ಬೆಂಗಳೂರು: ಇ-ಕೆವೈಸಿಗೆ (e-KYC) ಹಣ ಪಡೆದ ನ್ಯಾಯಬೆಲೆ ಅಂಗಡಿ (Ration Shop) ಪರವಾನಗಿಯನ್ನು ರದ್ದು ಮಾಡಲಾಗಿದೆ.
ಬೆಂಗಳೂರು ದಕ್ಷಿಣ ವಲಯದ ಚಂದ್ರಪ್ಪನಗರ ಆರ್ಸಿಎಚ್ಎಸ್ನ ನ್ಯಾಯಬೆಲೆ ಅಂಗಡಿ ಲೈಸೆನ್ಸ್ ಅನ್ನು ಆಹಾರ ನಾಗರಿಕ ಸರಬರಾಜು ಇಲಾಖೆ ರದ್ದುಗೊಳಿಸಿದೆ. ಇದನ್ನೂ ಓದಿ: ಟರ್ಕಿಯಿಂದ ಕಂಪನಿಯ ಒರಿಜಿನಲ್ ಲೇಬಲ್ ತಂದು ನಕಲಿ ಔಷಧಿ ಮಾರಾಟ; ಕಿಂಗ್ಪಿನ್ ಬಿಚ್ಚಿಟ್ಟ ಸ್ಫೋಟಕ ರಹಸ್ಯ
ಸಂಖ್ಯೆ ಬಿಎಲ್ಎಸ್ 272ರ ಪರವಾನಗಿ ರದ್ದುಗೊಂಡಿದೆ. ಪಡಿತರ ಚೀಟಿದಾರರೊಬ್ಬರಿಂದ ಇ-ಕೆವೈಸಿ ಮಾಡಿಸಲು 500 ರೂ. ಹಣ ಪಡೆದ ಆರೋಪವಿತ್ತು.
ಮುಂದೆ ಇಂತಹ ದೂರುಗಳು ಬಂದರೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಇಲಾಖೆ ಖಡಕ್ ವಾರ್ನಿಂಗ್ ನೀಡಿದೆ. ಇದನ್ನೂ ಓದಿ: ಸಿಎಂ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ: ವಿಜಯೇಂದ್ರ ಕಿಡಿ

