ಚೆನ್ನೈ: ಪಾಕಿಸ್ತಾನಿ ಏಜೆಂಟ್‌ಗೆ (Pakistani Agent) ಸೂಕ್ಷ್ಮ ರಕ್ಷಣಾ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ 31 ವರ್ಷದ ಭಾರತೀಯ ನೌಕಾಪಡೆಯ ನಾವಿಕನನ್ನು (Indian Navy Sailor) ತಮಿಳುನಾಡಿನ (Tamil Nadu) ಕೊಯಮತ್ತೂರಿನಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಬಂಧಿತನನ್ನು ಪಶ್ಚಿಮ ಬಂಗಾಳ ಮೂಲದ ಪ್ರದೀಪ್ ಮುಖರ್ಜಿ ಎಂದು ಗುರುತಿಸಲಾಗಿದೆ. ಪ್ರದೀಪ್ ಮುಖರ್ಜಿ ಅವರು ವಿಶಾಖಪಟ್ಟಣಂನ ಪೂರ್ವ ನೌಕಾ ಕಮಾಂಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ನಿರ್ವಹಣಾ ಅಭಿವೃದ್ಧಿ ಕೋರ್ಸ್‌ನಲ್ಲಿ ಭಾಗವಹಿಸಲು ಕೊಯಮತ್ತೂರಿನ ಐಎನ್‌ಎಸ್ ಅಗ್ರಣಿಗೆ ತೆರಳಿದ್ದ ವೇಳೆ ಶನಿವಾರ ಬಂಧಿಸಲಾಗಿದೆ. ಐಎನ್‌ಎಸ್ ಅಗ್ರಣಿ ನೌಕಾಪಡೆಯ ನಾಯಕತ್ವ ತರಬೇತಿ ಕೇಂದ್ರವಾಗಿದೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಪಕ್ಷ ತೊರೆದಿದ್ದ ಮಾಜಿ ಸಂಸದೆ ಕೋಯಲ್ ಮಲಿಕ್‌ಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್
2014ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದ್ದ ಪ್ರದೀಪ್ ಸಾಮಾಜಿಕ ಜಾಲತಾಣದ ಮೂಲಕ ಪಾಕಿಸ್ತಾನಿ ಮಹಿಳಾ ಏಜೆಂಟ್‌ವೊಬ್ಬಳು `ಹನಿಟ್ರ‍್ಯಾಪ್’ ಮಾಡಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಇಬ್ಬರೂ ಸಂಪರ್ಕದಲ್ಲಿದ್ದರು. ಈ ಅವಧಿಯಲ್ಲಿ ಪ್ರದೀಪ್ ವಿಶಾಖಪಟ್ಟಣಂ ನೌಕಾನೆಲೆಯ ಕಾರ್ಯಾಚರಣಾ ವ್ಯವಸ್ಥೆ, ನೌಕಾಪಡೆಯ ಕಾರ್ಯತಂತ್ರದ ಆಸ್ತಿಗಳು ಹಾಗೂ ನೌಕಾಪಡೆಯ ಹಡಗುಗಳ ಚಲನವಲನಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದ ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರು ಕೆರೆಯಲ್ಲಿ ಮೀನುಗಳ ಮಾರಣಹೋಮ; ಕೆಮಿಕಲ್ ಮಿಶ್ರಣ ಶಂಕೆ
ಪ್ರದೀಪ್‌ನ ಡಿಜಿಟಲ್ ಚಟುವಟಿಕೆಗಳ ಮೇಲೆ ಆಂಧ್ರಪ್ರದೇಶ ಪೊಲೀಸ್‌ನ ಕೌಂಟರ್ ಇಂಟೆಲಿಜೆನ್ಸ್ (ಸಿಐ) ಸೆಲ್ ನಿಗಾ ಇಟ್ಟಿತ್ತು. ಗಡಿಯಾಚೆಗಿನ ಗೂಢಚಾರಿಕೆ ಮತ್ತು ಭಯೋತ್ಪಾದನಾ ಬೆದರಿಕೆಗಳನ್ನು ಎದುರಿಸುವ ವಿಶೇಷ ಘಟಕ ಇದಾಗಿದೆ. ಇದನ್ನೂ ಓದಿ: ಇ-ಕೆವೈಸಿಗೆ ಹಣ ಪಡೆದ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದು
ನೌಕಾಪಡೆಯ ಮತ್ತೊಬ್ಬ ಅಧಿಕಾರಿ ಬಂಧನ:
ಪ್ರದೀಪ್ ಮುಖರ್ಜಿ ಬಂಧನಕ್ಕೂ ಕೆಲ ತಿಂಗಳ ಹಿಂದೆ ಮತ್ತೊಬ್ಬ ನೌಕಾಪಡೆ ಅಧಿಕಾರಿ ಲ್ಯಾನ್ಸ್ ನಾಯಕ್ ಆದರ್ಶ್ ಕುಮಾರ್ ಅಲಿಯಾಸ್ ಲಕ್ಕಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಇದನ್ನೂ ಓದಿ: ಟಿಪ್ಪರ್ ಡಿಕ್ಕಿಯಾಗಿ ಟೋಲ್ ಪ್ಲಾಜಾ ಸಂಪೂರ್ಣ ನಜ್ಜುಗುಜ್ಜು
ಉತ್ತರ ಪ್ರದೇಶದ ಆಗ್ರಾ ಮೂಲದ ಆದರ್ಶ್ ಕುಮಾರ್‌ನನ್ನು ಈ ವರ್ಷದ ಮಾರ್ಚ್‌ನಲ್ಲಿ ಕೇರಳದ ಕೊಚ್ಚಿಯಲ್ಲಿ ಬಂಧಿಸಲಾಗಿತ್ತು. ಆದರ್ಶ್ ದಕ್ಷಿಣ ನೌಕಾ ಕಮಾಂಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮತ್ತು ಐಎಸ್‌ಐ ಏಜೆಂಟ್‌ನೊಂದಿಗೆ ಸಂಪರ್ಕದಲ್ಲಿದ್ದ ಎಂದು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತಿಳಿಸಿತ್ತು. ಇದನ್ನೂ ಓದಿ: ಟರ್ಕಿಯಿಂದ ಕಂಪನಿಯ ಒರಿಜಿನಲ್ ಲೇಬಲ್ ತಂದು ನಕಲಿ ಔಷಧಿ ಮಾರಾಟ; ಕಿಂಗ್‌ಪಿನ್ ಬಿಚ್ಚಿಟ್ಟ ಸ್ಫೋಟಕ ರಹಸ್ಯ
ರಾಜ್ಯದಲ್ಲಿ ಎಟಿಎಸ್ ನಡೆಸಿದ ತನಿಖೆಯಲ್ಲಿ ಆದರ್ಶ್ ಸೂಕ್ಷ್ಮ ಮಾಹಿತಿಯನ್ನು ಐಎಸ್‌ಐ ಏಜೆಂಟ್‌ಗೆ ನೀಡಿರುವುದು ಪತ್ತೆಯಾಗಿತ್ತು. ಹಣದ ಆಮಿಷಕ್ಕೆ ಒಳಗಾಗಿ ಯುದ್ಧನೌಕೆ ಸೇರಿದಂತೆ ಕಾರ್ಯತಂತ್ರದ ದೃಷ್ಟಿಯಿಂದ ಸೂಕ್ಷ್ಮವಾಗಿರುವ ನೌಕಾಪಡೆಯ ಆಸ್ತಿಗಳ ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದ ಎನ್ನಲಾಗಿದೆ. ನಂತರ ಆದರ್ಶ್ ಕುಮಾರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದನ್ನೂ ಓದಿ: ಪಂಜಾಬ್‌ನಲ್ಲಿ ಅಕಾಲಿದಳದ ನಾಯಕನಿಗೆ ಗುಂಡಿಕ್ಕಿ ಹತ್ಯೆ

