BBK 13: ಬಿಗ್‌ಬಾಸ್ ಸೀಸನ್ 13ರ (Bigg Boss 13) ಸ್ಪರ್ಧಿಗಳು ಆಟವಾಡಿ ಮನರಂಜಿಸಿದ್ದಕ್ಕಿಂತ ಜಗಳವಾಡಿದ್ದೇ ಹೆಚ್ಚು. ಈ ವಾರದಲ್ಲೂ ಸಹ ಬಿಗ್‌ಬಾಸ್ ನೀಡಿದ್ದ ಗಂಧರ್ವ ಮತ್ತು ರಾಕ್ಷಸ ಟಾಸ್ಕ್‌ನಲ್ಲಿ ಮಾಡ್ರನ್ ಕವಿ ಮಂಜ ಮನೆಯವರ ಕೆಂಗಣ್ಣಿಗೆ ಗುರಿಯಾಗಿ, ಎರಡನೇ ಬಾರಿ ಜೈಲಿಗೆ ಹೋಗಿದ್ದಾರೆ.
ಯಶಸ್, ಸೌಂದರ್ಯ ಪ್ರಶಾಂತ್ ಮತ್ತು ಇನ್ನುಳಿದ ಮನೆಯವರು ಸೇರಿ ಮಂಜನಿಗೆ ಈ ಬಾರಿಯೂ ಕಳಪೆ ಪಟ್ಟ ಕೊಟ್ಟಿದ್ದಾರೆ. ಟಾಸ್ಕ್‌ನಲ್ಲಿ ಮಾಡ್ರನ್ ಕವಿ ಮಂಜ ತೋರಿದ ಅತಿರೇಕವೇ ಇದಕ್ಕೆ ಕಾರಣ ಎಂದು ದೊಡ್ಮನೆ ಮಂದಿ ಹೇಳಿಕೊಂಡಿದ್ದಾರೆ.
ಮೊದಲಿಗೆ ಬಿಗ್‌ಬಾಸ್ ಗಂಧರ್ವ ಮತ್ತು ರಾಕ್ಷಸ ಟಾಸ್ಕ್ ಕೊಟ್ಟಾಗ ಮಾಡ್ರನ್ ಕವಿ ಮಂಜ ರಾಕ್ಷಸ ಟೀಮ್‌ನಲ್ಲಿದ್ದು, ಗಂಧರ್ವ ಟೀಮ್‌ನಲ್ಲಿದ್ದವರಿಗೆ ತೊಂದರೆ ಕೊಡೋ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ, ಮಂಜ ಆಟದ ಭರದಲ್ಲಿ ಗಂಧರ್ವ ಟೀಮ್‌ನಲ್ಲಿದ್ದ ಯಶಸ್‌ಗೆ ʻಸ್ತ್ರೀ ವ್ಯಾಮೋಹಿʼ ಎಂದು ಅಣಕಿಸಿದ್ದಾರೆ. ನಂತರ ಪಾತ್ರಗಳು ಬದಲಾವಣೆಯಾದಾಗ ಯಶಸ್ ಕೂಡ ಮಂಜುನಾಥ್‌ನನ್ನು ನಾಯಿ ಎಂದು ಪದೇ ಪದೇ ಕರೆದು ಕೆಣಕಿದ್ದಾರೆ. ಇದೇ ಕಾರಣಕ್ಕೆ ಟಾಸ್ಕ್ ಪೂರ್ತಿ ಅವರಿಬ್ಬರ ನಡುವೆ ಜಗಳ ನಡೆದಿದೆ. ಇದನ್ನೂ ಓದಿ: ಭಾರತೀಯ ಮೂಲದ ನವನೆಥೆಮ್ ನವಿ ಪಿಳ್ಳೈಗೆ 2026ರ ನೊಬೆಲ್ ಶಾಂತಿ ಪ್ರಶಸ್ತಿ
ಇನ್ನು ಮಾಡ್ರನ್ ಕವಿ ಮಂಜ ಟಾಸ್ಕ್ ಪ್ರಾಪರ್ಟಿಯನ್ನ ಹಾಳು ಮಾಡಿದ್ದೂ ಕೂಡ ಎಲ್ಲರನ್ನ ಕೆರಳಿಸಿದೆ. ಇದೇ ಕಾರಣಕ್ಕೆ ಮನೆಯವರೆಲ್ಲ ಸೇರಿ ಮಂಜನಿಗೆ ಕಳಪೆ ಪಟ್ಟ ಕೊಟ್ಟು ಜೈಲಿಗೆ ಕಳುಹಿಸಿದ್ದಾರೆ. ಈ ಮೂಲಕ ಮಂಜ ಈ ವಾರ ಮನೆಯಿಂದ ಹೊರಗೆ ಹೋಗಲು ನೇರವಾಗಿ ನಾಮಿನೇಟ್ ಆಗಿದ್ದಾರೆ.ಇದನ್ನೂ ಓದಿ: ಗಗನ್ ಮೇಲೆ ಆಕ್ಷೇಪಾರ್ಹ ಪದ ಬಳಸಿದ ಗಾನವಿ; ಶೋ ಬಿಟ್ಟು ಹೋಗಲು ನಿರ್ಧರಿಸಿದ ಗಗನ್

