ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ರಾಜಯಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ನಡೆದಿದೆ. ಇಲ್ಲಿನ ರೆಜಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಣ ಘೋಷಿಸಿದ್ದ ಅಭ್ಯರ್ಥಿ ರಬಿಯುಲ್ ಆಲಂ ಚೌಧರಿ ತಮ್ಮ ಉಮೇದುವಾರಿಕೆಯನ್ನ ಹಿಂಪಡೆದಿದ್ದಾರೆ.
ಅ.6 ರಂದು ಈ ಕ್ಷೇತ್ರಕ್ಕೆ ಉಪಚುನಾವಣೆ (Bypoll) ನಡೆಯಲಿದ್ದು, ಅದಕ್ಕೂ ಮುನ್ನವೇ ಮಹತ್ವದ ಬೆಳವಣಿಗೆ ನಡೆದಿದೆ.
ಸೆ.13 ರಂದು ನಂದಿಗ್ರಾಮದ ಅಭ್ಯರ್ಥಿಯನ್ನಾಗಿ ಸಂಚಿತಾ ಪ್ರಧಾನ್ ಹಾಗೂ ರೆಜಿನಗರ ಅಭ್ಯರ್ಥಿಯನ್ನಾಗಿ (Rejinagar Candidate) ಚೌಧರಿ ಹೆಸರನ್ನ ಘೋಷಣೆ ಮಾಡಲಾಗಿತ್ತು. ಆದ್ರೆ ನಂದಿಗ್ರಾಮದಿಂದ ಸಂಚಿತಾ ಪ್ರಧಾನ್ ತಮ್ಮ ನಾಮಪತ್ರ ಹಿಂಪಡೆದರು. ಶುಕ್ರವಾರ (ನಿನ್ನೆ) ಮಧ್ಯಾಹ್ನ ರಾಜ್ಯ ಸಚಿವಾಲಯವಾದಲ್ಲಿ ಬಂಗಾಳ ಸಿಎಂ ಸುವೇಂದು ಅಧಿಕಾರಿ ಪ್ರಧಾನ್ ಅವರನ್ನು ಭೇಟಿ ಮಾಡಿದ ಬಳಿಕ ಸ್ಪರ್ಧೆಯಿಂದ ಹಿಂದೆ ಸರಿದರು.

ನಂದಿಗ್ರಾಮದ ಈ ಬೆಳವಣಿಗೆಯ ನಂತರ, ತಮ್ಮ ಬಣವು ಆ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಮತ್ತು ಬದಲಾಗಿ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನ ಬೆಂಬಲಿಸುವುದಾಗಿ ಎಂದು ಮಮತಾ ಬ್ಯಾನರ್ಜಿ ಘೋಷಿಸಿದರು. ಈ ಬೆಳವಣಿಗೆ ನಡೆದ ಮರುದಿನವೇ ಚೌಧರಿ ಕೂಡ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.
ಈ ಎರಡು ಕ್ಷೇತ್ರಗಳಿಗೆ ಅಕ್ಟೋಬರ್ 6 ರಂದು ಉಪಚುನಾವಣೆ ನಡೆಯಲಿದ್ದು, ಅಕ್ಟೋಬರ್ 9 ರಂದು ಮತ ಎಣಿಕೆ ನಡೆಯಲಿದೆ.

