ಪುಣೆ: ಬಾಲಿವುಡ್ ದಿಗ್ಗಜ ನಟ ನಾನಾ ಪಾಟೇಕರ್ ಅವರ ಅಂತ್ಯಕ್ರಿಯೆಯನ್ನು ಗುರುವಾರ ಪುಣೆಯ ಗ್ರಾಮೀಣ ಭಾಗದಲ್ಲಿರುವ ಡೊಂಜೆ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.
ज्येष्ठ अभिनेते आणि माझे स्नेही, मित्र, मार्गदर्शक नाना पाटेकर यांचे पार्थिव आज पुण्यात स्वीकारले. राज्य सरकारतर्फे त्यांना यावेळी मानवंदना देण्यात आली. त्यांच्या पार्थिवाचे अंत्यदर्शन घेत पुष्पचक्र अर्पण करुन भावपूर्ण श्रद्धांजली अर्पण केली. त्यांच्या कुटुंबीयांचे सांत्वन केले.
एक हरहुन्नरी कलावंताला अखेरची मानवंदना देताना, श्रद्धांजली अर्पण करताना मन भरून आले होते.
ॐ शांति 🙏🏽
#Pune— Devendra Fadnavis (@Dev_Fadnavis) October 8, 2026
75 ವರ್ಷದ ನಟ ನಾನಾ ಪಾಟೇಕರ್ ಅವರಿಂದು ಗೋವಾದಲ್ಲಿ ನಿಧನರಾಗಿದ್ದರು. ಬಳಿಕ ಅವರ ಪಾರ್ಥಿವ ಶರೀರವನ್ನ ಅಂತಿಮ ವಿಧಿವಿಧಾನಗಳಿಗಾಗಿ ಅವರ ಸ್ವಗ್ರಾಮಕ್ಕೆ ತರಲಾಯಿತು.
#WATCH | Maharashtra: Last rites of veteran actor Nana Patekar performed with state honours at his native village, Donje village in Pune Rural. He passed away in Goa today. https://t.co/7UerrCudAt
— ANI (@ANI) October 8, 2026
ನಾನಾ ಪಾಟೇಕರ್ ಅವರ ನಿಧನಕ್ಕೆ ಇಡೀ ಬಾಲಿವುಡ್ ಚಿತ್ರರಂಗವೇ ಕಂಬನಿ ಮಿಡಿಯಿತು. ಅವರೊಂದಿಗೆ ಕೆಲಸ ವಿವಿಧ ಕ್ಷೇತ್ರಗಳಲ್ಲಿ ಜೊತೆಯಾಗಿದ್ದ ನಟರು, ನಿರ್ದೇಶಕರು ಹಾಗೂ ಚಿತ್ರರಂಗದ ಇತರ ಗಣ್ಯರು ತೀವ್ರ ಸಂತಾಪ ಸೂಚಿಸಿದರು. ವಿಶಿಷ್ಟ ವ್ಯಕ್ತಿತ್ವದಿಂದ ಹಾಗೂ ಸಿನಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಪಾಟೇಕರ್, ಮರಾಠಿ ಹಾಗೂ ಹಿಂದಿ ಚಿತ್ರರಂಗ, ರಂಗಭೂಮಿ ಮತ್ತು ಕಿರುತೆರೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.

