– 200 ಮನೆಗಳಿಗೆ ಕಾದಿದ್ದ ಅಪಾಯ, ರಾತ್ರೋ ರಾತ್ರಿ 1,000 ಮಂದಿ ಸ್ಥಳಾಂತರ
ಕಠ್ಮಂಡು: ಕಳೆದ ಆಗಸ್ಟ್ನಲ್ಲಿ ನೇಪಾಳದಲ್ಲಿ ಸಂಭವಿಸಿದ್ದ ಭೀಕರ ಹಠಾತ್ ಪ್ರವಾಹ (Nepal Flood) ಹಾಗೂ ಭೂಕುಸಿತ 1,450ಕ್ಕೂ ಹೆಚ್ಚು ಜನರ ಪ್ರಾಣ ಬಲಿ ಪಡೆದುಕೊಂಡಿತ್ತು. 5,800ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಇನ್ನೂ ಹುಡುಕಾಟ ನಡೆಯುತ್ತಿದೆ. ಈ ಘಟನೆ ಮಾಸುವ ಮುನ್ನವೇ ನೇಪಾಳದಲ್ಲಿ ಮತ್ತೊಂದು ಪ್ರವಾಹ ಉಂಟಾಗಿದೆ.
ನೇಪಾಳದಲ್ಲಿ ಕಳೆದ ಕೆಲ ದಿನಗಳಿಂದ ಮತ್ತೆ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದು, ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ. ಧಾರಾಕಾರ ಮಳೆಯಿಂದ ದೇಶದ ಹಲವೆಡೆ ವ್ಯಾಪಕ ಪ್ರವಾಹ ಉಂಟಾಗಿದ್ದು, ಮನೆಗಳು ಹಾನಿಗೊಳಗಾಗಿವೆ. ರಸ್ತೆ ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಗಿದೆ.
🚨 NEPAL: AN ENTIRE MOUNTAINSIDE COLLAPSES IN SECONDS
A massive landslide has struck Nepal — and the footage is almost unbelievable.
In seconds, an entire mountainside appears to give way, sending a terrifying wall of earth and debris crashing downhill.
Floods. Avalanches.… pic.twitter.com/qma1KtKQl8
— NGO-SUGAR (@ngosugartp) September 28, 2026
8 ಸೆಕೆಂಡುಗಳಲ್ಲಿ ಕುಸಿದ ಪರ್ವತ
ಇನ್ನೂ ನೇಪಾಳದಲ್ಲಿ ಸಂಭವಿಸಿದ ಮತ್ತೊಂದು ಭೂಕುಸಿತ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿದೆ. ಪರ್ವತ ಇಳಿಜಾರಿನ ಪ್ರದೇಶವೊಂದು ಕೆಲವೇ ಸೆಕೆಂಡುಗಳಲ್ಲಿ ಕುಸಿದು ಜನ ಆತಂಕಕ್ಕೀಡಾದ ವಿಡಿಯೋ ಇದಾಗಿದೆ. ಇಳಿಜಾರಿನ ಒಂದು ಭಾಗವೇ ಸಂಪೂರ್ಣ ಕುಸಿದು ಕೆಳಕ್ಕೆ ಜಾರಿರುವುದು ಕಂಡು ಜನ ದಿಕ್ಕಾಪಾಲಾಗಿ ಓಡಿದ್ದಾರೆ ವಿಡಿಯೋದಲ್ಲಿ ಕಂಡುಬಂದಿದೆ.
ಭೂಕುಸಿತಕ್ಕೆ 5 ಬಲಿ
ಶನಿವಾರ ರಾತ್ರಿ ಪಾಲ್ಪಾ ಜಿಲ್ಲೆಯ ಮಠಗಢಿ ಗ್ರಾಮೀಣ ಪುರಸಭೆ ವ್ಯಾಪ್ತಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ (landslide) ಐವರು ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಅವರ ಮೃತದೇಹಗಳನ್ನ ಹೊರತೆಗೆಯಲಾಗಿದೆ. ಇದರೊಂದಿಗೆ ಕಳೆದ 4 ದಿನಗಳಲ್ಲಿ ಪ್ರವಾಹ, ಭೂಕುಸಿತ ಹಾಗೂ ಸಿಡಿಲು ಸೇರಿದಂತೆ ವಿವಿಧ ಮಳೆ ಸಂಬಂಧಿತ ಘಟನೆಗಳಲ್ಲಿ 16 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಇತ್ತೀಚಿನ ಹವಾಮಾನ ವೈಪರೀತ್ಯದಿಂದ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
🚨 NEPAL IS BEING HIT FROM BOTH ENDS OF THE HIMALAYAS.
Floods and landslides below. Avalanches above.
At least 70 people are dead across Nepal and India after relentless rain. In Nepal alone, 49 of 77 districts are now under flash-flood threat — while a deadly avalanche has… https://t.co/QOJwhLB4WF pic.twitter.com/8wAdZ7LWxl
— NGO-SUGAR (@ngosugartp) September 27, 2026
1,284 ಮಂದಿ ರಕ್ಷಣೆ
ನೇಪಾಳದಲ್ಲಿ ಕಳೆದ 5 ದಿನಗಳಲ್ಲಿ 439 ಮಳೆ ಸಂಬಂಧಿತ ಘಟನೆಗಳು ವರದಿಯಾಗಿವೆ. ಪ್ರವಾಹ ಹಾಗೂ ಭೂಕುಸಿತದಿಂದ ಅಲ್ಲಲ್ಲಿ ಸಿಲುಕಿದ್ದ 1,284 ಮಂದಿಯನ್ನ ಭದ್ರತಾ ಸಿಬ್ಬಂದಿ ರಕ್ಷಿಸಿದ್ದಾರೆ.
ಲುಂಬಿನಿ ಪ್ರಾಂತ್ಯದ ರೂಪಂದೇಹಿ ಜಿಲ್ಲೆಯಲ್ಲಿ ಟಿನಾವು ನದಿ ಅಪಾಯದ ಮಟ್ಟ ಮೀರಿ ಹರಿದ ಪರಿಣಾಮ, ಶನಿವಾರ ರಾತ್ರಿ ಬುಟ್ವಾಲ್ನಲ್ಲಿ 6 ಮನೆಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ. ನದಿಗಳು ಹಾಗೂ ಹಳ್ಳಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಸುಮಾರು 200 ಮನೆಗಳಿಗೆ ಅಪಾಯ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ರಾತ್ರೋರಾತ್ರಿ ಸುಮಾರು 1,000 ಮಂದಿಯನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.

