ಬೆಂಗಳೂರು: ನಕಲಿ ಔಷಧಿ ದಂಧೆಯ (Fake Medicine) ಕಿಂಗ್‌ಪಿನ್ ಪ್ರಶಾಂತ್‌ನನ್ನ ಎಸ್‌ಐಟಿ (SIT) ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿ ಪ್ರಶಾಂತ್ ಫೈಜರ್ ಕಂಪನಿಯ ಒರಿಜಿನಲ್ ಲೇಬಲ್‌ಗಳನ್ನು ಭಾರತಕ್ಕೆ ತಂದು ಬದಲಾವಣೆ ಮಾಡಿ ಔಷಧಗಳನ್ನ ಮಾರಾಟ ಮಾಡುತ್ತಿದ್ದ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ.
ನಕಲಿ ಔಷಧಿ ದಂಧೆ ಪ್ರಕರಣದ ಕಿಂಗ್‌ಪಿನ್ ಪ್ರಶಾಂತ್‌ನನ್ನ ಎಸ್‌ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯಿಂದ ಆರೋಪಿ ಪ್ರಶಾಂತ್ ಕಳ್ಳಾಟ ಬಟಾಬಯಲಾಗಿದೆ.
ಆರೋಪಿ ಟರ್ಕಿ ದೇಶಕ್ಕೆ ವರ್ಷದಲ್ಲಿ ಹತ್ತಾರು ಬಾರಿ ಹೋಗಿ ಬರುವುದು ಮಾಡುತ್ತಿದ್ದ. ಈ ಕಾರಣಕ್ಕೆ ಆತನ ವೀಸಾ ಕ್ಯಾನ್ಸಲ್ ಮಾಡಲಾಗಿತ್ತು. ಹಾಗಾಗಿ ಟರ್ಕಿ ದೇಶಕ್ಕೆ ಹೋಗುವುದಕ್ಕೆ ಆಗದೆ ಅಕ್ಕಪಕ್ಕದ ದೇಶಗಳಾದ ಅಜರ್ ಬೈಜಾನ್ ಸೇರಿ ಬೇರೆ ಬೇರೆ ದೇಶಗಳಿಗೆ ಹೋಗುತ್ತಿದ್ದ.
ಟರ್ಕಿ ದೇಶಕ್ಕೆ ಹೋಗುವುದಕ್ಕೆ ಆಗದೆ ಮಧ್ಯವರ್ತಿಗಳ ಬಳಿ ಟರ್ಕಿಯಿಂದ ಔಷಧಗಳ ಲೇಬಲ್ ತರಿಸಿಕೊಳ್ಳುತ್ತಿದ್ದ ಅನ್ನೋ ವಿಚಾರ ಎಸ್‌ಐಟಿ ಅಧಿಕಾರಿಗಳ ತನಿಖೆಯಿಂದ ತಿಳಿದು ಬಂದಿದೆ. ಟರ್ಕಿ ದೇಶದಲ್ಲಿ ಫೈಜರ್ ಕಂಪನಿಯ ಒರಿಜಿನಲ್ ಲೇಬಲ್‌ಗಳನ್ನು ತಯಾರಿಸಲಾಗುತ್ತದೆ. ಹಾಗಾಗಿ ಆರೋಪಿ ಪ್ರಶಾಂತ್ ಫೈಜರ್ ಕಂಪನಿ ಔಷಧಿಗಳ ಒರಿಜನಲ್ ಲೇಬಲ್ ತರುವುದಾಕ್ಕಾಗಿ ಟರ್ಕಿ ದೇಶಕ್ಕೆ ಹೋಗುತ್ತಿದ್ದ. ನಂತರ ನಮ್ಮ ದೇಶಕ್ಕೆ ತಂದು ಲೇಬಲ್ ಬದಲಾವಣೆ ಮಾಡಿ ಔಷಧಗಳನ್ನ ಮಾರಾಟ ಮಾಡುತ್ತಿದ್ದ.ಇದನ್ನೂ ಓದಿ: ಗಣಪತಿ ಶೋಭಾಯಾತ್ರೆಯಲ್ಲಿ ಮುರಿದು ಬಿದ್ದ ಕಮಾನು – ವೃದ್ಧನಿಗೆ ಗಂಭೀರ ಗಾಯ
ಈ ವಿಚಾರ ಎಸ್‌ಐಟಿ ಅಧಿಕಾರಿಗಳ ತನಿಖೆಯಿಂದ ತಿಳಿದುಬಂದಿದೆ. ನಕಲಿ ಔಷಧಿ ದಂಧೆಯ ಮತ್ತಷ್ಟು ಅಕ್ರಮಗಳನ್ನ ಬಯಲಿಗೆ ಏಳೆಯಲು ಆರೋಪಿಯನ್ನ ವಿವಿಧ ಆಯಾಮಗಳಲ್ಲಿ ಎಸ್‌ಐಟಿ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ.ಇದನ್ನೂ ಓದಿ: ಸಿಎಂ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ: ವಿಜಯೇಂದ್ರ ಕಿಡಿ

