ಉಡುಪಿ: ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್ (ಸಿಎಚ್ಟಿಯು)ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಮುಲ್ಕಿ ಹಳೆಯಂಗಡಿ ನಿವಾಸಿ ಯುವಕ ಮನೀಶ್ ಕರ್ಕಡ ಅವರ ಮನೆ ಹಾಗೂ ಸ್ಫೋಟದಲ್ಲಿ ಹಾನಿಗೊಳಗಾದ ಕಳವಾರು ಸಂತ ಜೋಸೆಫರ ಚರ್ಚ್‌ಗೆ ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಭೇಟಿ ನೀಡಿದರು.
ಮೃತಪಟ್ಟ ಯುವಕ ಮನೀಶ್ ಕರ್ಕಡ ಹೆತ್ತವರಿಗೆ ಸಾಂತ್ವಾನ ಹೇಳಿದರು. ಬಳಿಕ ಕಳವಾರು ಸಂತ ಜೋಸೆಫರ ಚರ್ಚ್‌ಗೆ ಭೇಟಿ ನೀಡಿ ಧರ್ಮಗುರು ವಂ|ಮೈಕಲ್ ಅವರೊಂದಿಗೆ ಘಟನೆಯಲ್ಲಿ ಚರ್ಚ್‌ಗೆ ಆಗಿರುವ ನಷ್ಟದ ಕುರಿತು ಮಾಹಿತಿ ಪಡೆದುಕೊಂಡರು. ಇದನ್ನೂ ಓದಿ: ಬೆಂಗಳೂರು ಕೆರೆಯಲ್ಲಿ ಮೀನುಗಳ ಮಾರಣಹೋಮ; ಕೆಮಿಕಲ್ ಮಿಶ್ರಣ ಶಂಕೆ
ಈ ವೇಳೆ ಮಾತನಾಡಿದ ಅವರು, ಎಂಆರ್‌ಪಿಎಲ್‌ನ ಮೂರನೇ ಘಟಕದಲ್ಲಿ ಕಳೆದ ಬುಧವಾರ ಕೋಕರ್ ಹೈಡ್ರೋಟ್ರೀಟರ್ ಯುನಿಟ್ (ಸಿಎಚ್ಟಿಯು)ನಲ್ಲಿ ಭೀಕರವಾದ ಸ್ಫೋಟ ಸಂಭವಿಸಿದ ಸಮಯದಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕ ಮನೀಶ್ ಕರ್ಕಡ ಮೃತಪಟ್ಟಿದ್ದಾರೆ. ಇದು ದುಃಖಕರ ಸಂಗತಿಯಾಗಿದೆ. ಕುಟುಂಬದ ನೋವಿನಲ್ಲಿ ನಾನು ಭಾಗಿ. ಆತನ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಪ್ರಾರ್ಥಿಸಿದರು.
ಸ್ಫೋಟದಲ್ಲಿ ಕಳವಾರು ಸಂತ ಜೋಸೆಫರ ಚರ್ಚ್ ಸೇರಿದಂತೆ ಮೂರು ಗ್ರಾಮಗಳ 54 ಮನೆಗಳು ಮತ್ತು 8 ಪ್ರಾರ್ಥನಾ ಕೇಂದ್ರಗಳಿಗೆ ಹಾನಿಯಾಗಿದೆ. ಚರ್ಚಿನ ಹಂಚು, ಕಿಟಕಿ ಗಾಜುಗಳು ಸಂಪೂರ್ಣವಾಗಿ ಹಾನಿಗೊಂಡಿದೆ. ಯಾವುದೇ ರೀತಿಯ ಆದಾಯವಿಲ್ಲದ ಚರ್ಚ್‌ನ್ನು ಮತ್ತೆ ದುರಸ್ತಿ ಮಾಡಲು ಲಕ್ಷಾಂತರ ಹಣ ವ್ಯಯಿಸುವ ಅಗತ್ಯವಿದೆ. ಘಟನೆಯ ಬಳಿಕ ಎಂಆರ್‌ಪಿಎಲ್ ಆಡಳಿತವಾಗಲಿ, ಸ್ಥಳೀಯ ಶಾಸಕರಾಗಲಿ, ಜಿಲ್ಲಾಡಳಿತವಾಗಲಿ ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಅಂದಾಜು ಕೂಡ ನಡೆಸದೆ ಇರುವುದು ಖಂಡನೀಯ ಎಂದರು. ಇದನ್ನೂ ಓದಿ: ಟಿಪ್ಪರ್ ಡಿಕ್ಕಿಯಾಗಿ ಟೋಲ್ ಪ್ಲಾಜಾ ಸಂಪೂರ್ಣ ನಜ್ಜುಗುಜ್ಜು
ಊರಿನ ಅಭಿವೃದ್ಧಿಯ ನಿಟ್ಟಿನಲ್ಲಿ ಬೃಹತ್ ಕೈಗಾರಿಕೆಗಳಿಗೆ ಅವಕಾಶ ನೀಡಿದ್ದು, ಘಟಕಗಳಲ್ಲಿ ಸೂಕ್ತ ಸುರಕ್ಷಾ ವಿಧಾನಗಳನ್ನು ಅಳವಡಿಸಕೊಳ್ಳದಿರುವುದು ಕಂಪನಿ ಆಡಳಿತದ ಬೇಜವಾಬ್ದಾರಿಯಾಗಿದೆ. ಭಾರೀ ಗಾತ್ರದ ಸ್ಫೋಟದಿಂದಾಗಿ ಚರ್ಚ್‌ನ ಕಟ್ಟಡ ಸಂಪೂರ್ಣವಾಗಿ ಹಾನಿಯಾಗಿರುವ ಸಾಧ್ಯತೆ ಇದೆ. ಕೂಡಲೇ ಚರ್ಚ್ ಸೇರಿದಂತೆ ಮೂರು ಗ್ರಾಮಗಳ 54 ಮನೆಗಳು ಮತ್ತು 8 ಪ್ರಾರ್ಥನಾ ಕೇಂದ್ರಗಳಿಗೆ ಆಗಿರುವ ಹಾನಿಯ ಕುರಿತು ಜಿಲ್ಲಾಧಿಕಾರಿಗಳ ಮೂಲಕ ತನಿಖೆ ನಡೆಸಿ ಎಂಆರ್‌ಪಿಎಲ್ ಸಂಸ್ಥೆಯಿಂದಲೇ ನಷ್ಟ ಪರಿಹಾರ ಕೊಡಿಸಬೇಕು. ಮೃತ ಮನಿಶ್ ಕರ್ಕಡ ಅವರ ಮನೆಯವರಿಗೆ ಕೂಡ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು.

