– ಅಸ್ಪಷ್ಟ ದಾಖಲೆ, 80% ಇ-ಖಾತಾಗಳು ರಿಜೆಕ್ಟ್
ಬೆಂಗಳೂರು: ಬೆಂಗಳೂರಿನ (Bengaluru) ಖಾತಾದಾರರಿಗೆ ಬಿಗ್ ಶಾಕ್ ಎದುರಾಗಿದೆ. ಅಸ್ಪಷ್ಟ ದಾಖಲೆಗಳನ್ನ ಸಲ್ಲಿಸಿ ಇ ಖಾತಾಗೆ (e-Khata) ಅಪ್ಲೈ ಮಾಡಿದ್ದ ಅರ್ಜಿಗಳು ರಿಜೆಕ್ಟ್ ಆಗಿದ್ದು, 5 ಸಾವಿರ ಇ ಖಾತಾಗಳು ಡೇಂಜರ್ ಝೋನ್ನಲ್ಲಿವೆ. ಖಾತಾ ಮೇಳದಲ್ಲಿ ಇ ಖಾತಾ ಸಮಸ್ಯೆ ಸರಿಪಡಿಸಿಕೊಳ್ಳುವಂತೆ ಖಾತಾದಾರರಿಗೆ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಕರೆ ನೀಡಿದ್ದಾರೆ. ಶನಿವಾರ ಖಾತಾ ಮೇಳ ನಡೆಯುತ್ತಿದ್ದು, ಗೊಂದಲ ಇರುವ ಖಾತಾದಾರರಿಗೆ ಪರಿಹಾರ ಸಿಗಲಿದೆ.
ಇ-ಖಾತಾಗೆ ಅಪ್ಲೈ ಮಾಡಿದರೂ ಖಾತಾ ಅಪ್ರೂವ್ ಆಗುತ್ತಿಲ್ಲ, ಸಾಕಷ್ಟು ಸಮಸ್ಯೆ ಇದೆ, ತಾಂತ್ರಿಕ ದೋಷ ಇದೆ, ಜೊತೆಗೆ ಸಾಫ್ಟ್ವೇರ್ ಸಮಸ್ಯೆ ಇದೆ ಅಂತಾ ಆರೋಪ ಮಾಡುತ್ತಿದ್ದರು. ಇದಕ್ಕೆಲ್ಲಾ ಸಚಿವ ಕೃಷ್ಣ ಬೈರೇಗೌಡ ಉತ್ತರ ನೀಡಿದ್ದಾರೆ. ಇ ಖಾತಾಗೆ ಅರ್ಜಿ ಸಲ್ಲಿಕೆ ಮಾಡಿದ್ದ 5 ಸಾವಿರ ಖಾತಾಗಳು ರಿಜೆಕ್ಟ್ ಆಗಿವೆ ಎಂಬ ಮಾಹಿತಿ ಬಯಲಾಗಿದೆ. ಅಸ್ಪಷ್ಟವಾದ ದಾಖಲೆ, ಲೊಕೇಷನ್ ಸರಿಯಾಗಿ ನಮೂದು ಮಾಡದೇ ಇರುವುದು, ಟ್ರ್ಯಾಕಿಂಗ್ ಸರಿಯಾಗಿ ಅಪ್ಲೋಡ್ ಮಾಡದೇ ಇರುವುದು. ನಕ್ಷೆ ಕೂಡ ಸರಿಯಾಗಿ ಅಪ್ಲೈ ಮಾಡದೇ ಇರೋದೆ ಖಾತಾ ರಿಜೆಕ್ಟ್ ಆಗೋಕೆ ಮೂಲ ಕಾರಣ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಇದನ್ನೂ ಓದಿ: ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲು ಕ್ಷಣಗಣನೆ
ಸುಮಾರು 4 ರಿಂದ 5 ಸಾವಿರ ಖಾತೆಗಳು ರಿಜೆಕ್ಟ್ ಆಗೋಕೆ ಕಾರಣ ಶೇ.80ರಷ್ಟು ಜನ ಸರಿಯಾದ ದಾಖಲಾತಿ ನೀಡಿಲ್ಲ. ಶೇ.20ರಷ್ಟು ತಪ್ಪು ಅಧಿಕಾರಿಗಳದ್ದು ಇದೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಇದ್ದರಿಂದ ಇ-ಖಾತಾಗಳು ಅಪ್ರೂವ್ ಆಗದೇ ರಿಜೆಕ್ಟ್ ಆಗಿವೆ ಎಂದು ತಿಳಿಸಿದ್ದಾರೆ. ಈ ರೀತಿ ಗೊಂದಲಮಯವಾದ ಇ – ಖಾತಾ ಸಮಸ್ಯೆಗಳನ್ನ ಸರಿಪಡಿಸಿಕೊಳ್ಳದೇ ಇರುವವರಿಗೆ ಒಂದು ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ಅಕ್ಟೋಬರ್ 31ರ ಶನಿವಾರ ಆರ್ಓ, ಎಆರ್ಓ ಮತ್ತು ಜಿಬಿಎ ಮೈದಾನದಲ್ಲಿ ಖಾತಾ ಮೇಳ ಆಯೋಜನೆ ಮಾಡಲಾಗಿದೆ. ಈ ಮೇಳದಲ್ಲಿ ಸೂಕ್ತ ದಾಖಲಾತಿ ನೀಡಿ ಸರಿಪಡಿಸಿಕೊಳ್ಳಬಹುದಾಗಿದೆ. ಇದನ್ನೂ ಓದಿ: ಧನ್ವೀರ್ಗೆ ಹೆಚ್ಚಿದ ಸಂಕಷ್ಟ- ಎರಡು ಪ್ರತ್ಯೇಕ ಠಾಣೆಗಳಲ್ಲಿ ಎಫ್ಐಆರ್ ದಾಖಲು
ಇನ್ನು, ಖಾತಾ ಮೇಳಕ್ಕೆ ತೆರಳುವ ಖಾತಾದಾರರು ಇ-ಖಾತಾದಲ್ಲಿ ಆಗಿರುವ ದೋಷ ತಿದ್ದುಪಡಿಗೆ ಸೂಕ್ತ ದಾಖಲಾತಿ ನೀಡಬೇಕು. ತೆರಿಗೆ ಪಾವತಿ ರಶೀದಿ, ಸೇಲ್ ಡೀಡ್, ಜಿಪಿಎಸ್ ಲೊಕೇಷನ್ ಪೋಟೋ, ಚೆಕ್ಬಂದಿ ವಿವರ ಕೂಡ ನೀಡಬೇಕು. ಇಲ್ಲದೇ ಇದ್ರೆ ಮತ್ತೆ ಸಮಸ್ಯೆ ಆಗಲಿದೆ. ಒಟ್ಟಾರೆ ಇ ಖಾತಾ ಅಪ್ರೂವ್ ಆಗದೇ ಪೆಂಡಿಂಗ್ ಇದ್ದು ಅಸ್ಪಷ್ಟ ದಾಖಲಾತಿ ಯಿಂದ ರಿಜೆಕ್ಟ್ ಆಗಿರುವ ಖಾತೆಗಳ ಸರಿಪಡಿಸಿಕೊಳ್ಳುವುದಕ್ಕೆ ಖಾತಾ ಮೇಳ ಸುವರ್ಣಾವಾಕಾಶ ನೀಡುತ್ತಿದೆ. ಇದನ್ನೂ ಓದಿ: MLC Election| ಆರ್ಎಸ್ಎಸ್, ಬಿಜೆಪಿ ಭದ್ರಕೋಟೆ ನಾಗ್ಪುರದಲ್ಲಿ ಕಾಂಗ್ರೆಸ್ಗೆ ಜಯ
