ಚಂಡೀಗಢ: ದೀಪಾವಳಿ (Diwali) ಹಬ್ಬ ಹಿನ್ನೆಲೆ ಮನೆಯ ಹೊರಗೆ ಪಟಾಕಿ ಸಿಡಿಸುತ್ತಿದ್ದ 27 ವರ್ಷದ ಕುಸ್ತಿಪಟುವನ್ನು (Wrestler) ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬ್ನ (Punjab) ಕಪುರ್ತಲಾದಲ್ಲಿ (Kapurthala) ನಡೆದಿದೆ.
ಮೃತನನ್ನು ಕಪುರ್ತಲಾದ ಮೊಹಲ್ಲಾ ಮೆಹ್ತಾಬ್ಗಢ ನಿವಾಸಿ ಮಣಿ ಅಲಿಯಾಸ್ ಪೈಲ್ವಾನ್ ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಮನೆಯ ಹೊರಗೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸುತ್ತಿದ್ದ ವೇಳೆ ದುಷ್ಕರ್ಮಿಗಳು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: RSS ನಲ್ಲಿ ತಮ್ಮದೇ ಪ್ರಯತ್ನದಿಂದ ಅಧಿಕಾರಕ್ಕೇರಿದ್ರು – ಪ್ರಧಾನಿ ಮೋದಿ ರಾಜಕೀಯ ಬೆಳವಣಿಗೆ ಮೆಚ್ಚಿಕೊಂಡ ಸೋನಿಯಾ ಗಾಂಧಿ
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಮಣಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮಣಿಯ ತಂದೆ ಬಗ್ಗಾ ಅವರ ಪ್ರಕಾರ, ಇತ್ತೀಚೆಗಷ್ಟೇ ಮಣಿಗೆ ಮದುವೆಯಾಗಿತ್ತು. ಆತನಿಗೆ ಯಾರೊಂದಿಗೂ ಯಾವುದೇ ವೈಷಮ್ಯ ಅಥವಾ ಜಗಳ ಇರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿ | ಕುರಿ ಹಿಂಡಿನ ಮೇಲೆ ಲಾರಿ ಹರಿದು 80ಕ್ಕೂ ಹೆಚ್ಚು ಕುರಿಗಳು ಸಾವು
ಘಟನೆ ಕುರಿತು ಸಂಜೆ ಸುಮಾರು 7:30ರ ವೇಳೆಗೆ ಪೊಲೀಸರಿಗೆ ಗುಂಡಿನ ದಾಳಿಯ ಮಾಹಿತಿ ಲಭಿಸಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಗುಂಡೇಟಿನಿಂದ ಮಣಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಹಲವು ತಂಡಗಳನ್ನು ರಚಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಸರ್ಕಾರ ರೈತರನ್ನು ಭಿಕ್ಷುಕರು ಅನ್ಕೊಂಡಿದ್ಯಾ? – ರಾಜ್ಯ ಕಾಂಗ್ರೆಸ್ ವಿರುದ್ಧ ಛಲವಾದಿ ಕಿಡಿ
ಮಣಿಗೆ ನಾಲ್ವರು ಸಹೋದರಿಯರಿದ್ದು, ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ಇದನ್ನೂ ಓದಿ: 3ನೇ ಏಕದಿನ ಪಂದ್ಯದಲ್ಲಿ ಗೆದ್ದ ʻಮಳೆʼ – ಭಾರತ ಸರಣಿ ಗೆಲುವಿಗೆ ಇನ್ನೊಂದೇ ಹೆಜ್ಜೆ!
