Kanshiram President Chandrashekhar Azad says, “This is not a ‘Third Front’, but a front for social change. It is strong, and it will grow even stronger. As more people from the marginalized, deprived, oppressed, exploited, and downtrodden sections join, this front will become an even more formidable force for those who are oppressed, helpless, and exploited….They promised to eradicate our poverty and helplessness, and to put an end to the oppression, caste-based violence, and atrocities inflicted upon us. But it turned out to be a deception—those who spoke of uplifting us, of bringing us into the mainstream, went on to become MLAs, MPs,
Chief Ministers, and even Prime Ministers. Yet, this marginalised community remains exactly where it has always been. The truth is that governments kept changing, announcements kept being made, and even today, the Bahujan community remains deprived of basic amenities…”— ANI (@ANI) November 12, 2026
ಸೀಟು ಹಂಚಿಕೆ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ ಆಜಾದ್, “ಬಿಜೆಪಿ ಸರ್ಕಾರದ ವಿರುದ್ಧದ ಈ ಹೋರಾಟದಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಕೂಡ ನಮ್ಮ ಮೈತ್ರಿಕೂಟದೊಂದಿಗೆ ಕೈಜೋಡಿಸಬಹುದು. ಅವರು ಬರಲು ಬಯಸಿದರೆ ಸ್ವಾಗತಿಸುತ್ತೇವೆ” ಎಂದು ಮುಕ್ತ ಆಹ್ವಾನ ನೀಡಿದರು.
ಸಾಮಾಜಿಕ ಪರಿವರ್ತನೆಯ ಚಳವಳಿಗೆ ರಾಜ್ಯಾದ್ಯಂತ ಚಾಲನೆ ನೀಡುವ ಉದ್ದೇಶದಿಂದ ಇದೇ ನವೆಂಬರ್ 26ರಂದು ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗುವುದು ಎಂದು ಅಸಾದುದ್ದೀನ್ ಒವೈಸಿ ಇದೇ ಸಂದರ್ಭದಲ್ಲಿ ಘೋಷಿಸಿದರು.
