ರಾಮನಗರ: ಎರಡು ಬಾರಿ ಸಿಎಂ, ಪ್ರಸ್ತುತ ಕೇಂದ್ರ ಸಚಿವರಾಗಿರುವ ದೊಡ್ಡ ಮನುಷ್ಯರು ಇಂತಹ ಅಸಹ್ಯ ಕೆಲಸಕ್ಕೆ ಕೈಹಾಕುವುದಿಲ್ಲ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆಯಾಗಲಿ. ಕುಮಾರಸ್ವಾಮಿ (HD Kumaraswamy) ತನಿಖೆಗೆ ಸಹಕಾರ ಕೊಟ್ಟರೆ ಯಾರು ಈ ಕೆಲಸ ಮಾಡಿದ್ದಾರೆ ಎಂಬುದು ಹೊರಬಂದು, ಅವರ ಮೇಲಿರುವ ಕಳಂಕವೂ ಹೋಗುತ್ತದೆ ಎಂದು ಸಚಿವ ಹೆಚ್.ಸಿ ಬಾಲಕೃಷ್ಣ (HC Balakrishna) ಲೇವಡಿ ಮಾಡಿದ್ದಾರೆ.
ಸ್ಟಿಂಗ್ ಪ್ರಕರಣದಲ್ಲಿ (Sting Operation) ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೆಸರು ಪ್ರಸ್ತಾಪ ಕುರಿತು ಬಿಡದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಪ ಕುಮಾರಣ್ಣಂಗೆ ಈ ವಿಚಾರ ಗೊತ್ತೋ ಇಲ್ವೋ? ಒಟ್ಟಿನಲ್ಲಿ ಅವರ ಮನೆಯಲ್ಲಿ ಘಟನೆ ನಡೆದಿದೆ. ಬಹುಶಃ ಕುಮಾರಣ್ಣನ ಗಮನಕ್ಕೆ ಹೋಗಿಲ್ಲ ಅನಿಸುತ್ತದೆ. ಅವರ ಮನೆಯಲ್ಲಿರುವ ಯಾರೋ ಈ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಕಲಬುರಗಿಗೆ 174 ರೂ. ಏರಿಕೆ – ಬೆಂಗಳೂರಿನಿಂದ ನಿಮ್ಮ ಊರಿಗೆ ಟಿಕೆಟ್ ದರ ಎಷ್ಟು ಹೆಚ್ಚಳ?
ಕುಮಾರಸ್ವಾಮಿ ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆ. ಆದರೆ ಅವರ ಧಮ್ಕಿಗೆ ಯಾರೂ ಹೆದರುವುದಿಲ್ಲ. ಹಿಂದೆ ಹಾಸನ ಜಿಲ್ಲಾಧಿಕಾರಿಗೂ ಧಮ್ಕಿ ಹಾಕಿದ್ದರು, ಆ ಮೇಡಂ ಸರಿಯಾಗಿಯೇ ಉತ್ತರ ಕೊಟ್ಟರು. ಈಗ ಪೊಲೀಸ್ ಕಮಿಷನರ್ ಸತ್ಯದ ವಿಚಾರ ಹೇಳಿದ್ದಾರೆ. ಅವರ ಹೇಳಿಕೆ ತಪ್ಪಿದ್ದರೆ ಕೋರ್ಟ್ನಲ್ಲಿ ಚಾಲೆಂಜ್ ಮಾಡಲಿ, ಸುಮ್ಮನೆ ಬೆದರಿಕೆ ಹಾಕಿದರೆ ಪ್ರಯೋಜನವಿಲ್ಲ. ಕಮಿಷನರ್ರನ್ನು ಗಲ್ಲಿಗೇರಿಸಿ ಬಿಡುತ್ತಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿಲ್ಲ: ಪ್ರಮೋದಾ ದೇವಿ ಒಡೆಯರ್
