ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ(Monsoon Rain) ಕೊರತೆಯಿಂದಾಗಿ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ನೆರವಾಗಲು ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಮೊದಲ ಹಂತದ ಬಳಿಕ ಇದೀಗ ರಾಜ್ಯದ ಇನ್ನೂ 23 ತಾಲೂಕುಗಳನ್ನು ಬರಪೀಡಿತ(Drought-Hit Taluk) ಎಂದು ಸರ್ಕಾರ (Karnataka Government) ಅಧಿಕೃತವಾಗಿ ಘೋಷಿಸಿ ಆದೇಶ ಹೊರಡಿಸಿದೆ.
ಕಳೆದ ಆಗಸ್ಟ್ 27 ರಂದು ಹೊರಡಿಸಲಾಗಿದ್ದ ಮೊದಲ ಹಂತದ ಅಧಿಸೂಚನೆಯಲ್ಲಿ 101 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿತ್ತು. ತದನಂತರ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (KSNDMC) ಉಳಿದ 139 ತಾಲೂಕುಗಳಲ್ಲಿ ವೈಜ್ಞಾನಿಕ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ಸಮಗ್ರ ವರದಿ ಹಾಗೂ ‘ಗ್ರೌಂಡ್ ಟ್ರೂಥಿಂಗ್’ (ಸ್ಥಳ ಪರಿಶೀಲನೆ) ಪ್ರಕ್ರಿಯೆಯ ಆಧಾರದ ಮೇಲೆ ಸರ್ಕಾರ ಹೊಸದಾಗಿ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ.
ಈ 23 ತಾಲೂಕುಗಳ ಪೈಕಿ 21 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 2 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ವರ್ಗೀಕರಿಸಲಾಗಿದೆ. ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಮುಂದಿನ ಆರು ತಿಂಗಳ ಅವಧಿಯವರೆಗೆ ಅನ್ವಯವಾಗಲಿದೆ. ಇದನ್ನೂ ಓದಿ: ಜನನ – ಮರಣ ನೋಂದಣಿ ವಿಳಂಬಕ್ಕೆ ಹೊಸ ನಿಯಮ; ಅ.1 ರಿಂದ ಜಾರಿ

ತೀವ್ರ ಬರಪೀಡಿತ 21 ತಾಲೂಕುಗಳ ಪಟ್ಟಿ:
ಕಲಬುರಗಿ: ಅಫಜಲಪುರ, ಆಳಂದ, ಚಿತ್ತಾಪುರ, ಕಲಬುರಗಿ, ಯಡ್ರಾಮಿ ಮತ್ತು ಶಹಾಬಾದ್
ಧಾರವಾಡ: ಹುಬ್ಬಳ್ಳಿ, ನವಲಗುಂದ, ಹುಬ್ಬಳ್ಳಿ ನಗರ ಮತ್ತು ಅಣ್ಣಿಗೇರಿ
ರಾಯಚೂರು: ಮಾನ್ವಿ, ಸಿಂಧನೂರು ಮತ್ತು ಸಿರವಾರ
ವಿಜಯಪುರ:ಬಸವನಬಾಗೇವಾಡಿ, ಬಬಲೇಶ್ವರ ಮತ್ತು ತಿಕೋಟಾ
ತುಮಕೂರು: ತಿಪಟೂರು
ಕೊಪ್ಪಳ: ಕಾರಟಗಿ
ಬೀದರ್: ಭಾಲ್ಕಿ
ಹಾವೇರಿ: ರಟ್ಟೀಹಳ್ಳಿ
ಚಿಕ್ಕಮಗಳೂರು: ಕಡೂರು
ಸಾಧಾರಣ ಬರಪೀಡಿತ 2 ತಾಲೂಕುಗಳು:
ಕೊಡಗು: ಪೊನ್ನಂಪೇಟೆ ಮತ್ತು ವೀರಾಜಪೇಟೆ

