ಧಾರವಾಡ: ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ಬಳಿ ಸ್ವಿಫ್ಟ್ ಕಾರು, ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ಅಜೀತ್, ರಾಕೇಶ್, ಸಂದೀಪ್, ಮತ್ತು ಶೃತಿ ಮೃತ ದುರ್ದೈವಿಗಳು. ಹುಬ್ಬಳ್ಳಿಯಿಂದ ವಿಜಯಪುರಕ್ಕೆ ತೆರಳುತ್ತಿದ್ದ ಕಾರು, ಕ್ಯಾಂಟರ್‌ಗೆ ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್ ಅಪಘಾತ – ಚಾಲಕ ಸ್ಥಳದಲ್ಲೇ ಸಾವು, 12 ಪ್ರಯಾಣಿಕರಿಗೆ ಗಾಯ
ಮೃತರೆಲ್ಲ ವಿಜಯಪುರ ಜಿಲ್ಲೆಯವರು ಎಂದು ತಿಳಿದು ಬಂದಿದೆ. ನವಲಗುಂದ ತಾಲೂಕು ಆಸ್ಪತ್ರೆಗೆ ಶವಗಳನ್ನು ರವಾನಿಸಲಾಗಿದೆ. ಸ್ಥಳಕ್ಕೆ ನವಲಗುಂದ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರೈಲಿನಲ್ಲಿ ʻನನ್ನ ಸುತ್ತಲೂ ಪುರುಷರೇ ಇದ್ದಾರೆʼ ಎಂದು ಕೊನೆಯ ಮೆಸೇಜ್ ಕಳಿಸಿದ್ದ ಅಸ್ಸಾಂ ಡ್ಯಾನ್ಸರ್ ಶವವಾಗಿ ಪತ್ತೆ

