ಬೆಂಗಳೂರು: ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ಬೆಂಗಳೂರಿನ ಜೈಲಿನಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿದೆ.
ಪ್ರಜ್ವಲ್ ರೇವಣ್ಣ ಸೇರಿದಂತೆ 9 ಮಂದಿಯನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ. 9 ಮಂದಿಯನ್ನ ಶಿಫ್ಟ್ ಮಾಡಲು ಸಿಟಿ ಪೊಲೀಸರು ಸೂಚಿಸಿದ್ದರು. ಇದನ್ನೂ ಓದಿ: ಜೈಲಲ್ಲಿ ಪ್ರಜ್ವಲ್ ರೇವಣ್ಣ ಬಳಸಿದ್ದ ಮೊಬೈಲ್‌ನ ಸೀಕ್ರೆಟ್ ಬಯಲು – 7 ಜನರ ವಿರುದ್ಧ FIR
ಅಪರಾಧಿ ಶಂಕರ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಡಿಐಜಿ ಸೋಮಶೇಖರ್ ಜೊತೆ ಸೇರಿ ಫೇಕ್ ದಾಖಲಾತಿ ಸೃಷ್ಟಿಸಿ ಬಿಡುಗಡೆಗೊಳಿಸಿದ್ದ. ಕೋಕಾ ಆಕ್ಟ್ ಅಡಿಯಲ್ಲಿ ಬಂಧನವಾಗಿರುವ ಆರೋಪಿಗಳನ್ನ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಆದೇಶಿಸಲಾಗಿದೆ.
ಪ್ರಜ್ವಲ್ ರೇವಣ್ಣ ಇತ್ತೀಚೆಗೆ ಜೈಲಿನಲ್ಲಿ ಮೊಬೈಲ್ ಬಳಸಿದ ಆರೋಪ ಎದುರಿಸುತ್ತಿದ್ದರು. ಇದರ ಬೆನ್ನಲ್ಲೇ ಈಗ ಪರಪ್ಪನ ಅಗ್ರಹಾರದಿಂದ ಬೆಳಗಾವಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇದನ್ನೂ ಓದಿ: 2 ದಿನ ಪೊಲೀಸ್ ಕಸ್ಟಡಿಗೆ ಪ್ರಜ್ವಲ್ ರೇವಣ್ಣ

