ರಾಜ್ಯದಲ್ಲಿ ಹಿಂಗಾರು ಮಳೆಯ ಅಬ್ಬರ ಕೊಂಚ ಕಡಿಮೆಯಾಗುವ ಸಾಧ್ಯತೆಯಿದೆ. ನವೆಂಬರ್ 9ರಂದು ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆಯಿದೆ. ದಕ್ಷಿಣ ಒಳನಾಡಿನ ಕೊಡಗು, ಹಾಸನ, ಮೈಸೂರು, ಚಾಮರಾಜನಗರ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.
ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 30-20
ಮಂಗಳೂರು: 32-25
ಶಿವಮೊಗ್ಗ: 29-21
ಬೆಳಗಾವಿ: 31-20
ಮೈಸೂರು: 30-20
ಮಂಡ್ಯ: 30-21
ಮಡಿಕೇರಿ: 26-18
ರಾಮನಗರ: 30-20
ಹಾಸನ: 29-20
ಚಾಮರಾಜನಗರ: 29-20
ಚಿಕ್ಕಬಳ್ಳಾಪುರ: 29-19
ಕೋಲಾರ: 29-19
ತುಮಕೂರು: 30-20
ಉಡುಪಿ: 31-25
ಕಾರವಾರ: 32-24
ಚಿಕ್ಕಮಗಳೂರು: 27-19
ದಾವಣಗೆರೆ: 31-21
ಹುಬ್ಬಳ್ಳಿ: 32-20
ಚಿತ್ರದುರ್ಗ: 30-20
ಹಾವೇರಿ: 31-21
ಬಳ್ಳಾರಿ: 32-22
ಗದಗ: 32-20
ಕೊಪ್ಪಳ: 32-21
ರಾಯಚೂರು: 33-22
ಯಾದಗಿರಿ: 33-21
ವಿಜಯಪುರ: 32-20
ಕಲಬುರಗಿ: 34-21
ಬಾಗಲಕೋಟೆ: 32-21






