ಬೆಂಗಳೂರು: ವಾಹನಗಳ ಮೈಲೇಜ್ ಕಡಿಮೆ ಆಗ್ತಿರೋದು ಎಥೆನಾಲ್ (Ethanol) ಮಿಶ್ರಣದಿಂದಲ್ಲ ಬದಲಾಗಿ ಬೆಂಗಳೂರಿನ ರಸ್ತೆಗುಂಡಿಗಳಿಂದ (Road Pothole) ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಪ್ರತಿಪಾದಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಹನಗಳ ಮೈಲೇಜ್ ಎಥೆನಾಲ್ನಿಂದ ಕಮ್ಮಿ ಆಗಿಲ್ಲ. ರಸ್ತೆಗುಂಡಿಗಳಿಂದ ವಾಹನಗಳ ಮೈಲೇಜ್ ಕಡಿಮೆ ಆಗುತ್ತಿದೆ. ಹಿಂದೆ ಬೆಂಗಳೂರಿನಲ್ಲಿ ಮೈಲೇಜ್ ಸರಾಸರಿ 18 ಕಿ.ಮೀ ಇತ್ತು, ಈಗ ರಸ್ತೆಗಳ ಗುಂಡಿಗಳಿಂದ 11 ಕಿ.ಮೀಗೆ ಇಳಿದಿದೆ ಎಂದು ಹೊಸ ವಾದ ಮುಂದೆ ಇಟ್ಟರು. ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಕೇಂದ್ರದ ಪಾಲು 53.35%, ರಾಜ್ಯದ ಪಾಲು 46.65%: ಕಾಂಗ್ರೆಸ್ ಸರ್ಕಾರಕ್ಕೆ ತೇಜಸ್ವಿ ತಿರುಗೇಟು
ರಾಜ್ಯದಲ್ಲಿ ದರ ಏರಿಕೆ ವಿರುದ್ಧ ಜನಾಕ್ರೋಶ ಇದೆ. ಆದ್ರೆ ಇದನ್ನು ಡೈವರ್ಟ್ ಮಾಡಲು ಎಥೆನಾಲ್ ವಿಚಾರ ತಂದು ಡಿಕೆಶಿ ಟ್ರಿಕ್ಸ್ ಮಾಡಿದ್ದಾರೆ. ಬೇರೆ ರಾಜ್ಯಗಳಲ್ಲಿ ಇಲ್ಲದ ಸಮಸ್ಯೆ ಕರ್ನಾಟಕದಲ್ಲಷ್ಟೇ ಏಕಿದೆ? ಪರಿಸರ ಸ್ನೇಹಿ ಹಾಗೂ ರೈತ ಸ್ನೇಹಿ ಎಥೆನಾಲ್ ಅನ್ನು ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ವಿರೋಧಿಸುತ್ತಿದೆ. 1.60 ಲಕ್ಷ ಕೋಟಿಯಷ್ಟು ನೆರವು ಎಥೆನಾಲ್ ಮಿಶ್ರಣದಿಂದ ರೈತರಿಗೆ ಸಿಕ್ಕಿದೆ. ಎಥೆನಾಲ್ ಬಳಕೆಯಿಂದ ದೇಶದಲ್ಲಿ 350 ಟನ್ ಕಚ್ಚಾ ತೈಲ ಬಳಕೆ ಕಡಿಮೆ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಟೇಕಾಫ್ ವೇಳೆ ರನ್ವೇಯಿಂದ ಪಕ್ಕಕ್ಕೆ ಜಾರಿ ಬಿದ್ದ ವಿಮಾನ – ತಪ್ಪಿದ ದುರಂತ
ಇನ್ನು ಎಥೆನಾಲ್ ಪರೀಕ್ಷೆ ವೇಳೆ ರಾಜ್ಯ ಸರ್ಕಾರ ನಿಯಮ ಪಾಲನೆ ಮಾಡಿಲ್ಲ.1 ಲೀಟರ್ ನಲ್ಲಿ ಆರು ಸ್ಯಾಂಪಲ್ ಸಂಗ್ರಹ ಮಾಡಬೇಕು. ಪೆಟ್ರೋಲ್ ಬಂಕ್ ಮಾಲೀಕ, ತೈಲ ಕಂಪೆನಿ ಹಾಗೂ ಲ್ಯಾಬ್ಗೆ ಒಂದೊಂದು ಸ್ಯಾಂಪಲ್ ಕೊಡಬೇಕು. ಈ ನಿಯಮ ರಾಜ್ಯದಿಂದ ಪಾಲನೆ ಆಗಿಲ್ಲ. ಕೇಂದ್ರ ಸಚಿವರ ಬಳಿಯೂ ಹೋಗಿ ದೂರು ಕೊಟ್ಟಿಲ್ಲ. ಎಥೆನಾಲ್ ಬಳಕೆ ಪ್ರೋತ್ಸಾಹದಿಂದಲೇ ರಾಜ್ಯಕ್ಕೆ ಇದುವರೆಗೆ 10 ಸಾವಿರ ಕೋಟಿ ಅನುದಾನ ಬಂದಿದೆ. ಎಥೆನಾಲ್ ಬೇಡ ಅಂದ್ರೆ ಈ ಹಣ ವಾಪಸ್ ಕೊಡಲಿ ಕೇಂದ್ರಕ್ಕೆ ಎಂದು ರಾಜ್ಯ ಸರ್ಕಾರಕ್ಕೆ ಸವಾಲೆಸೆದರು. ಇದನ್ನೂ ಓದಿ: ಬಿಡದಿ ಟೌನ್ಶಿಪ್ ಜಟಾಪಟಿ ನಡುವೆಯೇ ಜಿಬಿಡಿಎಗೆ ನೂತನ ಅಧ್ಯಕ್ಷರ ನೇಮಕ – ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಪುತ್ರನಿಗೆ ಸ್ಥಾನ
