ರಾಕ್ಷಸರು ವರ್ಸಸ್ ಗಂಧರ್ವರು ಟಾಸ್ಕ್ನಲ್ಲಿ ಸ್ಪರ್ಧಿಗಳ ಜಟಾಪಟಿ ಜೋರಾಗಿತ್ತು. ಆಟದ ಭರದಲ್ಲಿ ವಿಪರೀತ ವಾಗ್ದಾಳಿ ಹಾಗೂ ಕೆಟ್ಟ ಪದಗಳ ಬಳಕೆ, ಹಿಂಸಾತ್ಮಕ ಪ್ರಹಾರ ಜೋರಾಗಿತ್ತು. ಆರಂಭದಲ್ಲಿ ಮಂಜು ನಾಯಕತ್ವದ ರಾಕ್ಷಸರ ಟೀಮ್ ಆಟವಾಡಿತ್ತು. ಆಗ ಗಾನವಿ (Ganavi) ರಾಣಿಯಾಗಿ ಗಂಧರ್ವರ ಟೀಮ್ನ್ನು ಲೀಡ್ ಮಾಡಿದ್ದರು. ಬಳಿಕ ಬದಲಾದ ಟಾಸ್ಕ್ನಲ್ಲಿ ಮಂಜ ಹಾಗೂ ಗಗನ್ ಇರುವ ಟೀಮ್ ಗಂಧರ್ವರಾದ್ರೆ, ಗಾನವಿ ಟೀಮ್ ರಾಕ್ಷಸರಾಗಿ ಆಟವಾಡಿದ್ರು. ಈ ವೇಳೆ ಗಗನ್ ಮೇಲೆ ಗಾನವಿ ಆಕ್ಷೇಪಾರ್ಹ ಪದ ಬಳಸಿದ್ದಾರೆ. ಈ ಕಾರಣಕ್ಕೆ ಗಗನ್ (Gagan Chinnappa) ಬೇಸರದಿಂದ ಶೋ ಬಿಟ್ಟುಹೋಗುವ ಮಾತನ್ನಾಡಿದ್ದಾರೆ.
ಬಿಗ್ ಬಾಸ್ (Bigg Boss Kannada) ಕನ್ನಡ ಸೀಸನ್ 13ರಲ್ಲಿ ದಿನಕ್ಕೊಂದು ಹೊಸ ದ್ವೇಷ, ವಿವಾದ ಮತ್ತು ಮನಸ್ತಾಪಗಳು ಹುಟ್ಟಿಕೊಳ್ಳುತ್ತಿವೆ. ಇದೀಗ ಬಿಗ್ ಬಾಸ್ ಮನೆಯಿಂದ ಹೊರನಡೆಯುವ ಇಚ್ಛೆಯನ್ನು ವ್ಯಕ್ತಪಡಿಸುವ ಮೂಲಕ ನಟ ಗಗನ್ ಚಿನ್ನಪ್ಪ ಎಲ್ಲರಿಗೂ ದೊಡ್ಡ ಶಾಕ್ ನೀಡಿದ್ದಾರೆ. ಸ್ವತಃ ಗಗನ್ ತಮ್ಮ ಸಹಸ್ಪರ್ಧಿ ತಾಂಡವ್ ರಾಮ್ ಬಳಿ ಈ ನಿರ್ಧಾರವನ್ನು ಹಂಚಿಕೊಂಡಿದ್ದು, ಬಿಗ್ ಬಾಸ್ ಅಭಿಮಾನಿಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಗಂಧರ್ವನಾದ್ರೂ ರಾಕ್ಷಸನಂತೆ ವರ್ತಿಸಿದ ಮಹಾಕವಿ – ರಣರಂಗದಲ್ಲಿ ಯಶಸ್, ಮಂಜ… ನಿಲ್ಲದ ವಾಕ್ಸಮರ
ಬಿಗ್ ಬಾಸ್ ಮನೆಯಲ್ಲಿ ನಡೆದ ಗಂಧರ್ವರು ಮತ್ತು ರಾಕ್ಷಸರು ಟಾಸ್ಕ್ ಆಟದ ವೇಳೆ ವಾತಾವರಣ ತೀರ ತಾರಕಕ್ಕೇರಿತ್ತು. ಈ ಸಂದರ್ಭದಲ್ಲಿ ಸ್ಪರ್ಧಿ ಗಾನವಿ, ಗಗನ್ ಚಿನ್ನಪ್ಪ ಅವರಿಗೆ ಆಕ್ಷೇಪಾರ್ಹ ಎಂಬ ಪದವನ್ನು ಬಳಸಿ ನಿಂದಿಸಿದ್ದರು. ಜೊತೆ ಕಾವ್ಯ ಕೂಡ ಮಂಡಿಯೂರಿ ಕುಳಿತು ಊಟ ಕೇಳಿಕೊಳ್ಳುವಂತೆ ಒತ್ತಾಯಿಸಿದರು. ಈ ಘಟನೆ ಬಳಿಕ ಗಗನ್ಗೆ ತೀವ್ರ ಬೇಸರ ಮತ್ತು ಸಿಟ್ಟು ತರಿಸಿದೆ. ‘ನನಗೆ ನನ್ನ ಆತ್ಮ ಗೌರವಕ್ಕಿಂತ ದೊಡ್ಡದು ಯಾವುದೂ ಇಲ್ಲ’ ಎಂದು ಗಗನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಸ್ಕ್ ಮುಗಿದ ಬಳಿಕ ತೀವ್ರ ಭಾವುಕರಾದ ಗಗನ್, ತಮ್ಮ ಆಪ್ತ ಸ್ನೇಹಿತ ತಾಂಡವ್ ರಾಮ್ ಜೊತೆ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ. ನಂತರ ಈ ವಿಷಯವನ್ನು ತಾಂಡವ್ ರಾಮ್ ಕಾವ್ಯ ಹಾಗೂ ಗಾನವಿ ಬಳಿ ಚರ್ಚಿಸಿದ್ದಾರೆ. ‘ಗಗನ್ ಮನಸ್ಸಿಗೆ ಆ ಪದ ತುಂಬಾ ಹರ್ಟ್ ಆಗಿದೆ. ಅವನ ಸೆಲ್ಫ್ ರೆಸ್ಪೆಕ್ಟ್ ಹಾಳಾಗುತ್ತಿದೆ. ಈ ರೀತಿ ಅಸಹ್ಯವಾಗಿ ಆಟ ಆಡಲು ನನಗೆ ಸಾಧ್ಯವಿಲ್ಲ ಎಂದು ಹೇಳಿದ್ದಾನೆ, ಬೇಕಿದ್ದರೆ ಆತ ಈ ಶೋ ಬಿಟ್ಟು ಹೊರಡುತ್ತೇನೆ ಎಂದಿದ್ದಾನೆ. ಈ ಟಾಸ್ಕ್ನಿಂದ ಅವನು ತುಂಬಾ ಲೋ ಆಗಿದ್ದಾನೆ’ ಎಂದು ತಾಂಡವ್ ರಾಮ್ ಇತರೆ ಕಂಟೆಸ್ಟಂಟ್ ಬಳಿ ಚರ್ಚೆ ಮಾಡಿದ್ದಾರೆ. ಹೀಗಾಗಿ, ಈ ವೀಕೆಂಡ್ ವಿತ್ ಸುದೀಪ ಕಾರ್ಯಕ್ರಮದಲ್ಲಿ ಗಗನ್ಗೆ ಸುದೀಪ್ ಯಾವ ರೀತಿ ಧೈರ್ಯ ಹೇಳುತ್ತಾರೆ ಎಂಬ ಕುತೂಹಲ ಜೋರಾಗಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ | ಮದ್ವೆಯಾದ ಖುಷಿಯಲ್ಲಿದ್ದ ಚಿಕ್ಕಣ್ಣಗೆ ಶಾಕ್ – ಇಬ್ಬರು ನಟರಿಗೆ ಕೋರ್ಟ್ ಸಮನ್ಸ್

