ನವದೆಹಲಿ: ಯಮುನಾ ನದಿ (Yamuna River) ನೀರು ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ನದಿಯ ನೀರನ್ನು ಕುಡಿದು ಬಿಜೆಪಿ ಸಂಸದರೊಬ್ಬರು, ಸ್ವಚ್ಛವಾಗಿದೆ ಎಂದು ಘೋಷಿಸಿದ್ದಾರೆ.
ಬಿಜೆಪಿ ಸಂಸದ ಮನೋಜ್ ತಿವಾರಿ (Manoj Tiwari) ಗುರುವಾರ ಸೋನಿಯಾ ವಿಹಾರ್ ಘಾಟ್ನಲ್ಲಿ ನದಿಯಲ್ಲಿ ಸ್ನಾನ ಮಾಡಿದರು. ರೇಖಾ ಗುಪ್ತಾ ಅವರ ನೇತೃತ್ವದ ಸರ್ಕಾರ ಕೈಗೊಂಡ ಸ್ವಚ್ಛತಾ ಕಾರ್ಯಗಳಿಂದಾಗಿ, ಕಳೆದ ಒಂದು ವರ್ಷದಲ್ಲಿ ನದಿಯ ಮಾಲಿನ್ಯ ಮಟ್ಟವು ಅರ್ಧದಷ್ಟು ಕಡಿಮೆಯಾಗಿದೆ ಎಂದು ಪ್ರತಿಪಾದಿಸಿದರು.
ಬಿಜೆಪಿ ಸಂಸದ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಜನರು ಈಗ ಯಮುನಾ ನದಿಯಲ್ಲಿ ಮತ್ತೊಮ್ಮೆ ಛತ್ ಪೂಜೆಯನ್ನು ಆಚರಿಸಬಹುದು ಎಂದು ಹೇಳಿಕೆ ನೀಡಿದ್ದಾರೆ.
केजरीवाल जी और राहुल गांधी जी, यह रील नहीं, हकीकत है।
यह दिल्ली की ही यमुना जी हैं। आज मैंने यहाँ स्नान भी किया और आचमन भी किया।
केजरीवाल जी राहुल गांधी जी आप कब आ रहे हो डुबकी लगाने?
@ArvindKejriwal @RahulGandhi https://t.co/cjrvQNUCqN
— Manoj Tiwari (@ManojTiwariMP) October 29, 2026
ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ತಿವಾರಿ ಅವರು, ನದಿಯ ಕೆಲವು ಭಾಗಗಳಲ್ಲಿ ವಲಸೆ ಹಕ್ಕಿಗಳು ಕಾಣಿಸಿಕೊಂಡಿರುವುದು ನದಿಯ ಸ್ಥಿತಿಯಲ್ಲಿ ಸುಧಾರಣೆಯಾಗಿರುವುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ. ನದಿ ಸ್ವಚ್ಛವಾಗಿಲ್ಲದಿದ್ದರೆ ಈ ಹಕ್ಕಿಗಳು ಇಲ್ಲಿಗೆ ಬರುತ್ತಿರಲಿಲ್ಲ. ಇಲ್ಲಿನ ನೀರಿನಲ್ಲಿ ಮೊಸಳೆಗಳಿರಬಹುದು, ಆದರೆ ಮೊಸಳೆಗಳು ಸ್ವಚ್ಛವಾದ ನೀರಿನಲ್ಲಿ ಮಾತ್ರ ಇರುತ್ತವೆ ಎಂದು ತಿಳಿಸಿದ್ದಾರೆ.
ಸೋನಿಯಾ ವಿಹಾರ್ನಲ್ಲಿ ತಾನು ‘ಆಚಮನ’ (ಧಾರ್ಮಿಕ ವಿಧಿಯ ಪ್ರಕಾರ ನೀರನ್ನು ಸೇವಿಸುವುದು) ಮಾಡಿದ್ದಾಗಿ ತಿಳಿಸಿದ್ದಾರೆ. ನದಿಯನ್ನು ಸ್ವಚ್ಛಗೊಳಿಸುವ ಪ್ರಯತ್ನಗಳಿಗಾಗಿ ಬಿಜೆಪಿ ಸರ್ಕಾರವನ್ನು ಶ್ಲಾಘಿಸಿದ್ದಾರೆ. ಹಾಗೆ ಮಾಡುವಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
