ಬೆಂಗಳೂರು: ನಗರದ (Bengaluru) ನಾನಾ ಭಾಗದಲ್ಲಿ ಪಟಾಕಿ (Firecrackers) ಸಿಡಿತದಿಂದ 21 ಮಂದಿಯ ಕಣ್ಣಿಗೆ (Eyes) ಹಾನಿಯಾಗಿದೆ. ಗಾಯಗೊಂಡವರಿಗೆ ವಿವಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದೀಪಾವಳಿಯ (Deepavali) ಸಂಭ್ರಮದಲ್ಲಿ ಪಟಾಕಿ ಸಿಡಿಸುವಾಗ ಈ ಅವಘಡ ನಡೆದಿದೆ. ಪಟಾಕಿ ಸಿಡಿತದಿಂದ ಕಣ್ಣಿಗೆ ಯಾವ ಪ್ರಮಾಣದ ಹಾನಿಯಾಗಿದೆ ಎಂಬುದು ತಿಳಿದುಬಂದಿಲ್ಲ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ.
ನಾರಾಯಣ ನೇತ್ರಾಲಯದಲ್ಲಿ 9 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಿಂಟೋ ಆಸ್ಪತ್ರೆಯಲ್ಲಿ ಒಟ್ಟು 9 ಮಂದಿಗೆ ಚಿಕಿತ್ಸೆ ನೀಡಲಾಗಿದೆ. 6 ಮಂದಿಗೆ ಚಿಕಿತ್ಸೆ ನೀಡಿ ಕಳುಹಿಸಲಾಗಿದ್ದು, ನಾಳೆ ಮತ್ತೆ ಆಸ್ಪತ್ರೆಗೆ ಬರುವಂತೆ ಸೂಚಿಸಲಾಗಿದೆ. 3 ಮಂದಿಗೆ ಚಿಕಿತ್ಸೆ ಮುಂದುವರೆದಿದೆ.
ಇತರ 5 ಮಂದಿಗೂ ಪಟಾಕಿ ಸಿಡಿತದಿಂದ ಗಾಯವಾಗಿದೆ. ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಶಂಕರ ಐ ಆಸ್ಪತ್ರೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.
ಹಬ್ಬದ ಸಂಭ್ರಮದಲ್ಲಿ ಪಟಾಕಿ ಹೊಡೆಯುವಾಗ ಮುಂಜಾಗ್ರತ ಕ್ರಮಕೈಗೊಳ್ಳಬೇಕು. ಆದಷ್ಟು ದೂರದಿಂದಲೇ ಪಟಾಕಿ ಹಚ್ಚಬೇಕು. ಭಾರೀ ಸ್ಫೋಟಗೊಳ್ಳುವ ಪಟಾಕಿಯನ್ನು ಮಕ್ಕಳಿಗೆ ನೀಡಬಾರದು. ಸುರಕ್ಷಿತವಾದ ಕನ್ನಡಕ ಧರಿಸಿ ಪಟಾಕಿ ಹಚ್ಚಬೇಕು. ಆಗ ಇಂತಹ ಅವಘಡಗಳನ್ನು ತಪ್ಪಿಸಬಹುದಾಗಿದೆ. ಇನ್ನೂ ಏನಾದರೂ ತೊಂದರೆ ಆದರೆ ಕೂಡಲೇ ಆಸ್ಪತ್ರೆಗೆ ಬರುವಂತೆ ಮಿಂಟೋ ವೈದ್ಯೆ ಡಾ.ಹೇಮಲತಾ ತಿಳಿಸಿದ್ದಾರೆ.
