-ರಾಜಸ್ಥಾನದ ಶ್ರೀಗಂಗಾನಗರ ಫಸ್ಟ್
ನವದೆಹಲಿ: ವಿಶ್ವದ 50 ಅತ್ಯಂತ ಮಾಲಿನ್ಯಯುಕ್ತ ನಗರಗಳ ಪೈಕಿ ಭಾರತದ (India) 49 ನಗರಗಳು ಸ್ಥಾನ ಪಡೆದುಕೊಂಡಿದ್ದು, ರಾಜಸ್ಥಾನದ (Rajasthan) ಶ್ರೀಗಂಗಾನಗರ (Shriganga Nagar) ವಿಶ್ವದಲ್ಲೇ ಅತ್ಯಂತ ಮಾಲಿನ್ಯಯುಕ್ತ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ದೆಹಲಿ 24ನೇ ಸ್ಥಾನ ಪಡೆದುಕೊಂಡಿದೆ.
ರಾಜಸ್ಥಾನದ ಶ್ರೀಗಂಗಾನಗರ ವಿಶ್ವದಲ್ಲೇ ಅತಿ ಹೆಚ್ಚು ಮಾಲಿನ್ಯಯುಕ್ತ ನಗರವಾಗಿದ್ದು, ಶ್ರೀಗಂಗಾನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 821ಕ್ಕೆ ಏರಿಕೆಯಾಗಿದೆ. ಕ್ರಮವಾಗಿ ಪಂಜಾಬ್ನ ಬಟಿಂಡಾ ನಗರಕ್ಕೆ ಎರಡನೇ ಸ್ಥಾನ (ಎಕ್ಯೂಐ 629), ಹರಿಯಾಣದ ಸಿರ್ಸಾ ನಗರಕ್ಕೆ ಮೂರನೇ ಸ್ಥಾನ (ಎಕ್ಯೂಐ 544) ಪಡೆದುಕೊಂಡಿವೆ. ಇದನ್ನೂ ಓದಿ: ಹೊಸೂರಿನ ಟಾಟಾ ಐಫೋನ್ ಘಟಕದಲ್ಲಿ ದುರಂತ – ವಿಷಾನಿಲ ಸೇವಿಸಿ ಮೂವರು ಕಾರ್ಮಿಕರ ಸಾವು
ಇನ್ನೂ ಹರಿಯಾಣದ ಹಿಸಾರ್ನಲ್ಲಿ ಎಕ್ಯೂಐ 516, ಪಂಜಾಬ್ನ ಫರೀದ್ಕೋಟ್ನಲ್ಲಿ ಎಕ್ಯೂಐ 506 ದಾಖಲಾಗಿದೆ. ಈ ಪಟ್ಟಿಯಲ್ಲಿ ದೆಹಲಿ 24ನೇ ಸ್ಥಾನದಲ್ಲಿದ್ದು, ಎಕ್ಯೂಐ 393 ದಾಖಲಾಗಿದೆ. ನವೆಂಬರ್ 9ರಂದು ದೆಹಲಿಯಲ್ಲಿ ಎಕ್ಯೂಐ 663ಕ್ಕೆ ಏರಿಕೆಯಾಗಿತ್ತು. ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ನಗರಗಳಲ್ಲಿ ವಾಯುಮಾಲಿನ್ಯ ತೀವ್ರಗೊಂಡಿದ್ದು, ದೀಪಾವಳಿ ಪಟಾಕಿ ಸಿಡಿತ ಮತ್ತು ಕೃಷಿ ತ್ಯಾಜ್ಯ ಸುಡುವಿಕೆ ಬಳಿಕ ಹೆಚ್ಚಳವಾಗುತ್ತಿದೆ ಎಂದು ತಿಳಿದುಬಂದಿದೆ.
ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಹೊರಗಿನ ಏಕೈಕ ನಗರ ಪಾಕಿಸ್ತಾನದ ಲಾಹೋರ್ ಆಗಿದ್ದು, 14ನೇ ಸ್ಥಾನ (ಎಕ್ಯೂಐ 430) ಪಡೆದುಕೊಂಡಿದೆ.ಇದನ್ನೂ ಓದಿ: ದೀಪಾವಳಿ ಎಫೆಕ್ಟ್; ದಿಲ್ಲಿಯಲ್ಲಿ ದಟ್ಟ ಹೊಗೆ, ಮಂಜಿನ ವಾತಾವರಣ – 307ಕ್ಕೆ ಇಳಿದ ವಾಯುಗುಣಮಟ್ಟ

