ದಾವಣಗೆರೆ: ಮಹಿಳೆಯೊಬ್ಬಳು (Woman) ಕುಡಿದ ಮತ್ತಲ್ಲಿ ಸೀರೆಯಲ್ಲಿ ಕತ್ತು ಬಿಗಿದು ಪ್ರಿಯಕರನನ್ನು (Lover) ಹತ್ಯೆಗೈದ ಘಟನೆ ದಾವಣಗೆರೆ (Davanagere) ನಗರದ ನಾಗಮ್ಮ ಕೇಶವಮೂರ್ತಿ ಬಡಾವಣೆಯಲ್ಲಿ ನಡೆದಿದೆ.
ಮಂಜಪ್ಪ (40) ಕೊಲೆಯಾದ (Murder) ದುರ್ದೈವಿ. ಶಬೀನಾ (38) ಕೊಲೆಗೈದ ಆರೋಪಿ. ಮದ್ಯ ಸೇವಿಸಿದ ಅಮಲಿನಲ್ಲಿ ಮಹಿಳೆ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಲಾಡ್ಜ್ನಲ್ಲಿ ಹೆಂಡತಿ ಕೊಂದು ಪರಾರಿಯಾಗಿದ್ದ ಗಂಡ ಆತ್ಮಹತ್ಯೆ
ಮಂಜಪ್ಪ ಪತ್ನಿ ಹಾಗೂ ಮಕ್ಕಳಿಂದ ದೂರವಿದ್ದ. ಕಳೆದ 6 ವರ್ಷಗಳಿಂದ ವಿಚ್ಛೇದಿತ ಮಹಿಳೆ ಶಬೀನಾ ಜೊತೆಗೆ ವಾಸವಾಗಿದ್ದ. ಹದಡಿ ಠಾಣೆ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಬೆಳಗಾವಿ | ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ, ಮಗಳ ಬರ್ಬರ ಹತ್ಯೆಗೈದಿದ್ದ ಆರೋಪಿಗಳು ಅಂದರ್

