ನೆಲಮಂಗಲ: ಹಲವು ದಿನಗಳಿಂದ ರೈತರ ನಿದ್ದೆಗೆಡಿಸಿದ್ದ ಚಿರತೆ (leopard) ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿರುವ ಘಟನೆ ನೆಲಮಂಗಲ ತಾಲೂಕಿನ ಹಂಚೀಪುರ ಗ್ರಾಮದಲ್ಲಿ ನಡೆದಿದೆ.
ಚಿರತೆ ಸೆರೆಯಾದ ಹಿನ್ನೆಲೆ ಈ ಪ್ರದೇಶದ ಸುತ್ತಮುತ್ತಲಿನ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರತಿದಿನ ಈ ಚಿರತೆ ಹಂಚೀಪುರ ಗ್ರಾಮದ ಬಾಲರಾಜು ಹಾಗೂ ಕೆಂಪೇಗೌಡರ ತೋಟದ ಮನೆ ಬಳಿ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ಸುತ್ತಮುತ್ತಲಿನ ಜನರೂ ಆತಂಕಗೊಂಡಿದ್ದರು. ಚಿರತೆಯನ್ನ ಆದಷ್ಟು ಬೇಗ ಸೆರೆ ಹಿಡಿಯುವಂತೆ ನಿರಂತರವಾಗಿ ಒತ್ತಾಯ ಮಾಡುತ್ತಲೇ ಇದ್ದರು.
ಬಳಿಕ ಕ್ರಮ ವಹಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಬಾಲರಾಜು ಹಾಗೂ ಕೆಂಪೇಗೌಡರ ತೋಟದಲ್ಲಿ ಬೋನ್ ಇರಿಸಿದ್ದರು. ಇದೀಗ ಬೋನಿಗೆ ಚಿರತೆ ಬಿದ್ದಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ.
