ವಿಜಯಪುರ: ಟೋಲ್ ಪ್ಲಾಜಾಗೆ (Toll Plaza) ಟಿಪ್ಪರ್ (Tipper) ಡಿಕ್ಕಿ ಹೊಡೆದ ಘಟನೆ ವಿಜಯಪುರ (Vijayapura) ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಬಳಿಯ ಟೋಲ್ ಪ್ಲಾಜಾದಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 52ರಲ್ಲಿರುವ ಟೋಲ್ ಪ್ಲಾಜಾದಲ್ಲಿ ಘಟನೆ ನಡೆದಿದೆ. ಟಿಪ್ಪರ್ ಡಿಕ್ಕಿಯಿಂದ ಸಂಪೂರ್ಣ ಟೋಲ್ ಪ್ಲಾಜಾ ಹಾಳಾಗಿದೆ. ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾಗೆ ಸೇರಿದ ಶುಲ್ಕ ಕೇಂದ್ರ ಇದಾಗಿದ್ದು, ಇಂದು ನಸುಕಿನ ಜಾವ ಅವಘಡ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಇದನ್ನೂ ಓದಿ: ಟರ್ಕಿಯಿಂದ ಕಂಪನಿಯ ಒರಿಜಿನಲ್ ಲೇಬಲ್ ತಂದು ನಕಲಿ ಔಷಧಿ ಮಾರಾಟ; ಕಿಂಗ್‌ಪಿನ್ ಬಿಚ್ಚಿಟ್ಟ ಸ್ಫೋಟಕ ರಹಸ್ಯ
ಟಿಪ್ಪರ್ ಗುದ್ದಿದ ಪರಿಣಾಮ ಟೋಲ್ ಪ್ಲಾಜಾ ನುಜ್ಜುಗುಜ್ಜಾಗಿದೆ. ಘಟನೆಯಿಂದ ವಿಜಯಪುರ ಕಲಬುರಗಿ ಸಂಚಾರದಲ್ಲಿ ವ್ಯತ್ಯಯವಾಗಿದೆ. ಟಿಪ್ಪರ್ ತೆಗೆದು ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ. ಘಟನೆ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ಅಕಾಲಿದಳದ ನಾಯಕನಿಗೆ ಗುಂಡಿಕ್ಕಿ ಹತ್ಯೆ

