– ಯೆಲ್ಲೋ ಬೋರ್ಡ್ ವಿಮೆ ಜಿಪಿಎಸ್ ಕಡ್ಡಾಯ ಸಾಧ್ಯತೆ?
ಬೆಂಗಳೂರು: ಸುಪ್ರೀಂ ಕೋರ್ಟ್ ಬೈಕ್ ಟ್ಯಾಕ್ಸಿಗೆ (Bike Taxi) ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಸರ್ಕಾರ ಒಲ್ಲದ ಮನಸ್ಸಿನಿಂದಲೇ ಬೈಕ್ ಟ್ಯಾಕ್ಸಿಗೆ ರೂಲ್ಸ್ ಜಾರಿಗೆ ಸಿದ್ಧತೆ ಮಾಡಿಕೊಂಡಿದೆ. ಅದರಲ್ಲೂ ಟೈಟ್ ರೂಲ್ಸ್ ಜಾರಿಗೆ ಸಾರಿಗೆ ಇಲಾಖೆಗೆ ಸೂಚಿಸಿದ್ದು, ಎಜಿ ಸಲಹೆಯನ್ನು ಪಡೆದುಕೊಳ್ಳಲಿದೆ. ಹಳದಿ ಫಲಕ ಕಡ್ಡಾಯದ ಬಗ್ಗೆಯೂ ಪರಿಶೀಲನೆ ನಡೆಸುತ್ತಿದೆ.
ಬೈಕ್ ಟ್ಯಾಕ್ಸಿ ಟಪ್ ರೂಲ್ಸ್ ಏನಿರಲಿದೆ?
* ಬೈಕ್ ಟ್ಯಾಕ್ಸಿಗೆ ಸೇವೆ ಬೇಕಾಬಿಟ್ಟಿ ರೂಲ್ಸ್ ಪಾಲನೆ ಮಾಡದೇ ಯಾರು ಬೇಕಾದ್ರೂ ಮಾಡುವಂತೆ ಇಲ್ಲ.
* ಕಡ್ಡಾಯವಾಗಿ ಸರ್ಕಾರದ ಸಾರಿಗೆ ಇಲಾಖೆಯ ಕಣ್ಗಾವಲಿನಲ್ಲಿಯೇ ಬೈಕ್ ಚಾಲಕ ಟ್ಯಾಕ್ಸಿ ಸೇವೆ ನೀಡಬೇಕು.
* ಮೋಟಾರ್ಸೈಕಲ್ಗಳನ್ನು ಹಳದಿ ಫಲಕ ಹೊಂದಿರುವ ವಾಣಿಜ್ಯ ಸಾರಿಗೆ ವಾಹನಗಳಾಗಿ ನಿಯಮಾನುಸಾರ ಪರಿವರ್ತಿಸಿ, ಅಗತ್ಯ ಪರವಾನಗಿಯೊಂದಿಗೆ ಸೇವೆ ನೀಡಲು ಅವಕಾಶ ಕಲ್ಪಿಸುವ ಬಗ್ಗೆಯೂ ಚಿಂತನೆ.
* ಬೈಕ್ ಮಾಲೀಕರು ತಮ್ಮ ವಾಹನಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಲು ಮತ್ತು ಒಪ್ಪಂದದ ಮೇರೆಗೆ ಪ್ರಯಾಣಿಕರನ್ನು ಸಾಗಿಸುವ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಬಹುದು. ಸಂಬಂಧಪಟ್ಟ ಪ್ರಾಧಿಕಾರಗಳು ಆ ಅರ್ಜಿಗಳನ್ನು ಕಾನೂನಿನ ಪ್ರಕಾರ ಪರಿಶೀಲಿಸುವ ಬಗ್ಗೆ ಚಿಂತನೆ.
* ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಅದರಲ್ಲೂ ಮಹಿಳಾ ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಜಿಪಿಎಸ್ ಕಡ್ಡಾಯ ಸಾಧ್ಯತೆ.
* ಬೈಕ್ ಟ್ಯಾಕ್ಸಿಗೆ ವಿಮೆ ಕಡ್ಡಾಯ. ಅಪಘಾತ ವಾದ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ವಿಮೆ.
* ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ನೀಡುವ ವ್ಯವಸ್ಥೆಯಲ್ಲಿ ಅನ್ವಯಿಸುವ ತೆರಿಗೆ, ವಾಹನದ ಅರ್ಹತೆ, ಚಾಲಕರ ದಾಖಲೆಗಳು ಅಗತ್ಯ.
* ಅಪಘಾತ ಸಂಭವಿಸಿದಾಗ ಚಾಲಕ, ವಾಹನ ಮಾಲೀಕ ಮತ್ತು ಸೇವೆ ಒದಗಿಸುವ ಸಂಸ್ಥೆಯ ಹೊಣೆಗಾರಿಕೆ ಇವೆಲ್ಲದರ ಸ್ಪಷ್ಟ ಚಿತ್ರಣ ಪಡೆದುಕೊಳ್ಳುವ ಬಗ್ಗೆ ಇಲಾಖೆ ಚಿಂತನೆ.
* ಚಾಲಕ ಮತ್ತು ಪ್ರಯಾಣಿಕರಿಗೆ ಗುಣಮಟ್ಟದ ಹೆಲ್ಮೆಟ್, ವಾಹನದ ನಿಯಮಿತ ನಿರ್ವಹಣೆ ಬಗ್ಗೆಯೂ ನಿಯಮಾವಳಿ.
* ಕಿಲೋಮೀಟರ್ಗೆ ದರ ನಿಗದಿಯ ಬಗ್ಗೆಯೂ ಕಾಯ್ದೆ.
ಶೀಘ್ರದಲ್ಲಿ ಸರ್ಕಾರ ನಯಾ ರೂಲ್ಸ್ ಹೊರಡಿಸುವ ಸಾಧ್ಯತೆ ಇದೆ. ಅಲ್ಲದೇ, ಈಗಾಗಲೇ ಬೈಕ್ ಟ್ಯಾಕ್ಸಿ ಯೋಜನೆ ಜಾರಿಯಿರುವ ರಾಜ್ಯಗಳಲ್ಲಿ ರೂಲ್ಸ್ ಪರಿಶೀಲನೆ ನಡೆಸಲಿದೆ. ಕಠಿಣ ನಿಯಮಬದ್ಧ ನಿಯಮವಾಳಿಯ ಮೂಲಕ ಬೈಕ್ ಟ್ಯಾಕ್ಸಿ ಜಾರಿಯಾಗಲಿದ್ದು, ಬೈಕ್ ಟ್ಯಾಕ್ಸಿ ಮೇಲೆ ಅವಲಂಬಿತರಾಗಿರುವ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದಂತಾಗಿದೆ.
