- ಬೆಲೆ ಏರಿಕೆ ಮಾತ್ರ; ಜನಹಿತದ ಕಾರ್ಯಕ್ರಮ ಮಾಡುತ್ತಿಲ್ಲ: ಪಿ.ಸಿ.ಮೋಹನ್ ಟೀಕೆ
ಬೆಂಗಳೂರು: ಸಿಎಂ ಡಿ.ಕೆ.ಶಿವಕುಮಾರ್ (D.K Shivakumar) ನೇತೃತ್ವದ ರಾಜ್ಯ ಸರ್ಕಾರ ಜನಹಿತದ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ ಎಂದು ಸಂಸದ ಪಿ.ಸಿ ಮೋಹನ್ (P.C. Mohan) ಅವರು ಟೀಕಿಸಿದರು.
ಬೆಂಗಳೂರು (Bengaluru) ಕೇಂದ್ರ ಜಿಲ್ಲೆಯ ಗಾಂಧಿನಗರ ಮಂಡಲದ ಬಿನ್ನಿಪೇಟೆ ವಾರ್ಡ್‌ನ ವಿಶ್ವಕರ್ಮ ಸಮುದಾಯ ಭವನದಲ್ಲಿ ‘ಸೇವಾ ಸಂಕಲ್ಪ ಅಭಿಯಾನ’ದಡಿ ರಕ್ತದಾನ ಶಿಬಿರ ಮತ್ತು ಆರೋಗ್ಯ ಶಿಬಿರದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 76ನೇ ಜನ್ಮದಿನ ಹಾಗೂ ಆಡಳಿತದ ವಿವಿಧ ಹುದ್ದೆಗಳಲ್ಲಿ 25 ವರ್ಷಗಳ ನಿರಂತರ ಜನಸೇವೆಯ ಪ್ರಯಾಣವನ್ನು ಸ್ಮರಿಸುವ ಅಂಗವಾಗಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ಇದನ್ನೂ ಓದಿ: ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಪರಮೇಶ್ವರ್
ಬರ (Drought) ಇದೆ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ರಾಜ್ಯ ಸರ್ಕಾರ ಏನು ಕೊಡಬೇಕೋ ಅದನ್ನು ಕೊಡಲಿ. ಬಳಿಕ ಕೇಂದ್ರ ಸರ್ಕಾರದ ಬಳಿ ನಿಯೋಗ ಕೊಂಡೊಯ್ಯಲಿ. ಬರ ಪರಿಹಾರ ವಿಚಾರದಲ್ಲಿ ರಾಜಕೀಯ (Politics) ಸಲ್ಲದು. ಐದು ಗ್ಯಾರಂಟಿಗೆ ಹಣ ಸಂಗ್ರಹಿಸಲು ಸರ್ಕಾರ ಎಲ್ಲಾ ವಸ್ತುಗಳ ಮೇಲೆ ದರ ಏರಿಸುತ್ತಿದೆ. ಅಲ್ಲದೇ ತೆರಿಗೆ ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಹಾಲಿನ ದರ, ವಿದ್ಯುತ್, ನೀರಿನ ದರ ಹೆಚ್ಚಿಸಿದ್ದಾರೆ. ಆಸ್ಪತ್ರೆಗೆ ಹೋದರೂ ಅಲ್ಲಿನ ದರ ಏರಿಸಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಗೈಡೆನ್ಸ್ ವ್ಯಾಲ್ಯೂ ಜಾಸ್ತಿ ಮಾಡಿದ್ದಾರೆ. ನೋಂದಣಿ ಶುಲ್ಕವೂ ಹೆಚ್ಚಾಗಿದೆ. ಒಂದು ನೂರಕ್ಕೂ ಹೆಚ್ಚು ದಿನಬಳಕೆ ವಸ್ತುಗಳ ದರ ಏರಿಸಿದ್ದಾರೆ.
ಬಸ್ಸುಗಳ ಪ್ರಯಾಣ ಮಹಿಳೆಯರಿಗೆ ಉಚಿತ ಎನ್ನುತ್ತಾರೆ; ಗಂಡಸರಿಗೆ ಪ್ರಯಾಣದರ ಜಾಸ್ತಿ ಮಾಡುತ್ತಾರೆ. ಅರ್ಧದಷ್ಟು ಬಸ್ಸುಗಳನ್ನು ಕೂಡ ನಿಲ್ಲಿಸಿದ್ದಾರೆ. ಇಂತಹ ಪರಿಸ್ಥಿತಿ ಇರುವಾಗ ಇದನ್ನೆಲ್ಲ ಸುಧಾರಿಸೋದು ಬಿಟ್ಟು ಈ ರಾಜ್ಯ ಸರ್ಕಾರದವರು ಕೇಂದ್ರ ಸರ್ಕಾರದ ಕಡೆ ಬೊಟ್ಟು ತೋರಿಸೋದು ತಪ್ಪು ಎಂದು ಆಕ್ಷೇಪಿಸಿದರು.
ಯುಪಿಐ ಚಾರ್ಜಸ್ ಅತ್ಯಂತ ಕನಿಷ್ಠ ಇದೆ. ಇದರಲ್ಲಿ ಕಾಂಗ್ರೆಸ್ಸಿನವರು ರಾಜಕೀಯ ಮಾಡುತ್ತಿದ್ದಾರೆ. ಭಾರತೀಯ ಜನತಾ ಪಾರ್ಟಿ ಮತ್ತೆ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಅವರು ಇನ್ನೊಂದು ಸಲ ಪ್ರಧಾನಮಂತ್ರಿಯಾಗಿ ಒಳ್ಳೆಯ ಕೆಲಸಗಳನ್ನು ಮುಂದುವರಿಸಬೇಕು ಎಂದು ಆಶಿಸಿದರು.
ಇದೇ ವೇಳೆ, ಪಕ್ಷವು ಹಮ್ಮಿಕೊಂಡಿರುವ ಸೇವಾ ಸಂಕಲ್ಪ ಅಭಿಯಾನದ ಕುರಿತು ಅವರು ಮಾಹಿತಿ ನೀಡಿದರು. ಬೆಂಗಳೂರಿನ ಯೋಜಿತ ಅಭಿವೃದ್ಧಿ ಕಾರ್ಯ ನಡೆಸಬೇಕೆಂದು ಅವರು ಒತ್ತಾಯಿಸಿದರು. ಇದನ್ನೂ ಓದಿ: ಡಿಕೆಶಿ ಮನಸ್ಸು ಮಾಡಿದ್ರೆ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು: ಹೆಚ್‌ಡಿಕೆ

