– ಯಾರೋ 4 ಜನರಿಗೋಸ್ಕರ, ಕೋಟಿ ಕೋಟಿ ಕನ್ನಡಿಗರ ಕಳೆದುಕೊಳ್ಳಲ್ಲ; ಸ್ಪರ್ಧಿಗಳಿಗೆ ಖಡಕ್ ಕ್ಲಾಸ್
ಮಾಡರ್ನ್ ಮಹಾಕವಿ ಮಂಜ (Mordern Mahakavi Manja) ಸೇರಿದಂತೆ ಬಿಗ್ ಬಾಸ್ ಮನೆಮಂದಿಗೆ ಚಳಿ ಬಿಡಿಸಿದ್ದಾರೆ ಕಿಚ್ಚ ಸುದೀಪ್ (Kiccha Sudeep). ‘ಯಾರೋ ನಾಲ್ಕು ಜನರಿಗೋಸ್ಕರ, ಕೋಟಿ ಕೋಟಿ ಕನ್ನಡಿಗರನ್ನು ಕಳೆದುಕೊಳ್ಳಲು ನಮಗೆ ಇಷ್ಟ ಇಲ್ಲ’ ಅಂತ ಮನೆಯವರಿಗೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದಾರೆ.
ವಾರದ ಕಥೆ ಕಿಚ್ಚನ ಜೊತೆ ಪ್ರೋಮೊ ರಿಲೀಸ್ ಆಗಿದ್ದು, ದೊಡ್ಮನೆ ಸ್ಪರ್ಧಿಗಳಿಗೆ ಕಿಚ್ಚ ಚಳಿ ಬಿಡಿಸಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ನಾನಾ ಕಾರಣಗಳಿಗೆ ಪರಸ್ಪರ ಕಿತ್ತಾಡಿಕೊಂಡಿದ್ದರು. ಮನೆ ಅವ್ಯವಸ್ಥೆ ಆಗರದಂತೆ ಭಾಸವಾಯಿತು. ಆಟದ ವೇಳೆ ಮಂಜನಿಗೆ ಸೌಂದರ್ಯ ಶೆಟ್ಟಿ ಹೊಡೆದಿದ್ದು, ಇದೇ ವಿಚಾರವಾಗಿ ಉಸ್ತುವಾರಿಗಳನ್ನು ಮಂಜ ನಿಂದಿಸಿದ್ದು, ಆಟದ ಉಸ್ತುವಾರಿ ವಿಚಾರಕ್ಕೆ ಕಿರಣ್ ಶಾಸ್ತ್ರಿ ಎಲ್ಲರ ಮೇಲೆ ಪದೇ ಪದೆ ಗರಂ ಆಗಿದ್ದು, ಮೊಟ್ಟೆ ವಿಚಾರಕ್ಕೆ ಮಂಜ ಮತ್ತು ಲಿಖಿತ್ ವಿರುದ್ಧ ಬೇಸರಗೊಂಡು ಮನೆಯಿಂದಲೇ ಹೊರಹೋಗುತ್ತೇನೆಂದು ಅವಿನಾಶ್ ರಂಪಾಟ ಮಾಡಿದ್ದು.. ಇದೆಲ್ಲ ವಿಚಾರವಾಗಿ ಮನೆಯವರಿಗೆ ಕಿಚ್ಚ ಕ್ಲಾಸ್ ತೆಗೆದುಕೊಂಡಂತೆ ಕಾಣುತ್ತಿದೆ.
ಇದು ತಪ್ಪು ಮಾಡಿದವರಿಗೆ ದಂಡನೆ…!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKPromo pic.twitter.com/Pjpk34SyBf
— Colors Kannada (@ColorsKannada) September 19, 2026
ಮಂಜನಿಗೆ ಆತನ ಶೈಲಿಯಲ್ಲೇ ಸುದೀಪ್ ಟಾಂಗ್ ಕೊಡುತ್ತಾರೆ. ಈ ವೇಳೆ, ಅಣ್ಣ ಎಂದು ಕರೆದ ಮಂಜನಿಗೆ ಸುದೀಪ್, ‘ನಾನು ಅಣ್ಣ ಅಂತ ಎನಿಸಿಕೊಳ್ಳಬೇಕಾದರೆ ತಮ್ಮನಿಗೆ ಕೆಲವು ಬೆಲೆ ಇರಬೇಕು ಸರ್’ ಅಂತ ಕಾಲೆಳೆಯುತ್ತಾರೆ. ಮನೆ ಸದಸ್ಯರು ಅಂತ ಮಾತು ಮುಂದುವರಿಸಿದ ಮಂಜನಿಗೆ ಆತ ಮನೆಮಂದಿ ವಿರುದ್ಧ ಬಳಸುತ್ತಿದ್ದ ಪದಗಳನ್ನೇ ಉಪಯೋಗಿಸಿ ಕಿಚ್ಚ ಟಾಂಗ್ ಕೊಟ್ಟಿದ್ದಾರೆ.
‘ಇಷ್ಟು ಜನ ಶೋನ ನೋಡ್ತಾ ಇದ್ದಾರೆ ಅಂತ ತಾನೆ ನೀವು ಹಿಂಗೆಲ್ಲ ಆಡ್ತಿರೋದು. ಅಷ್ಟು ಜನ 12 ಸೀಸನ್ನಿಂದ ಸಂಪಾದಿಸಿರುವ ಆಸ್ತಿ. ಯಾರೋ ನಾಲ್ಕು ಜನರಿಗೋಸ್ಕರ, ಕೋಟಿ ಕೋಟಿ ಕನ್ನಡಿಗರನ್ನು ಕಳೆದುಕೊಳ್ಳಲು ನಾವ್ಯಾರು ತಯಾರಿಲ್ಲ’ ಅಂತ ಮನೆಯವರ ನಡವಳಿಕೆಗೆ ಸುದೀಪ್ ಗರಂ ಆಗಿದ್ದಾರೆ.

